27th July 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಪ್ರಥಮಬಾರಿ ಶಾಸಕರಾದ ಆರಂಭದಿಂದಲೇ ಅಭಿವೃದ್ಧಿ ಕಡೆ ವಿಶೇಷ ಗಮನಹರಿಸಿದ್ದಾರೆ. ಅಂದಿನಿಂದಲೂ ‘ನನಗೆ ಎಂ.ಎಲ್.ಎ ಬೇಡ ಸಾರ್’ ಅಂತ ಹೇಳಿಕೊಂಡೇ ಅಭಿವೃದ್ಧಿ ಸುದ್ಧಿ ಮಾಡಿದ್ದಾರೆ. ನನಗೂ ಕೆಲವು ಸಾರಿ ‘ಚೆಂಡು ಹೂ’ ಇಟ್ಟಿದ್ದಾರೆ.

ಅವರ ತಂದೆ ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು  ಸಹ ಕಳೆದ 40 ವರ್ಷಗಳಿಂದಲೂ ತುಮಕೂರು ಲೋಕಸಭಾ ಸದಸ್ಯರಾಗಿದ್ದಾರೆ.

ನಾನು 2001 ರಿಂದ ತುಮಕೂರು ನಗರದ ಅಭಿವೃದ್ಧಿ ಬಗ್ಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭಿಸಿ ಅಭಿವೃದ್ಧಿ ಜಾಗೃತಿ ಮೂಡಿಸುತ್ತಿದ್ದೇನೆ.

ಸತ್ಯ ಹೇಳ ಬೇಕಂದರೆ ನನಗೂ ಮೂಲ ತುಮಕೂರು ಬಗ್ಗೆ ಮಾಹಿತಿ ಇಲ್ಲ ಎಂದರೆ ಅವಮಾನವಾಗಲಾರದು.

ತುಮಕೂರು ಸ್ಮಾರ್ಟ್ ಸಿಟಿ ಜಿ.ಐ.ಎಸ್ ಲೇಯರ್ ಮಾಡಲು ಕೋಟಿಗಟ್ಟಲೇ ಹಣ ಖರ್ಚು ಮಾಡಿದೆ. ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ ಶ್ರೀ ಜಿ.ಎಸ್.ಬಸವರಾಜ್ ರವರ ಪರಿಕಲ್ಪನೆ. ತುಮಕೂರು ಡಾಟಾ ಜಿಲ್ಲೆ ಮಾಡಬೇಕು ಎಂದು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಅಬ್ಬರಿಸಿದ್ದೂ ಇತಿಹಾಸ.

ವಿಶ್ವ ವಿದ್ಯಾನಿಲಯದ ವಿಸಿಯವರಾದ ಶ್ರೀ ವೆಂಕಟೇಶ್ವರಲುರವರು ಮಹತ್ತರವಾದ ಕೆಲಸಕ್ಕೆ ಕೈಹಾಕಿದ್ದಾರೆ. ಶಕ್ತಿಪೀಠ ಫೌಂಡೇಷನ್ ಗುರಿ ಕರ್ನಾಟಕ ರಾಜ್ಯ ದೇಶದಲ್ಲಿ ಅತಿ ಹೆಚ್ಚಿನ ಅನುದಾನ ಪಡೆದ ರಾಜ್ಯವಾಗಬೇಕು ಎಂಬುದಾಗಿದೆ.

ಜಿಲ್ಲೆಯ ದೊರೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು ಸೂಚಿಸುವ ಗ್ರಾಮವನ್ನು ಆಯ್ಕೆ ಮಾಡಬೇಕು ಎಂಬ ಅನಿಸಿಕೆ ನನ್ನದಾಗಿದ್ದರೂ, ಏಕೋ ಎನೋ ತುಮಕೂರು ಬಗ್ಗೆ ವಿಶೇಷ ಆಸಕ್ತಿ ಬಂದಿದೆ.

ಶಾಸಕರ ಅಭಿಮಾನಿಗಳೇ ಬೀದಿಗಿಳಿಯಿರಿ, ಮೂಲ ತುಮಕೂರು ಬಗ್ಗೆ ಬೆಳಕು ಚೆಲ್ಲೋಣ. ನಗರದ ಯಾವುದಾದರೂ ಒಂದು ಶಾಲಾ ಕಾಲೇಜಿನ ‘ನ್ಯಾಷನಲ್ ಟೂರಿಸಂ ಯೂತ್ ಕ್ಲಬ್’ ಹೊಣೆಗಾರಿಕೆ ಹೊರಲು ಮುಂದೆ ಬನ್ನಿ. ಕಾಲೇಜು ಆಯ್ಕೆ ಹೊಣೆ ವಿಸಿಯವರಿಗೆ ಬಿಟ್ಟಿದ್ದು.

ವಿಶ್ವದಲ್ಲಿಯೇ ವಿಶಿಷ್ಠವಾದ ಆಲೋಚನೆಗೆ ಚಾಲನೆ ನಿಡೋಣ?

ವಿಶಿಷ್ಠ ಅಲೋಚನೆ ಉಳ್ಳ, ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ ರವರೇ ನಿಮ್ಮ ಐ.ಸಿ.ಸಿ.ಸಿ ತಂಡಕ್ಕೆ ಸೂಚಿಸಿ, ಮೂಲ ತುಮಕೂರು ಜಿ.ಐ.ಎಸ್ ಲೇಯರ್ ಡಾಟಾ ವಿಶ್ಲೇಷಣೆ ಮಾಡಲು ಸಿದ್ಧರಾಗಿರಲಿ.

ಪೂಜ್ಯ ಮೇಯರ್ ಸೇರಿದಂತೆ ನಗರದ ಎಲ್ಲಾ ಕಾರ್ಪೋರೇಟರ್‍ಗಳು ಪಕ್ಷಾತೀತವಾಗಿ ಕೈಜೋಡಿಸಲು ಹೃದಯಪೂರ್ವಕ ಮನವಿ.

ಮೂಲ ತುಮಕೂರಿನ ಹಿರಿಯ ನಾಗರೀಕರನ್ನು ಗುರುತಿಸುವ ಕೆಲಸಕ್ಕೆ, ಭಾಗದ ಕಾರ್ಪೋರೇಟರ್ ಚಾಲನೆ ನೀಡಲಿ.