25th July 2024
Share

TUMAKURU:SHAKTHIPEETA FOUNDATION

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಶ್ರೀಮತಿ ಅಶ್ವಿಜ ರವರು ಹೊಸದಾಗಿ ಬಂದಿದ್ದಾರೆ. ನಾನು ಅವರನ್ನು ಭೇಟಿ ಮಾಡಲು ಕಚೇರಿಗೆ ಹೋಗಿದ್ದೆ. ಅವರು ಸಭೆಯೊಂದರಲ್ಲಿ ಇದ್ದರು. ಅವರ ಪಿಎ ಗೆ ಹೇಳಿ ಮೇಡಂ ಭೇಟಿಗೆ ಸಮಯ ತಿಳಸಪ್ಪಾ ಎಂದು ಹೇಳಿ ಬಂದೆ.

ಆತ ಫೋನ್ ಮಾಡಲಿಲ್ಲ. ಬೆಳಿಗ್ಗೆ ಒಂದು ಮೆಸೇಜ್ ಹಾಕಿದೆ. ಆತನ ಮರು ಉತ್ತರ ಸಾರ್ ಮೇಡಂ ರಾತ್ರಿ 2 ಗಂಟೆವರೆಗೂ ನಗರದಲ್ಲಿ ಮಳೆ ಬಿದ್ದು ಅನಾಹುತವಾದ ಕಡೆ ವೀಕ್ಷಣೆ ಮಾಡಿದರು. ನಾನು ವಿಚಾರ ತಿಳಿಸಲಿಲ್ಲ ಎಂದಾಗ ನನಗೆ ಆಶ್ಚರ್ಯವಾಯಿತು.

ಈ ಡೈರೆಕ್ಟ್  ಐ.ಎ.ಎಸ್ ನವರು ವಿಚಿತ್ರದವರು. ಒಬ್ಬೊಬ್ಬರು ಒಂದೊಂದು ಕಥೆ. ತುಮಕೂರು ಇತಿಹಾಸದಲ್ಲಿ ನಾನು ಗಮನಿಸಿದ್ದೇನೆ. ನಂತರ ಹೇಗೆ ವೀಕ್ಷಣೆ ಮಾಡಿದಿÀರಿ ಎಂದಾಗ ಆತ ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‍ನಲ್ಲಿ ಡಾಟಾ ಅನಾಲೀಸಿಸ್ ಮಾಡಿ. ನಗರದಲ್ಲಿ ಎಲ್ಲೆಲ್ಲಿ ನೀರು ನಿಂತಿದೆ ಎಂಬ ಮಾಹಿತಿ ಪಡೆದು ಆ ಪ್ರಕಾರ ವೀಕ್ಷಣೆ ಮಾಡಲಾಯಿತು ಎಂದಾಗ ನನಗೆ ಖುಷಿಯಾಯಿತು.

ನಿಜಕ್ಕೂ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಕಂಡ ಕನಸನ್ನು ತುಮಕೂರಿನ ಒಬ್ಬ ಅಧಿಕಾರಿ ಪಾಲಿಸಿದರಲ್ಲ ಎಂದುಕೊಂಡು. ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‍ನ ಶ್ರೀ ಅಶ್ವಿನ್ ರವರಿಗೆ ಕರೆ ಮಾಡಿದೆ.

ಅಶ್ವಿನ್ ಒಂದು ಪಟ್ಟಿಯನ್ನೇ ನೀಡಿದರು. ನಂತರ ಸಾರ್ ನೀವು ಹೇಳುತ್ತಿದ್ದ ಕೆಲಸಗಳನ್ನು ಆರಂಭಿಸಿದ್ದೇವೆ. ಈಗ ನಿಮ್ಮ ಸಲಹೆ ಅಗತ್ಯ ಸಾರ್ ಎಂದಾಗ ನನಗೆ ಹೆಮ್ಮೆ ಎನಿಸಿತು.

ತುಮಕೂರಿನ  ಇತಿಹಾಸದಲ್ಲಿ ಪ್ರತಿ ಶುಕ್ರವಾರ ಸಂಜೆ 4 ಗಂಟೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್, ಪಾಲಿಕೆ ಆಯುಕ್ತರು, ಸ್ಮಾರ್ಟ್ ದಸಿಟಿ ಎಂಡಿ ಸೇರಿದಂತೆ ಎಲ್ಲಾ ಅಧಿಕಾರಿಗಳ ಸಮೇತ ಸಭೆ ನಡೆಸುತ್ತಿದ್ದೆವು. ಸುಮಾರು 10-15 ಸಭೆ ಮಾಡಿದೆವು. ಈ ಕೊರಾನಾ ಮಹಾಮಾರಿಯಿಂದ ಸಭೆ ನಿಲ್ಲಿಸಿದೆವು.

ನಂತರ ಒಂದು ದಿವಸ ಒಬ್ಬ ಅಧಿಕಾರಿ ನನಗೆ ಕೈಮುಗಿದು ಸಾರ್ ಇನ್ನು ನಿಮ್ಮಷ್ಟು ಪರಿಪೂರ್ಣ ಮಾಹಿತಿ ನಮಗೆ ಇಲ್ಲ. ಸ್ವಲ್ಪ ಸಮಯ ನೀಡಿ ಎಂದಾಗ ಇವರ ಹಣೆ ಬರಹ ಇಷ್ಟೆ ಎಂದು ಸುಮ್ಮನಾಗಿದ್ದೆ.

ದಿನಾಂಕ:01.09.2023 ರಂದು ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ, ಎಲ್ಲಾ ವಿಶೇಷತೆಗಳ ಬಗ್ಗೆ ಜನರಿಗೆ ಮನವರಿಕೆ/ ಜಾಗೃತಿ ಮೂಡಿಸುವುದರ ಜೊತೆಗೆ, ನಂಬರ್ ಒನ್ ಕರ್ನಾಟಕದ ಕನಸಿನ ಫೈಲಟ್ ಯೋಜನೆಯಾಗಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಯೋಜನೆಗಳ ಬಗ್ಗೆ ಜನರೊಂದಿಗೆ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಿದ್ದೇನೆ.