3rd February 2025
Share

TUMAKURU:SHAKTHI PEETA FOUNDATION

ತುಮಕೂರು ನಗರದಲ್ಲಿ ಇರುವ  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ವಸಂತಾಕುಮಾರಿರವರು ನಮ್ಮ ಕಾಲೇಜು ಇರುವ ಬಡಾವಣೆ ಅಥವಾ ತುಮಕೂರು ನಗರದ ಶಾಸಕರು ಮತ್ತು ವಿಶ್ವವಿದ್ಯಾನಿಲಯ ಸೂಚಿಸುವ ಬಡಾವಣೆಯ ವ್ಯಾಪ್ತಿಯಲ್ಲಿ ಬಡಾವಣೆಗೊಂದು ಪುಸ್ತಕವನ್ನು ನಮ್ಮ ಕಾಲೇಜು ವಿದ್ಯಾರ್ಥಿಗಳಿಂದ ವಿಶ್ಲೇಷಣೆ ಮಾಡಿಸುವುದಾಗಿ ಘೋಷಣೆ ಮಾಡಿದ್ದಾರೆ.

ನಮ್ಮ ಕಾಲೇಜಿನಲ್ಲಿ ಸುಮಾರು 900 ವಿದ್ಯಾರ್ಥಿಗಳಿದ್ದಾರೆ, ಅವರವರ ಹುಟ್ಟೂರಿನ ಊರಿಗೊಂದು ಪುಸ್ತಕವನ್ನು ಸಹ ಸಿದ್ಧಪಡಿಸಲು, ನಮ್ಮ ಕಾಲೇಜು ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಸಭೆ ಆಯೋಜಿಸಿ ಜಾಗೃತಿ ಮೂಡಿಸಲಾಗುವುದು.