TUMAKURU:SHAKTHIPEETA FOUNDATION
ತುಮಕೂರು ನಗರ ವಿಧಾನಸಭಾ ಕ್ಷೇತ್ರವೂ ಸೇರಿದಂತೆÀ, ತುಮಕೂರು ಜಿಲ್ಲೆಯ ಪ್ರತಿÀಗ್ರಾಮದ ಮತ್ತು ನಗರ ಪ್ರದೇಶಗಳ ನಿರುದ್ಯೋಗಿಗಳ ಪಕ್ಕಾ ಮಾಹಿತಿ ಸಂಗ್ರಹಿಸಿ, ಅವರ ಕನಸುಗಳು ಮತ್ತು ಅವಶ್ಯಕತೆ ಏನು ಇರುತ್ತದೆಯೋ ಅದಕ್ಕೆ ಅನುಗುಣವಾದ ಯೋಜನೆ ರೂಪಿಸಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.
ತುಮಕೂರು ವಿಶ್ವ ವಿದ್ಯಾನಿಲಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲು ಮುಂದೆ ಬಂದಿರುವುದು ಉತ್ತಮವಾದ ಬೆಳವಣಿಗೆ. ಶಿಸ್ತುಬದ್ಧವಾದ ರೂಪುರೇಷೆಗಳೊಂದಿಗೆ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ ‘2047 ಕ್ಕೆ ‘ವಿಶ್ವ ಗುರು’ ಆಗಲೂ ಮತ್ತು ಮುಖ್ಯಮಂತ್ರಿಯವರ ಪರಿಕಲ್ಪನೆಯಂತೆ ‘ಕರ್ನಾಟಕ ರಾಜ್ಯ ಏಷ್ಯಾದಲ್ಲೇ ನಂಬರ್ ಒನ್’ ಆಗಲೂ, ತುಮಕೂರು ಜಿಲ್ಲೆಯ ಫೈಲಟ್ ಯೋಜನೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವುದು ಸೂಕ್ತವಾಗಿದೆ.
ತುಮಕೂರು ಜಿಲ್ಲಾ ಪಂಚಾಯತ್ ಸಿಇಓರವರು ಹಾಗೂ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಯವರಾದ ಶ್ರೀ ಜಿ.ಪ್ರಭುರವರೊಂದಿಗೆ ಕುಳಿತು, ಪ್ರತಿಯೊಂದು ಅಂಶಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು, ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಲಹೆ ನೀಡಿದರು.
ತುಮಕೂರು ನಗರ ಗ್ರಂಥಾಲಯದಲ್ಲಿ, ಎಲ್ಲಾ ವಿಧವಾದ ಸೌಕರ್ಯ ಒಂದೇ ಸೂರಿನಡಿ ದೊರೆಯುವಂತಾಗಬೇಕು, ಜಿಲ್ಲೆಯ ಉದ್ಯೋಗದ ಕನಸುದಾರರ ಮತ್ತು ಸ್ವಯಂ ಉದ್ಯೋಗದಾತರ ತವರು ಮನೆಯಂತಾಗಬೇಕು, ತುಮಕೂರು ಜಿಲ್ಲೆಯ ಗ್ರಾಮಪಂಚಾಯಿತಿ ವ್ಯಾಪ್ತಿ ಮತ್ತು ನಗರಗಳ ವ್ಯಾಪ್ತಿಯಲ್ಲಿ ಇರುವ ಗ್ರಂಥಾಲಯಗಳಲ್ಲಿ, ಆಯಾ ವ್ಯಾಪ್ತಿಯ ನಿರುದ್ಯೋಗಿಗಳ ಡಾಟಾ ಮಾಹಿತಿ ಇರುವಂತಾಗ ಬೇಕು, ಪ್ರತಿ ತಿಂಗಳು ಎಷ್ಟು ಅಭ್ಯರ್ಥಿಗಳಿಗೆ ಯಾವ ಅನೂಕೂಲ ಆಗಿದೆ ಎಂಬ ಮಾಹಿತಿಯೂ ವಿಶ್ಲೇಷಣೆ ಆಗಬೆಕು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.
ಗ್ರಾಮೀಣ ಜ್ಞಾನ ಕೇಂದ್ರಗಳನ್ನು ನಿರುದ್ಯೋಗಿಗಳೇ ಸ್ವಯಂ ಉದ್ಯೋಗವಾಗಿ ಮಾಡಿ, ಅಲ್ಲಿ ಅವರ ಸೇವೆಯ ಜೊತೆಗೆ, ದುಡಿಮೆಗೂ ಯೋಜನೆ ರೂಪಿಸಿ, ಆಗ ನಿಮ್ಮ ಕನಸು ನನಸಲಾಗಲಿದೆ, ಎಂದು ಎಲ್.ಐ.ಎಸ್ ಅಕಾಡೆಮಿಯ ಡಾ. ಕೊಣ್ಣೂರ್‍ರವರು, ಡಾ.ರಾಜೆಂದ್ರಕುಮಾರ್‍ರವರು, ಡಾ.ಕಾಂತರಾಜುರವರು, ಡಾ.ಎಸ್.ಎಲ್.ಕಾಡುದೇವರ ಮಠರವರು, ಡಾ.ರಾಘವೇಂದ್ರರವರ ತಂಡಕ್ಕೆ ಸಲಹೆ ನೀಡಿ, ಅವರ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಜೊತೆಯಲ್ಲಿ ಶ್ರೀ ಸತ್ಯಾನಂದ್ ರವರು, ಶ್ರೀ ವೇದಾನಂದಮೂರ್ತಿರವರು, ನಗರ ಗ್ರಂಥಾಲಯದ ಡಿಡಿ. ಶ್ರೀಮತಿ ಸರೋಜಮ್ಮನವರು, ಶ್ರೀ ಬಸವರಾಜ್ ರವರು ಇನ್ನೂ ಮುಂತಾದವರು ಇದ್ದರು.
ತುಮಕೂರು ವಿಶ್ವ ವಿದ್ಯಾನಿಲಯದ ಸಹಭಾಗಿತ್ವದಲ್ಲಿ ಆರಂಭಿಸುವ ‘ಊರಿಗೊಂದು/ಬಡಾವಣೆಗೊಂದು’ ಪುಸ್ತPದ ಮೊದಲ ಡಾಟಾ ನಿರುದ್ಯೋಗಿಗಳ ಪರಿಕಲ್ಪನೆ ಆಗಬೇಕಿದೆ.
ಆಸಕ್ತರು ಈ ಬಗ್ಗೆ ಒಂದು ಆಪ್, ವೆಬ್‍ಸೈಟ್ ಅಥವಾ ಡಿಜಿಟಲ್ ವ್ಯವಸ್ಥೆ ಬಗ್ಗೆ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಜ್ಞಾನ ದಾನ ಮಾಡುವವರು ಮುಂದೆ ಬರಲು ಬಹಿರಂಗ ಮನವಿ.