22nd December 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆಯ ಪ್ರತಿÀಗ್ರಾಮದ ಮತ್ತು ನಗರ ಪ್ರದೇಶಗಳ ಜಲಗ್ರಾಮ ಕ್ಯಾಲೆಂಡರ್ ಪಕ್ಕಾ ಮಾಹಿತಿ ಸಂಗ್ರಹಿಸಿ,  ರೈತರ ಕನಸುಗಳು ಮತ್ತು ಅವಶ್ಯಕತೆ ಏನು ಇರುತ್ತದೆಯೋ ಅದಕ್ಕೆ ಅನುಗುಣವಾದ ಯೋಜನೆ ರೂಪಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಲಹೆ ನೀಡಿದರು.

ತುಮಕೂರು ವಿಶ್ವ ವಿದ್ಯಾನಿಲಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲು ಮುಂದೆ ಬಂದಿರುವುದು ಉತ್ತಮವಾದ ಬೆಳವಣಿಗೆ. ಶಿಸ್ತುಬದ್ಧವಾದ ರೂಪುರೇಷೆಗಳೊಂದಿಗೆ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ 2047 ಕ್ಕೆ ವಿಶ್ವ ಗುರು ಆಗಲೂ ಮತ್ತು ಮುಖ್ಯಮಂತ್ರಿಯವರ ಪರಿಕಲ್ಪನೆಯಂತೆ ಕರ್ನಾಟಕ ರಾಜ್ಯ ಏಷ್ಯಾದಲ್ಲೇ ನಂಬರ್ ಒನ್ ಆಗಲೂ, ತುಮಕೂರು ಜಿಲ್ಲೆಯ ಫೈಲಟ್ ಯೋಜನೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವುದು ಸೂಕ್ತವಾಗಿದೆ.

ತುಮಕೂರು ಜಿಲ್ಲಾ ಪಂಚಾಯತ್ ಸಿಇಓರವರು ಹಾಗೂ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಯವರಾದ ಶ್ರೀ ಜಿ.ಪ್ರಭುರವರೊಂದಿಗೆ  ಸಮಾಲೋಚನೆ ನಡೆಸಿ, ಈಗಾಗಲೇ ದಿಶಾ ಸಮಿತಿಯಲ್ಲಿ ಇವೆಲ್ಲಾ ಚರ್ಚೆ ಆಗಿವೆ.  ಅನುಷ್ಠಾನಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳಲು ಸಲಹೆ ನೀಡಿದರು.

ತುಮಕೂರು ನಗರ ಗ್ರಂಥಾಲಯದಲ್ಲಿ, ಎಲ್ಲಾ ವಿಧವಾದ ಮಾಹಿತಿ ಒಂದೇ ಸೂರಿನಡಿ ದೊರೆಯುವಂತಾಗಬೇಕು, ಜಿಲ್ಲೆಯ ರೈತರುಗಳಿಗೆ ತುಮಕೂರು ಜಿಲ್ಲೆಯ ಗ್ರಾಮಪಂಚಾಯಿತಿ ವ್ಯಾಪ್ತಿ ಮತ್ತು ನಗರಗಳ ವ್ಯಾಪ್ತಿಯಲ್ಲಿ ಇರುವ ಗ್ರಂಥಾಲಯಗಳಲ್ಲಿ, ಆಯಾ ವ್ಯಾಪ್ತಿಯ ನೀರಿನ ಡಾಟಾ  ಇರುವಂತಾಗ ಬೇಕು, ಪ್ರತಿ ವರ್ಷ ಎಷ್ಟು ಯಾವ ಯೋಜನೆಗಳು ಜಾರಿ ಆಗಿವೆ,  ಎಂಬ ಮಾಹಿತಿಯೂ ವಿಶ್ಲೇಷಣೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಗ್ರಾಮೀಣ ಜ್ಞಾನ ಕೇಂದ್ರದ ಫೈಲಟ್ ಯೋಜನೆಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಯ ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆರಂಭಿಸಲು ಎಲ್.ಐ.ಎಸ್ ಅಕಾಡೆಮಿಯ ಡಾ. ಕೊಣ್ಣೂರ್‍ರವರು, ಡಾ.ರಾಜೆಂದ್ರಕುಮಾರ್‍ರವರು, ಡಾ.ಕಾಂತರಾಜುರವರು, ಡಾ.ಎಸ್.ಎಲ್.ಕಾಡುದೇವರ ಮಠರವರು, ಡಾ.ರಾಘವೇಂದ್ರರವರ ತಂಡಕ್ಕೆ ಸಲಹೆ ನೀಡಿ, ಅವರ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಜೊತೆಯಲ್ಲಿ ಶ್ರೀ ಟಿ.ಆರ್.ರಘೊತ್ತಮರಾವ್ ರವರು, ಶ್ರೀ ಸತ್ಯಾನಂದ್ ರವರು, ಶ್ರೀ ವೇದಾನಂದಮೂರ್ತಿರವರು,  ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ಶ್ರೀಮತಿ ತನುಜರವರು, ಜಿ.ಹೊಸಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ಇನ್ನೂ ಮುಂತಾದವರು ಇದ್ದರು.