22nd December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಪರಿಕಲ್ಪನೆಗೆ ಅನುಗುಣವಾಗಿ, ಶಕ್ತಿಭವನದ ನೂತನ ಕಟ್ಟಡಕ್ಕೆ ಇಂಟೀರಿಯರ್ ಮತ್ತು ಎಕ್ಸ್‍ಟೀರಿಯರ್ ಸಲಹೆ ಸೂಚನೆ ನೀಡಲು ಆಸಕ್ತರಿಗೆ ಬಹಿರಂಗ ಮನವಿ ಮಾಡಲಾಗಿದೆ.

  ಈಗಾಗಲೇ ಹಲವಾರು ಜನರು, ಹಲವಾರು ಐಡಿಯಾಗಳನ್ನು ನೀಡಿದ್ದಾರೆ. ಈಗ ಅಂತಿಮ ಗೊಳಿಸಬೇಕಾಗಿದೆ. ಬಹುತೇಕ ಕಟ್ಟಡದ ಸಿವಿಲ್ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಪ್ಲಾಸ್ಟರಿಂಗ್ ಸಹ ಮುಗಿಯುತ್ತಾ ಬಂದಿದೆ.

 ದಿನಾಂಕ:15.09.2023 ರಿಂದ 24.09.2023 ರವರೆಗೆ ಶರನ್ನವರಾತ್ರಿ ಪೂಜೆಯೊಂದಿಗೆ ನಾಲೇಡ್ಜ್ ಬ್ಯಾಂಕ್-2047 ಚಟುವಟಿಕೆಗಳು ಆರಂಭಗೊಳ್ಳಲಿವೆ.

 2047 ಕ್ಕೆ ನಮ್ಮ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನಂತೆ ಭಾರತ ವಿಶ್ವ ಗುರುವಾಗಲೂ, ನಮ್ಮ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಕನಸಿನಂತೆ ಕರ್ನಾಟಕ ರಾಜ್ಯ ಏಷ್ಯಾದಲ್ಲೇ ನಂಬರ್ ಒನ್ ಆಗಲೂ ಮತ್ತು ನಮ್ಮ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಕನಸಿನಂತೆ ಬ್ರ್ಯಾಂಡ್ ಬೆಂಗಳೂರು ಆಗಲೂ ಪ್ರಪಂಚದ್ಯಾಂತ ಇರುವ ಜ್ಞಾನಿಗಳ ಜ್ಞಾನದ ಸಲಹೆಗಳ ಸಂಗ್ರಹವೇ ನಾಲೇಡ್ಜ್ ಬ್ಯಾಂಕ್-2047 ಪ್ರಮುಖ ಉದ್ದೇಶ.

 ಈ ಅಜೆಂಡಾಗಳಿಗೆ, ಎಡಪಂಥೀಯರ ಮತ್ತು ಬಲಪಂಥಿಯರ ಪ್ರತಿಪಾದನೆಗಳು ಸೇರಿದಂತೆ, ಆಸಕ್ತಿ ಇರುವ ಪ್ರತಿಯೊಬ್ಬರ ಅನಿಸಿಕೆಗಳಂತೆ, ಯೋಜನಾವಾರು ವಿಶ್ಲೇಷಣೆ, ಅಭಿಪ್ರಾಯ, ಸಲಹೆ, ಮಾರ್ಗದರ್ಶನಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸುವ ಒಂದು ಪ್ಲಾಟ್ ಫಾರಂ ಆಗಲಿದೆ.

ಆದ್ದರಿಂದ ಯೋಜನೆಯ ಪರಿಕಲ್ಪನೆಗೆ ಅನುಗುಣವಾಗಿ, ವಿಶ್ವದ 108 ಶಕ್ತಿಪೀಠಗಳ ಆಶೀರ್ವಾದೊಂದಿಗೆ ಯೋಜನಾ ಬದ್ಧವಾಗಿ, ಕ್ರಮ ಬದ್ಧವಾಗಿ, ಎಲ್ಲವೂ ಪಾರದರ್ಶಕವಾಗಿ ಡಿಜಿಟಲ್ ಆಗಲಿದೆ.

ಈ ಹಿನ್ನಲೆಯಲ್ಲಿ ಶಕ್ತಿಭವನವೇ ಡಿಜಿಟಲ್ ಆಗಿ ಸ್ಮಾರ್ಟ್ ಆUಬೇಕಿದೆ. ನಾನಂತೂ ನಮ್ಮ ಕಟ್ಟಡದ ಕಾಮಗಾರಿ ಆರಂಭಿಸಿದ ನಂತರ, ನೂರಾರು ಕಟ್ಟಡಗಳಿಗೆ ಭೇಟಿ ನೀಡಿದ್ದೇನೆ.ಹಲವಾರು ಜನರೊಂದಿಗೆ ಸಮಾಲೋಚನೆ ನಡೆಸಿದ್ದೇನೆ.

ಒಂದಿಂಚು ಸ್ಥಳ ವೇಸ್ಟ್ ಆಗದೇ ಎಲ್ಲವನ್ನೂ ಅಚ್ಚುಕಟ್ಟಾಗಿ, ಈಗ ಇರುವ ಎಲ್ಲಾ ಅಡ್ವಾನ್ಸ್ ಟೆಕ್ನಾಲಜಿಯೊಂದಿಗೆ ಬಳಸಿಕೊಳ್ಳಬೇಕಿದೆ. ಆದ್ದರಿಂದ ತಮ್ಮ ಜ್ಞಾನವನ್ನು ದಾನ ಮಾಡುವಿರಾ ?

ದಿನಾಂಕ:30.09.2023 ರೊಳಗೆ ಶಕ್ತಿಭವನÀದ ಎಲ್ಲಾ ಕಾಮಗಾರಿಗಳ ರೂಪುರೇಷೆ ಅಂತಿಮವಾಗಲಿದೆ. ನಮ್ಮ ಪರಿಕಲ್ಪನೆಗೆ ಅನುಗುಣವಾಗಿ, ನಿಮ್ಮಗಳ ಸಲಹೆ, ಸೂಚನೆ ಮೇರೆಗೆ ಶಕ್ತಿಪೀಠದ ರೂಪುರೇಷೆಗಳನ್ನು ಶ್ರೀ ಡಾ. ನಾಗರಾಜ್‍ರಾವ್‍ರವರು, ಅಭಿವೃದ್ಧಿ ಪೀಠದ ರೂಪುರೇಷೆಗಳನ್ನು ಶ್ರೀ ಟಿ.ಆರ್.ರಘೊತ್ತಮರಾವ್ ರವರು ಮತ್ತು ಜಲಪೀಠದ ರೂಪುರೇಷೆಗಳನ್ನು ಶ್ರೀ ಹೆಚ್.ಬಿ.ಮಲ್ಲೇಶ್ ರವರು ಅಂತಿಮ ಗೊಳಿಸಲಿದ್ದಾರೆ.

  ಈಗ ನಮಗೆ ಗೊತ್ತಿರುವಂತಹ 108 ಶಕ್ತಿಪೀಠಗಳು ಇರುವ ಸ್ಥಳಗಳಿಗೆ ಮತ್ತು ಸತಿಯ ದೇಹದ ಭಾಗಗಳಿಗೆ ಅನುಗುಣವಾಗಿ ಶ್ರೀಮತಿ ಚಂದ್ರಿಕಾ ಅಶೋಕ್ ರವರು ಮತ್ತು ಶ್ರೀ ಎಲ್.ಕೆ ಅಶೋಕ್ ರವರು ಹಾಗೂ ಶ್ರೀಮತಿ ಲಲಿತಾ ಶೇಷಾದ್ರಿರವರು ಜೋಡಣೆ ಮಾಡಲಿದ್ದಾರೆ. ಆರಂಭದಿಂದ ನಮ್ಮ ಜೊತೆ ಸಹಕರಿಸುತ್ತಿದ್ದ ಇಂಜಿನಿಯರ್ ಶ್ರೀ ಹರೀಶ್ ರವರು ಮತ್ತು ಅವರ ಶ್ರೀಮತಿಯವರು  ಏಕೋ ಏನೋ ದೂರ ಸರಿದಿದ್ದಾರೆ.

   ಶ್ರೀ ರಾಮಮೂರ್ತಿರವರು,  ಶ್ರೀ ಸತ್ಯಾನಂದ್‍ರವರು, ಶ್ರೀ ಸಚ್ಚಿನ್‍ರವರು, ಶ್ರೀ ಹೆಚ್.ಸಿ.ಹರೀಶ್‍ರವರÀ ತಂಡ ಎಲ್ಲವನ್ನೂ ಅಚ್ಚುಕಟ್ಠಾಗಿ ಸಿದ್ಧತೆಗೊಳಿಸುತ್ತಿದ್ದಾರೆ.

ಶ್ರೀ ಸಿದ್ದಲಿಂಗಪ್ಪನವರು ‘5-S’ ಸೂತ್ರ ಆಧಾರದ ಮೇಲೆ ಕೈಗೊಳ್ಳಬೇಕಾಗಿರುವ ಸಲಹೆಗಳನ್ನು ನೀಡಲಿದ್ದಾರೆ.

ಕಟ್ಟಡದ ಕಾಮಗಾರಿಗಳನ್ನು ಮಾಡುತ್ತಿರುವ, ಎಲ್ಲಾ ಕುಟುಂಬಗಳಿಗೆ ಔತಣ ಕೂಟವನ್ನು ಏರ್ಪಡಿಸಬೇಕಿದೆ. ಕಟ್ಟಡದ ಅದಿ ಪೂಜೆ ಮಾಡಿದ ದಿವಸವೇ, ಕಟ್ಟಡದಲ್ಲಿ ಶರನ್ನವರಾತ್ರಿ ಪೂಜೆ ಮಾಡಲು ಕಾಲಮಿತಿ ನಿಗದಿ ಗೊಳಿಸಿದ್ದಕ್ಕೆ ಅನುಗುಣವಾಗಿ, ಎಲ್ಲರೂ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಆದರೂ ಕೆಲಸ ಮುಗಿಯುತ್ತಿಲ್ಲ. ಪೂಜೆಗೆ ತೊಂದರೆಯಂತೂ ಆಗಲಾರದು.

ಶಕ್ತಿದೇವತೆಗೆ ಇಷ್ಟವಾಗದ ಕೆಲಸಗಾರರನ್ನು ಖುಷಿಯಿಂದಲೇ ಬಿಡುಗಡೆಯನ್ನು ಮಾಡಿಸಿದ್ದಾರೆ.