22nd December 2024
Share

TUMAKURU:SHAKTHIPEETA FOUNDATION

ಭಾರತದ ದೇಶದಲ್ಲಿ ಸಂಶೋಧಕರಿಗೆ ಬರವಿಲ್ಲ, ಹೊಸ, ಹೊಸ ಅವಿಷ್ಕಾರಗಳನ್ನು ಮಾಡುವ ಒಂಡು ದಂಡೇ ಇದೆ. ಅವರಿಗೆ ಸರ್ಕಾರ ಮೂಲಭೂತ ಸೌಕರ್ಯ, ಆರ್ಥಿಕ ನೆರವು ನೀಡಬೇಕು ಅಷ್ಟೆ.

  ಒಬ್ಬ ಅವಿದ್ಯಾವಂತ ಕೂಡ ಸಾದಕನೇ, ಪ್ರತ್ಯಕ್ಷ ಸಾಕ್ಷಿಗಳು ನಮ್ಮ ಕಣ್ಣ ಮುಂದೆ ಇವೆ. ಮೊನ್ನೆ ನನಗೆ ಶ್ರೀ ವಿಶ್ವನಾಥ್ ರವರಿಂದ ಒಂದು ಫೋನ್ ಕಾಲ್ ಬಂತು ಸಂಶೋಧಕರಾದ ಶ್ರೀ ವಸೀರ್ ಹಯಾತ್ ನಿಮ್ಮನ್ನು ಭೇಟಿ ಮಾಡಬೇಕಂತೆ ಸಮಯ ಕೊಡಿ ಸಾರ್ ಎಂದಾಗ, ಎಡಕಲ್ಲು ಗುಡ್ಡದ ಪಾರ್ಕ್‍ನಲ್ಲಿದ್ದೇನೆ, ಈಗಲೇ ಭೇಟಿಯಾಗಬಹುದು ಎಂದಾಗ ತಕ್ಷಣವೇ ಬಂದರು.

ನಾನು ಅವರ ವಿಚಾರಗಳನ್ನು ಕೇಳಿದ ನಂತರ, ಮತ್ತೊಮ್ಮೆ ಸಂಜೆ ನಿಮ್ಮ ಮನೆಗೆ ನಾನೇ ಬರುತ್ತೇನೆ, ಮತ್ತೆ ಒಂದು ಘಂಟೆ ಸಮಾಲೋಚನೆ ನಡೆಸೋಣ ಎಂದು ಹೇಳಿ ಕಳುಹಿಸಿದೆ.

ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಸಮಾಲೋಚನೆ ಮಾಡಿದ ನಂತರ ನನಗೆ ಅನಿಸಿದ್ದು. ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರ ಇಂಥಹ ಸಂಶೋಧಕರಿಗೆ ಒಂದು ಹಬ್ ಮಾಡಿ, ಅವರಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯ ನೀಡಿ, ಸಂಶೋಧಕರಿಗೆ ಬೇಕಾಗುವ ವಸ್ತುಗಳು, ಉಪಕರಣಗಳನ್ನು ಸಾಲದ ರೂಪದಲ್ಲಿ ಸರಬರಾಜು ಮಾಡಿ, ಅವರಿಗೆ ಉಚಿತ ವಸತಿ ವ್ಯವಸ್ಥೆ, ಊಟ ತಿಂಡಿ, ಮನರಂಜನೆಗೆ, ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡುವ ಒಂದು ಯೋಜನೆ ಈಗಾಗಲೇ ಇದೆಯಾ ಅಥವಾ ಹೊಸದಾಗಿ ಯೋಜನೆ ಜಾರಿಯಾಗ ಬೇಕಾ? ಎಂಬ ಪರಿಕಲ್ಪನೆ ಮೂಡಿತು.

ಅವರು ಈ ಸಂಭಂದ ಎಲ್ಲಿಗೆ ಪ್ರವಾಸ ಮಾಡಿದರೂ, ಅವರಿಗೆ ಆರ್ಥಿಕ ನೆರವು ನೀಡಬೇಕು. ಅದು ಸಾಲದ ರೂಪದಲ್ಲಿ ಇರಲಿ ಅಥವಾ ಅನುದಾನದವಿರಲಿ, ಸಮಯಕ್ಕೆ ತಕ್ಕಂತಹ ನೆರವು ಸಿಗಲೇಬೇಕು.

  ಅವರ ಜ್ಞಾನಗಳನ್ನು ಕದಿಯುವ ಅಧಿಕಾರಿಗಳಿಗೆ ಮೊದಲೇ ಏನು ಕೇಳದ ಹಾಗೆ, ಅವರು ಏನು ಮಾಡುತ್ತಾರೋ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುವಂತಹ ಕಾನೂನು ಜಾರಿಯಾಬೇಕು. ಮೊದಲೇ ತಾತ್ಕಾಲಿಕ ಪೇಟೆಂಟ್ ನೀಡಬೇಕು.

ಈ ಬಗ್ಗೆ ಮಾಹಿತಿ ಸಂಗ್ರಹಿಸುವ ಅಗತ್ಯ ಇರುವುÀದರಿಂದ ಜ್ಞಾನ ದಾನಿಗಳು, ತಮ್ಮ ಜ್ಞಾನದಾನ ಮಾಡಲು ಬಹಿರಂಗ ಮನವಿ,