TUMAKURU:SHAKTHIPEETA FOUNDATION
ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ 2047 ರವರೆಗೆ ‘ಭಾರತ ವಿಶ್ವ ಗುರು’ ಆಗಬೇಕು. ನಮ್ಮ ಮುಖ್ಯಮಂತ್ರಿಯವರ ಕನಸು 2047 ರ ವೇಳೆಗೆ ‘ಕರ್ನಾಟಕ ರಾಜ್ಯ ಏಷ್ಯಾದಲ್ಲಿಯೇ ನಂಬರ್ ಒನ್’ ರಾಜ್ಯವಾಗಬೇಕು.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು.
- ಊರಿಗೊಂದು ಪುಸ್ತಕ
- ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್
- ಊರಿಗೊಂದು ಥೀಮ್ ಪಾರ್ಕ್
- ತುಮಕೂರು ಡಾಟಾ ಜಿಲ್ಲೆ.
ಇವು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಕನಸು. ಅವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಲಾಗಿದೆ. ಬೆಂಕಿಗೆ ಗಂಟೆ ಕಟ್ಟುವವರು ಯಾರು ? ಎಂದು ಅಧಿಕಾರಿಗಳು ಕೊರಗುತ್ತಿದ್ದ ಹಿನ್ನಲೆಯಲ್ಲಿ, ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ @ 100 ಸ್ವಾತಂತ್ರ್ಯ ಸೇನೆ ‘ಹೆಗಲು ಕೊಡಲು’ ನಿರ್ಧರಿಸಿತು.
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಶಾಲಿನಿ ರಜನೀಶ್ ರವರು ಮಹತ್ವದ ನಿರ್ಧಾರ ಕೈಗೊಂಡು, ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರಲು ಕಾರ್ಯತಂತ್ರ ರೂಪಿಸಲು ಎಂ.ಓ.ಯು ಮಾಡಿದ್ದು ನನಗೂ ‘ಆನೆ ಬಲ’ ತಂದಿತು.
ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳನ್ನು ತೊಡಗಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ, ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ನಗರಾಭಿವಬೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಪತ್ರ ಬರೆಯುವ ಮೂಲಕ ‘ನಾಲೇಡ್ಜ್ ಬ್ಯಾಂಕ್ -2047’ ಕ್ಕೆ ಮುನ್ನುಡಿ ಬರೆದರು.
ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್ ರವರು ‘ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯ’ ಗಳಿಗೂ ಪತ್ರ ಬರೆದು ನಾಲೇಡ್ಜ್-2047 ರ ಬಗ್ಗೆ ಅಭಿಪ್ರಾಯ ಕೇಳಿದರು.
ನಾನು ರಾಜ್ಯದ ಹಲವಾರು ವಿಶ್ವ ವಿದ್ಯಾನಿಯಲಗಳಿಗೆ ಭೇಟಿ ನೀಡ ಉಪನ್ಯಾಸ ಆರಂಭಿಸಿದೆ. ಆಗ ನನಗೆ ಕೆಲವು ವಿಸಿಯವರು ಹೇಳಿದ್ದು ‘ಒಂದು ಕೈಪಿಡಿ ಹೊರ ತನ್ನಿ’, ನಂತರ ಅದರ ಸಾಧಕ-ಭಾಧಕ ಪರಿಶೀಲಿಸೋಣ ಎಂದು ಸಲಹೆ ನೀಡಿದರು.
ಹಾಸನ ಜಿಲ್ಲೆಯ ಸಕಲೇಶಪುರದ ಮೂಕಾನನ ರೆಸಾರ್ಟ್‍ನಲ್ಲಿ, ಪಶ್ಚಿಮ ಘಟ್ಟದ ಒಡಲಿನಲ್ಲಿ, ಎರಡು ದಿವಸದ ರಾಜ್ಯ ಮಟ್ಟದ ಕಾರ್ಯಾಗಾರ ನಡೆಸಲಾಯಿತು. ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಎರಡು ದಿವಸವೂ ಭಾಗಿಯಾಗಿ ‘ಬೆನ್ನು ತೊಟ್ಟಿದರು’.
ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕೈಪಿಡಿ ಹೊರತರಲಾಯಿತು. ನಂತರ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್ ರವರನ್ನು ಭೇಟಿಯಾದಾಗ ಅವರು ‘ಒಂದು ವ್ಯವಸ್ಥಿತವಾಗಿ ರೂಪುರೇಷೆ ನಿರ್ಧರಿಸೋಣ’ ಎಂಬ ಬರವಸೆ ನೀಡಿದರು.
ತುಮಕೂರು ವಿಶ್ವ ವಿದ್ಯಾನಿಲಯದ ವಿಸಿಯವರಾದ ಶ್ರೀ ವೆಂಕಟೇಶ್ವರಲುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಊರಿಗೊಂದು/ಬಡಾವಣೆಗೊಂದು ಪುಸ್ತಕ’ ಹಾಗೂ ವರದಿಯಲ್ಲಿನ ಅಂಶಗಳ ಆಧಾರದಲ್ಲಿ ‘ತುಮಕೂರು ಜಿಲ್ಲೆಯ ಫೈಲಟ್ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಐತಿಹಾಸಿಕ ನಿರ್ಧಾರ’ ಕೈಗೊಂಡಿದೆ.
ಬೆಂಗಳೂರಿನ LIS ACADEMY ಅಕಾಡೆಮಿಯವರು ‘ಗ್ರಾಮೀಣ ಜ್ಞಾನ ಕೇಂದ್ರ’ ಕನಸು ಹೊತ್ತಿದ್ದಾರೆ, ಅವರ ಜ್ಞಾನಿಗಳ ತಂಡ, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ವರದಿಯ ಸಲಹೆಯಂತೆ, ತುಮಕೂರು ಜಿಲ್ಲೆಯ ಫೈಲಟ್ ಪ್ರಾಜೆಕ್ಟ್ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಲು ಮುಂದೆ ಬಂದಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ದಿನಾಂಕ:16.09.2023 ರಂದು LIS ACADEMY ತಂಡದ ಸದಸ್ಯರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ.ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.
ವರದಿಯಲ್ಲಿ ಪ್ರಸ್ತಾಪಿಸಿರುವ0ತೆ, ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣ ಮಾಡಿರುವ ಕೆಲವು ಸ್ಥಳಗಳ ಪರಿಶೀಲನೆಯೂ ನಡೆಲಿದೆ. ನಂತರ ಕೆಳಕಂಡವರ ಜೊತೆ ಸಭೆ ನಡೆಸಿ ನಂತರ ರೂಪುರೇಷೆಯನ್ನು ನಿರ್ಧರಿಸಲಾಗುವುದು.
- ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿರವರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ.
- ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ ಸಭೆ.
- ತುಮಕೂರು ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಸಭೆ.
- ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ.
- ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ.
ನಂತರ ಗ್ರಾಮ/ಬಡಾವಣೆ ಮಟ್ಟದ ಸುಮಾರು 3500 ರೀಸರ್ಚ್ ಫೌಂಡೇಷನ್ ಅಥವಾ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಮೂಲಕ ಚಾಲನೆ ನೀಡಲಾಗುವುದು. ಇದು 2047 ರವರೆಗೂ ನಿರಂತರವಾಗಿ ಮುಂದುವರೆಯಲಿದೆ.