TUMAKURU:SHAKTHIPEETA FOUNDATION
ತುಮಕೂರು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಮೊಟ್ಟಮೊದಲು ಕನಸು ಕಂಡಿದ್ದು. ಅಭಿವೃದ್ಧಿ ರೆವೂಲ್ಯೂಷನ್ ಫೋರಂ. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿದ್ದು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ಪತ್ರ ಬರೆಯುವ ಮೂಲಕ ಬೀಜ ಬಿತ್ತಿದರು.
ನಂತರ ತುಮಕೂರು ಜಿಲ್ಲೆಯವರೇ ಆದ ಶ್ರೀ.ಡಾ.ಜಿ.ಪರಮೇಶ್ವರ್ ರವರು ಉನ್ನತ ಶಿಕ್ಷಣ ಸಚಿವರಾದ ನಂತರ ಜೀವ ತುಂಬಿ ‘ಅಪ್ಪ– ಅಮ್ಮ’ ಆದರು. ಮುಖ್ಯ ಮಂತ್ರಿಯವರು ತುಮಕೂರಿನ ಎಸ್.ಪಿ.ಕಚೇರಿ ಲೋಕಾರ್ಪಣೆಗೆ ಆಗಮಿಸುತ್ತಿದ್ದರು.ತುಮಕೂರು ಜಿಲ್ಲಾ ಗಡಿಯಲ್ಲಿ ಸ್ವಾಗತಿಸಲು ಸಂಸದರು ಹೋಗಿದ್ದರು, ಅಲ್ಲಿಂದ ಸಂಸದರುÀ ನನಗೆ ಕರೆ ಮಾಡಿ, ನಿಮ್ಮ ಎಸ್.ಕೃಷ್ಣರವರನ್ನು ಏನು ಕೇಳಬೇಕಪ್ಪ ಎಂದರು.
ನನಗೆ ಎಸ್.ಎಂ.ಕೃಷ್ಣರವರ ಮೇಲೆ ಅಪಾರ ಪ್ರೀತಿ, ಕಾರಣ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ನೇತ್ರಾವತಿ ಯೋಜನೆ ನೀರಾವರಿ ಕನಸಿಗೆ ಜನ್ಮದಾತ ಅವರು ಮತ್ತು ಶ್ರೀ ಹೆಚ್.ಕೆ.ಪಾಟೀಲ್ ರವರು ಅದರ ಫಲವೇ ಎತ್ತಿನಹೊಳೆ ಯೋಜನೆ.
ನಾನು ಸಾರ್ ತುಮಕೂರು ವಿಶ್ವ ವಿದ್ಯಾಲನಿಲಯ ಘೋಷಣೆ ಎಂದಾಗ ಬಸವರಾಜ್ ರವರು ಒಳ್ಳೆ ಐಡಿಯಾ ಬಿಡು, ಪರಮೇಶ್ವರ್ ರವರೇ ಉನ್ನತ ಶಿಕ್ಷಣ ಸಚಿವರು, ಆಗೋಯ್ತು ಬಿಡು ಅಂದರು. ನಂತರ ಎಸ್.ಎಂ.ಕೃಷ್ಣರವರ ಭಾಷಣದಲ್ಲಿ ತುಮಕೂರಿಗೆ ವಿಶ್ವವಿದ್ಯಾನಿಲಯ ಘೋಷಣೆ. ಸ್ಥಳದಲ್ಲಿ ಇದ್ದ ಜಿ.ಪರಮೇಶ್ವರ್ ರವರು ಇಸ್ರೋದವರು ಚಂದ್ರಯಾನ ಉಡಾವಣೆ ಮಾಡಿದ ಸ್ಪೀಡ್ ನಲ್ಲಿಯೇ ವಿಶ್ವ ವಿದ್ಯಾನಿಲಯ ಮಾಡಿದ ‘ಮಹಾನ್ ಪುಣ್ಯಾತ್ಮ.’ ಇದು ಇತಿಹಾಸ.
‘ಈಗ ವಿಸಿಯವರ ಕನಸು ತುಮಕೂರು ಜಿಲ್ಲೆಯ ಪ್ರತಿಯೊಬ್ಬ ರೈತನ ಬೆಳೆಯೂ, ಮೌಲ್ಯವರ್ಧಿತ ಉತ್ಪನ್ನ ಆಗಿ ವಿಶ್ವದ್ಯಾಂತ ರಫ್ತು ಆಗಬೇಕು. ಗ್ರಾಮೀಣ ಪ್ರದೇಶದದ ಇನ್ನೋವೇಟರ್ಸ್ ಗುರುತಿಸಿ ಬೆನ್ನು ತಟ್ಟಬೇಕು ಎಂಬುದಾಗಿದೆ. ಇದನ್ನು ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ.’
ನೋಡಿ ಸ್ವಾಮಿ 2012 ರಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನನ್ನ ಹೋರಾಟ ಆರ್ಟಿಸಾನ್ ಹಬ್ ಆಗಿತ್ತು. ಇದಕ್ಕೂ ಒಂದು ಪುಸ್ತಕ ಬರೆದು ಜಾಗೃತಿ ಮೂಡಿಸಲಾಗಿತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿತ್ತು.
ಈಗ ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ‘ವಿಶ್ವ ಕರ್ಮ’ ಯೋಜನೆ ಜಾರಿಗೊಳಿಸಿದ್ದಾರೆ. ಅದೇ ರೀತಿ ಅತಿ ಹಿಂದುಳಿದ ಮಠಾದೀಶರ ಮನವಿಯಂತೆ ನಮ್ಮ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಕುಶಲಕರ್ಮಿಗಳ ಉತ್ಪನ್ನಗಳ ಅಧ್ಯಯನಕ್ಕೆ ‘ಉನ್ನತ ಮಟ್ಟದ ಅಧ್ಯಯನ ಸಮಿತಿ’ ರಚಿಸುವುದಾಗಿ ಹೇಳಿದ್ದಾರೆ.
ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಶ್ರೀ ಸಿ.ಎಸ್.ಧ್ವಾರಕನಾಥ್ ರವರು ತಮ್ಮ ವರದಿಯಲ್ಲಿ ಬಹಳ ಚೆನ್ನಾಗಿ ವರದಿ ಮಾಡಿದ್ದಾರೆ. ಅವರು ಜೊತೆ ಸಮಾಲೋಚನೆ ಮಾಡಲು ಜಿ.ಎಸ್. ಬಸವರಾಜ್ ರವರು ಮತ್ತು ನಾನು ಹೋದಾಗ ಅವರು ಹೇಳಿದ ಮಾತು.
ನೋಡಿ, ಈ ಕಥೆ ಹೇಗಿದೆ ನಾನು ನೀಡಿದ ವರದಿಯನ್ನು ಹಿಂದುಳಿದ ವರ್ಗದ ಯಾವೊಬ್ಬ ರಾಜಕಾರಣಿ ಓದಲಿಲ್ಲ. ಲಿಂಗಾಯತರಾದ ನೀವೂ ಆರ್ಟಿಸಾನ್ ಹಬ್ ಮಾಡಲು ಹೊರಟಿರುವುದು ನಿಜಕ್ಕೂ ಸಂತೋಷವಾಗಿದೆ ಎಂದಿದ್ದರು.
ಸರ್ಕಾರಗಳ ಉದ್ದೇಶ ಪ್ರತಿ ಗ್ರಾಮದಲ್ಲಿ ‘ಪವಿತ್ರವನ’ ಜಾರಿಗೊಳಿಸುವುದಾಗಿದೆ. ಜಿ.ಪರಮೇಶ್ವರ ರವರ ಆಪ್ತ ಕಾರ್ಯದರ್ಶಿ ಶ್ರೀ ಚನ್ನಬಸಪ್ಪನವರು, ತುಮಕೂರು ಜಿಲ್ಲೆಯ ಎಡಿಸಿ ಆಗಿದ್ದರು. ಬೆಳಿಗ್ಗೆ ಅವರಲ್ಲಿ ‘ಊರಿಗೊಂದು ಬಯೋ ಡೈವರ್ಸಿಟಿ ಪಾರ್ಕ್’ ಪ್ರಸ್ತಾವನೆ ಮನವಿ ಇಟ್ಟಿದ್ದೆ. ಅವರು ವಿವರವಾಗಿ ಚರ್ಚೆ ನಡೆಸಿದರು.
ನಂತರ ಅವರು ನನಗೆ ಹೇಳಿದರು 10 ಗಂಟೆಗೆ ಎಂ.ಪಿಯವರ ಪತ್ರ ಕಳುಹಿಸಿ ಎಂದರು. ನಾನು ಪತ್ರ ಮಾಡಿಸಿ ಕಳುಹಿಸಿ ಕೊಟ್ಟೆ. ಅಂದೇ ಸಂಜೆ ಐದು ಗಂಟೆಗೆ ಅವರಿಂದ ಪತ್ರದ ಪ್ರತಿ ನನಗೆ ಬಂತು.
ಆ ಪತ್ರದಲ್ಲಿ ತುಮಕೂರು ಜಿಲ್ಲೆಯ ಪ್ರತಿ ಗ್ರಾಮದಲ್ಲಿ ‘ಬಯೋ ಡೈವರ್ಸಿಟಿ ಪಾರ್ಕ್’ ನಿರ್ಮಿಸÀಲು ಸರ್ಕಾರಿ ಜಮೀನು ಗುರುತಿಸಿ ಎಂದು ಜಿಲ್ಲೆಯ ಎಲ್ಲಾ ಎಸಿ ಮತ್ತು ತಹಶೀಲ್ಧಾರ್ ರವರಿಗೆ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ವೈ.ಎಸ್.ಪಾಟೀಲ್ ರವರು ಸೂಚಿಸಿದ್ದರು ಇದು ಒಂದು ‘ದಾಖಲೆ.’
ನಂತರ ಸರ್ಕಾರಿ ಆದೇಶದ ಪ್ರಕಾರ, ಪವಿತ್ರವನ ಹೆಸರಿಗೆ ಜಮೀನು ಹುಡುಕುತ್ತಿದ್ದಾರೆ. ಈ ಪವಿತ್ರವನ ಅನುಷ್ಠಾನದ ಹೊಣೆಗಾರಿಕೆಯನ್ನು ತುಮಕೂರು ವಿಶ್ವ ವಿದ್ಯಾನಿಲಯ ಪಡೆಯಲಿ. ಈ ಮೂಲಕ ‘ಊರಿಗೊಂದು ಥೀಮ್ ಪಾರ್ಕ್’ ಅನ್ನು ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಮೂಲಕ ನಿರ್ವಹಣೆ ಮಾಡಿದರೇ, ಇದೊಂದು ಆಯಾ ಊರಿನ ಪ್ರವಾಸಿ ಕೇಂದ್ರವಾಗಲಿದೆ.
ಈ ಮೂಲಕ ಪ್ರತಿ ಗ್ರಾಮದ ರೈತರ ಮೌಲ್ಯವರ್ಧಿತÀ ಉತ್ಪನ್ನಗಳ ರಫ್ತು ಮತ್ತು ಆಯಾ ಗ್ರಾಮದ ಸಂಶೋಧಕರಿಗೆ ಬೆನ್ನೆಲುಬಾಗಿ ನಿಲ್ಲ ಬಹುದು. ಇದು ಆಯಾ ಗ್ರಾಮದ ‘ನಾಲೇಡ್ಜ್ ಬ್ಯಾಂಕ್-2047’ ಕೇಂದ್ರÀವಾಗಲಿ.
‘ಆಯಾ ಊರಿನವರೇ 1947 ಕ್ಕೆ ಮೊದಲು ಎನಿತ್ತು, ನಂತರ 1947 ರಿಂರ 2023 ರವರೆಗೆ ಎನಾಗಿದೆ. ಮುಂದೆ 2047 ಕ್ಕೆ ಏನಾಗಬೇಕು ಎಂಬ ಮಾಹಿತಿಯನ್ನು ಇಲ್ಲಿ ಪ್ರದರ್ಶನ ಮಾಡಲಿದ್ದಾರೆ.’
ಜೊತೆಗೆ ಜಿಲ್ಲೆಯವರೇ ಆದ ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರ ಕನಸು ದೆಹಲಿಯಲ್ಲಿ ‘ರಾಜ್ಯದ ಸಹಕಾರಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನೂಕೂಲವಾಗಲು ಹಾಸ್ಟೆಲ್ ನಿರ್ಮಾಣ’ ಮಾಡುವುದಾಗಿದೆ.
ಅವರ ಕನಸಿನ ಗ್ರಾಮಪಂಚಾಯಿತಿಗೊಂದು ಕೃಷಿ ಪತ್ತಿನ ಸಹಕಾರಕ್ಕೆ, ಕೇಂದ್ರ ಸರ್ಕಾರವೂ ಮುಂಗಡ ಪತ್ರದಲ್ಲಿ ಘೋಷಣೆ ಮಾಡಿದೆ. ಆ ಸಂಘಗಳ ಸಹಕಾರ/ಸಹಭಾಗಿತ್ವ ಪಡೆಯ ಬಹುದಾಗಿದೆ. ಇವುಗಳು ಬಹುಪಯೋಗಿ ಸಹಕಾರ ಸಂಘಗಳಾದರೆ ಒಂದು ಕ್ರಾಂತಿಯೇ ಆಗಲಿದೆ.
ದೆಹಲಿ ಪ್ರತಿ ನಿಧಿ ಶ್ರೀ ಟಿ.ಬಿ.ಜಯಚಂದ್ರರವರ ಕನಸು ‘ಕರ್ನಾಟಕ ಹೆರಿಟೇಜ್ ಹಬ್’ ಇದು ಕೇಂದ್ರ ಸ್ಥಾನವಾಗಲಿ. ತುಮಕೂರಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿರುವ ಬಹಳಷ್ಟು ಕಟ್ಟಡಗಳಿವೆ, ಇವೆಲ್ಲವನ್ನು ಬಳಕೆ ಮಾಡಬಹುದು.
ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಕನಸು ವಿದ್ಯಾರ್ಥಿಗಳಿಗೆ ಒಂದು ‘ಹೊಸ ಲೋಕ ಸೃಷ್ಠಿಸ’ ಬೇಕು ಎಂಬುದಾಗಿದೆ. ನಗರ ಗ್ರಂಥಾಲಯ ವಿವಾಹದ ‘ವಧು’ವಿನಂತೆ ಸಿಂಗಾರ ಮಾಡಿಕೊಂಡು ಕೈ ಬೀಸಿ ಕರೆಯುತ್ತಿದೆ. ಜಿಲ್ಲೆಯ ಎಲ್ಲಾ ಗ್ರಂಥಾಲಯಗಳ ಬಳಕೆಯೂ ಇಲ್ಲಿ ಪೂರಕವಾಗಲಿದೆ.
ಇದನ್ನು ನಾಲೇಡ್ಜ್ ಬ್ಯಾಂಕ್-2047 ಸಮಿತಿ ಸಭೆಯ ವಿಷಯವಾಗಿ ಚರ್ಚೆ ನಡೆಯಲಿ ಎಂದು ವಿಸಿಯವರ ಗಮನ ಸೆಳೆಯಲಾಗಿದೆ.
ಇವೆಲ್ಲವೂ ಸಹ ‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’, ಕರಡು ಪ್ರಸ್ಥಾವನೆಯಲ್ಲಿ ಇದೆ. ಈಗ ‘ತುಮಕೂರು ಜಿಲ್ಲೆಯ ರಾಜಕಾರಣದ ತಂಡ ಬಹಳ ಚೆನ್ನಾಗಿಯೇ ಇದೆ’. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮನವೊಲಿಸಿದರೆ. ಒಂದು ‘ಗಿನ್ನೀಸ್ ದಾಖಲೆ’ ಬರೆಯ ಬಹುದಾಗಿದೆ.