14th July 2024
Share

TUMAKURU:SHAKTHIPEETA FOUNDATION

  ದೇಶಾಧ್ಯಂತ ಹಾಲಿ ಇರುವ ಗ್ರಂಥಾಲಯಗಳಲ್ಲಿ ಫಿಸಿಕಲ್ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ ಮಾಡಿ, ಗ್ರಂಥಾಲಯಗಳನ್ನೇ ಆಯಾ ನಿರ್ಧಿಷ್ಠ ವ್ಯಾಪ್ತಿಯ ನಾಲೇಡ್ಜ್ ಬ್ಯಾಂಕ್-2047 ಮಾಡಿದರೇ ಹೇಗೆ, ಎಂಬ ವಿಚಾರ ಸಂಕಿರಣವನ್ನು ತುಮಕೂರು ಜಿಲ್ಲಾ ಮಟ್ಟದಲ್ಲಿ ನಡೆಸುವ ಬಗ್ಗೆ, ದಿನಾಂಕ:08.09.2023 ರಂದು, ತುಮಕೂರಿನ ಸರ್ಕಾರಿ ಪದವಿ ಕಾಲೇಜಿನ ಗ್ರಂಥಾಲಯದಲ್ಲಿ ನಡೆಸಲಾಯಿತು.

ಫೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯ ಪ್ರಸ್ಥಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚರ್ಚೆ ನಡೆಯಿತು. ತುಮಕೂರು ಜಿಲ್ಲೆಯಲ್ಲಿ ಹಾಲಿ ಇರುವ ಕೆಳಕಂಡ ಗ್ರಂಥಾಲಯಗಳ ಅಧಿಕಾರಿಗಳ ಮತ್ತು ನೌಕರರ ಅಭಿಪ್ರಾಯಗಳನ್ನು ಪಡೆಯಲು ನಿರ್ಧರಿಸಲಾಯಿತು.

  1. ನಗರ ಸ್ಥಳೀಯ ಸಂಸ್ಥೆಗಳವಾರು/ವಾರ್ಡ್‍ವಾರು/ಬಡಾವಣೆವಾರು ಗ್ರಂಥಾಲಯಗಳು
  2. ಗ್ರಾಮಪಂಚಾಯಿತಿವಾರು ಗ್ರಂಥಾಲಯಗಳು
  3. ಶಾಲಾ ಕಾಲೇಜುಗಳವಾರು ಗ್ರಂಥಾಲಯಗಳು
  4. ಸಂಘ ಸಂಸ್ಥೆಗಳವಾರು ಗ್ರಂಥಾಲಯಗಳು
  5. ಇಲಾಖಾವಾರು ಗ್ರಂಥಾಲಯಗಳು
  6. ಖಾಸಗಿ ಗ್ರಂಥಾಲಯಗಳು
  7. ಸಂಚಾರಿ ಗ್ರಂಥಾಲಯಗಳು

ಈ ಸಭೆಯಲ್ಲಿ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ವರದಿಯ ಎಲ್ಲಾ ಅಂಶಗಳನ್ನು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಸಲು ಆಲೋಚಿಸಲಾಯಿತು.

ಈಗಾಗಲೇ ರಾಜ್ಯ ಸರ್ಕಾರದಿಂದ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಪತ್ರ ಬಂದಿರುವ ಹಿನ್ನಲೆಯಲ್ಲಿ, ತುಮಕೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ, ವಿಚಾರ ಸಂಕಿರಣ ಆಯೋಜಿಸಲು ಚರ್ಚೆ ನಡೆಯಿತು.

ಒಂದು ವಾರದಲ್ಲಿ  ವಿಚಾರ ಸಂಕಿರಣದ ರೂಪುರೇಷೆ ನಿರ್ಧರಿಸಲು ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಗ್ರಂಥಾಲಯ ತಜ್ಞ ಶ್ರೀ ಶಿವಶಂಕರ್ ಕಾಡುದೇವರ ಮಠರವರು, ಶ್ರೀ ರಾಘವೇಂದ್ರರವರು ಮತ್ತು ಶ್ರೀ ಸುಬ್ರಮಣ್ಯರವರು ಇದ್ದರು.

‘ವಿಧಾನಸಭಾ ಸದಸ್ಯರ RANKING’ ನೀಡುವ ಅಂಶಗಳ ಬಗ್ಗೆ ಶ್ರೀ ಕೆ.ಜೈಪ್ರಕಾಶ್ ರವರು ಅಧ್ಯಯನ ಮಾಡುತ್ತಿದ್ದಾರೆ.

‘ವಿಶ್ವದ ಬೆಸ್ಟ್ ಪ್ರಾಕ್ಟೀಸಸ್’ ಲೈಬ್ರರಿಗಳು ಎಲ್ಲೆಲ್ಲಿವೆ,  ಯಾವ, ಯಾವ ವಿಭಾಗಗಳು ಯಾವ ಗ್ರಂಥಾಲಯದಲ್ಲಿ ಇವೆ ಎಂಬ ಬಗ್ಗೆ ಶ್ರೀಮತಿ ತೇಜಸ್ವಿನಿಯವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಶ್ರೀಮತಿ ಮಾಲಾರವರು ಹ್ಯೂಮನ್ ಲೈಬ್ರರಿ ಅಡಿಯಲ್ಲಿ, ವರ್ಷದ 365 ದಿವಸಗಳು’ ಯೂ ಟ್ಯೂಬ್ ಚಾನಲ್‍ನಲ್ಲಿ ಚರ್ಚೆ ಮಾಡುವ ಅಂಶಗಳನ್ನು ಕ್ರೋಡೀಕರಿಸುತ್ತಿದ್ದಾರೆ.

ಊರಿಗೊಂದು ಪುಸ್ತಕ ಟೆಂಪ್ಲೇಟ್ ಅನ್ನು ಗೋಪಾಲದಹಳ್ಳಿ ಶ್ರೀ ಆರ್ಕರಘುರವರು ಪ್ರಾಯೋಗಿ ಕವಾಗಿ ಅಧ್ಯಯನ ಮಾಡುತ್ತಿದ್ದಾರೆ.

ಇನ್ನು ಯಾವ, ಯಾವ ಅಂಶಗಳನ್ನು ವಿಚಾರ ಸಂಕಿರಣದಲ್ಲಿ ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಪಟ್ಟಿ ಮಾಡುವ ಕೆಲಸವನ್ನು ಶ್ರೀ ಬಸವರಾಜ್ ರವರು ಮಾಡುತ್ತಿದ್ದಾರೆ.