22nd November 2024
Share

TUMAKURU:SHAKTHIPEETA FOUNDATION

  ನಮ್ಮ ಪೂರ್ವಜರು ಮಂಟಪ, ಗೋಪುರ, ಛಾವಡಿ ಏಕೆ ನಿರ್ಮಾಣ ಮಾಡುತ್ತಿದ್ದರು, ವಿವಿಧ ದೇಶಗಳಲ್ಲಿ ಪೀರಮಿಡ್ ಏಕೆ ನಿರ್ಮಾಣ ಮಾಡುತ್ತಿದ್ದರು ಎಂಬ ಬಗ್ಗೆ ಜ್ಞಾನವುಳ್ಳವರು, ಸಂಶೋಧಕರ  ಮಾಹಿತಿ ಸಂಗ್ರಹ ಮಾಡಿರುವವರು ಸಂಪರ್ಕಿಸಲು ಮನವಿ.

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಭಾರತ ಮಂಟಪದಲ್ಲಿ ಜಿ-20 ನಡೆಸುವ ಮೂಲಕ ವಿಶ್ವ ಮಟ್ಟದಲ್ಲಿ ಸಂಚಲನ ಮಾಡಿದ್ದಾರೆ. ಈಗ ಎಲ್ಲರ ಗಮನ ಮಂಟಪದ ಕಡೆಗೆ ಇದೆ.

ನಮ್ಮ ಶಕ್ತಿಭವನದಲ್ಲಿ ‘ಶಕ್ತಿಪೀಠ ಗೋಪುರ’ ನಿರ್ಮಾಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ನನ್ನ ಪರಿಕಲ್ಪನೆ ಇಲ್ಲಿ ಕುಳಿತು ಧ್ಯಾನ ಮಾಡುವುದು. ‘ನಾಲೇಡ್ಜ್ ಬ್ಯಾಂಕ್-2047’ ಜ್ಞಾನಿಗಳ ಜೊತೆ ಕುಳಿತು  ‘ಒನ್-ಟು- ಒನ್’ ಚರ್ಚೆ ನಡೆಸುವ ಉದ್ದೇಶವಿದೆ.

ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್) ಮೂಲಕ 545 ವಿಚಾರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆ ಮಾಡುವ ವಿದ್ಯಾರ್ಥಿ, ವ್ಯಕ್ತಿ,ಕುಟುಂಬ, ಸಂಸ್ಥೆ, ಶಿಕ್ಷಣ ಸಂಸ್ಥೆ ಜೊತೆ ಎಂ.ಓ.ಯು ಮಾಡಿಕೊಳ್ಳಲಾಗುವುದು.ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು.

ಎಲ್ಲಾ ಎಂ.ಓ.ಯುಗಳ ಸಹಿ ಅಥವಾ ಹಸ್ತಾಂತರ ಇಲ್ಲಿ ನಡೆಸಬೇಕೆಂಬ ಆಲೋಚನೆ ಇದೆ. ಈ ಮಂಟಪದ ಪಕ್ಕದಲ್ಲಿಯೇ ವಿಶ್ವದ 108 ಶಕ್ತಿಪೀಠಗಳ ಮತ್ತು 12 ಜ್ಯೋತಿರ್ಲಿಂಗಗಳ ಮಾಹಿತಿ ಕಣಜವೂ ಇರಲಿದೆ.

5 ಜನಾಂಗದ 5 ಜನರು ಲೋಹದ ಕವಚವನ್ನು ಮುಟ್ಟಿದ ನಂತರ ಗೋಪುರದ ತುದಿಗೆ ಫಿಕ್ಸ್ ಮಾಡಲಾಯಿತು.

ಆಸಕ್ತ ಜ್ಞಾನಿಗಳು ಸೂಕ್ತ ಸಲಹೆ ನೀಡಲು ಬಹಿರಂಗ ಮನವಿ.