24th April 2024
Share

TUMAKURU:SHAKTHIPEETA FOUNDATION

  ರಾಜ್ಯದ ಹಲವಾರು ಹಿರಿಯ ಜ್ಞಾನಿಗಳ ತಂಡದ ಕನಸು ಗ್ರಾಮೀಣ ಜ್ಞಾನ ಕೇಂದ್ರ ಇವರ ಪರಿಕಲ್ಪನೆಯನ್ನು ಜಾರಿಗೊಳಿಸಲು ಎಲ್ಲಾ ವಿಧವಾದ ಸಹಕಾರ ನೀಡುವುದಾಗಿ ಅವರ ಸಂಸ್ಥೆಯೊಂದಿಗೆ ಎಂ.ಓ.ಯು ಮಾಡಿಕೊಳ್ಳಲು ಸಮಾಲೋಚನೆ ಆರಂಭವಾಗಿದೆ.

 ಆದರೇ ನನ್ನ ಹುಟ್ಟೂರು ಕುಂದರನಹಳ್ಳಿ ಗ್ರಾಮ ಸೇರಿರುವ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಂಡರೆ ನನಗೆ ಹೆಮ್ಮೆ, ಏಕೆಂದರೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಂಸದರ ಆದರ್ಶ ಗ್ರಾಮ ಯೋಜನೆಗೆ ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಕನಸಿನಂತೆ ಅಭಿವೃದ್ಧಿ ಪಡಿಸಲು ಸಾದ್ಯಾವಾಗಿಲ್ಲ. ಕಾರಣಗಳು ನೂರಾರು ಇರಬಹುದು.

ಅಥವಾ ತುಮಕೂರು ಜಿಲ್ಲೆಯ ಅಥವಾ ಕರ್ನಾಟಕ ರಾಜ್ಯದ ಯಾವುದೇ ಗ್ರಾಮಪಂಚಾಯಿತಿ ಆಯ್ಕೆ ಮಾಡಿಕೊಂಡರೂ, ನನ್ನ ಸಹಕಾರ ಇರುತ್ತದೆ. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ರ್ಯಾಂಕಿಂಗ್ ನೀಡಿ, ಯಾವುದು ಅತ್ಯಂತ ಹಿಂದುಳಿದಿದೆ, ಆ ಗ್ರಾಮ ಪಂಚಾಯಿತಿ ಆಯ್ಕೆ ಮಾಡುವುದಾದರೂ ನಮ್ಮ ಒಪ್ಪಿಗೆ ಇದೆ.

2047 ರವರೆಗೆ ಒಂದು ಗ್ರಾಮ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ನಮ್ಮ ಪರಿಕಲ್ಪನೆಯಂತೆ ಶ್ರಮಿಸಬೇಕು ಅಷ್ಟೆ ನಮ್ಮ ಷರತ್ತು’. ಸರ್ಕಾರಗಳಿಂದ ಅಗತ್ಯ  ಆರ್ಥಿಕ ನೆರವನ್ನು ಮಂಜೂರು ಮಾಡಿಸಿಕೊಡುವುದು ನಮ್ಮ ಸಂಸ್ಥೆಯ ಹೊಣೆಗಾರಿಕೆಯಾಗಲಿದೆ.

ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೊಡುವುದು ಮತ್ತು ಅನುಷ್ಠಾನದ ಮೂರನೇ ವ್ಯಕ್ತಿ ತಪಾಸಣೆ  ನಿಮ್ಮ ಸಂಸ್ಥೆಯ ಹೊಣೆಗಾರಿಕೆಯಾಗಬೇಕು. 2047 ನೇ ಇಸವಿವರೆಗೂ ಸರ್ಕಾರದೊಂದಿಗೆ ಪಿಪಿಪಿ ಮಾದರಿ ನಿರ್ವಹಣೆಗೆ ಎಂ..ಯು ಮಾಡಿಸಿಕೊಳ್ಳಲು ಪ್ರಯತ್ನಿಸೋಣ.

ನಮ್ಮ ರಾಜ್ಯದಲ್ಲಿ  ಯಾರೇ ಸಂಸದರಾಗಲಿ, ಯಾರೇ ಶಾಸಕರಾಗಿಲಿ ತಮಗೆ ಸಹಕಾರ ಕೊಡಿಸುವ ಪ್ರಯತ್ನ ಮಾಡಲಾಗುವುದು. ಆದರೇ ‘ಹಳ್ಳಿಗಳ ರಾಜಕಾರಣ ಸಹಿಸಿಕೊಳ್ಳುವ ಶಕ್ತಿ’ ನಿಮಗೆ ಇರಬೇಕು. ‘ಬಹುಷಃ ನೀವೂ ಬಿಟ್ಟು ಬಂದರೂ ಆಶ್ಚರ್ಯವಿಲ್ಲ’. ಅಂತಹ ಸಂದರ್ಭ ಬರದ ರೀತಿ ಕೈ ಹಾಕುವುದು ‘ಜಾಣ್ಮೆ’.

ಕೇಂದ್ರ ಸರ್ಕಾರದ ನ್ಯಾಷನಲ್ ಯೂತ್ ಕ್ಲಬ್’ ಸೇರಿದಂತೆ, ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ, ಆಯಾ ಗ್ರಾಮಗಳ ಎಲ್ಲರನ್ನೂ ಒಳಗೊಂಡ, ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅÀಡಿಯಲ್ಲಿನ ಟಾಸ್ಕ್ ಪೋರ್ಸ್/ ವಿಷನ್ ಗ್ರೂಪ್ ರಚಿಸಿಕೊಂಡು, ಆದರ್ಶ ಗ್ರಾಮ ಜಾರಿಗೆ ಶ್ರಮಿಸಬೇಕು.

 ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯ ಎಲ್ಲಾ ಅಂಶಗಳನ್ನು ಜಾರಿಗೊಳಿಸಬೇಕು. ಗ್ರಂಥಾಲಯಗಳೇ ನಾಲೇಡ್ಜ್ ಬ್ಯಾಂಕ್ 2047 ರೀತಿ ಕಾರ್ಯ ನಿರ್ವಹಿಸಬೇಕು.

ಸಾಧಕ-ಭಾದಕ ಗಳನ್ನು ಚರ್ಚೆ ಮಾಡೋಣ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮತಿ ಪಡೆಯೋಣ ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸರ್ಕಾರದ ಅನುದಾನ ಮಂಜೂರು ಮಾಡಿಸುವುದು ಅಷ್ಟು ಸುಲಭದ ಮಾತಲ್ಲ, ಕಾಯುವ ತಾಳ್ಮೆ’ ನಿಮಗೆ ಇರಬೇಕು.

ಶಕ್ತಿಪೀಠ ಫೌಂಡೇಷನ್ ಕೈಗೊಂಡಿರುವ ಎಲ್ಲಾ ಯೋಜನೆಗಳ ಬಗ್ಗೆ, ನಿಮ್ಮ ಸಂಸ್ಥೆಯ ಜ್ಞಾನ ದಾನ ಮಾಡಿ ಎಂಬುದು ನನ್ನ ಮನವಿ. ಇದು ಒಂದು ರೀತಿ ಮುಯ್ಯಾಳು ವ್ಯವಸ್ಥೆ. ನಮ್ಮ ಪರಿಕಲ್ಪನೆಗೆ ನಿಮ್ಮ ಜ್ಞಾನ ಮತ್ತು ನಿಮ್ಮ ಪರಿಕಲ್ಪನೆಗೆ ನಮ್ಮ ಸಹಕಾರ, ಇಲ್ಲಿ ಯಾವುದೇ ಆರ್ಥಿಕ ವ್ಯವಹಾರವೇ’ ಬರುವುದಿಲ್ಲ.

ತುಮಕೂರು ಜಿಲ್ಲೆಯ ಮಾಜಿ ಸಚಿವರೊಬ್ಬರ ಪ್ರಕಾರ ಜಿ.ಎಸ್.ಬಸವರಾಜ್ ರವರು ಮತ್ತು ಕುಂದರನಹಳ್ಳಿ ರಮೇಶ್ ಇಬ್ಬರಲ್ಲಿ ಒಬ್ಬರ ಶಿವಗಣಾರಾಧನೆ ಆಗುವವರೆಗೂ ಅವರ ಸಂಭಂದ ಕಡಿದುಕೊಳ್ಳುವುದಿಲ್ಲಾ ಎಂಬ ಅನಿಸಿಕೆಯಾಗಿದೆಯಂತೆ

 ಅವರ ಅಮೃತ ವಾಣಿ ಸತ್ಯ, ನಮ್ಮ ಯೋಜನೆಗಳಿಗೆ ಅವರ ಆಶೀರ್ವಾದ ಇದ್ದೇ ಇರುತ್ತದೆ. ಇಲ್ಲಿ ಜಾತಿ, ಪಕ್ಷ ರಾಜಕಾರಣ ಬರಬಾರದು. ಅವರು ಹಿರಿಯ ನಾಗರೀಕರಾಗಿ ನಮ್ಮ ಜೊತೆ ಇರುತ್ತಾರೆ ಎಂಬ ಭಾವನೆ ನಿಮ್ಮದಾಗಿರಬೇಕು.

ಈ ಸಭೆಯಲ್ಲಿ LIS ACADEMY ಯ ಡಾ.ಕೊಣ್ಣೂರ್ ರವರು ಮತ್ತು ಡಾ. ಡಿ.ಎಸ್.ಆಮೋಜಿಯವರು ರೀಡರ್ಸ್ ಫೌಂಡೇಷನ್ ನ ಡಾ.ಎಸ್.ಎಲ್. ಕಾಡುದೇವರ ಮಠ್ ರವರು ಇದ್ದರು.