22nd December 2024
Share

TUMAKURU:SHAKTHIPEETA FOUNDATION

   ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ಮತ್ತು  ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕನಾಗಿ, ತುಮಕೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರೊಂದಿಗೆ ಸಮಾಲೋಚನೆ ನಡೆಸಿದ ಹಿನ್ನಲೆಯಲ್ಲಿ ‘ತುಮಕೂರು ರೀಸರ್ಚ್ ಫೌಂಡೇಷನ್’ ಸ್ಥಾಪಿಸಿ, ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದ್ದಾರೆ.

ವಿದ್ಯಾರ್ಥಿಗಳ ನಾಯಕತ್ವದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 1947 ರಿಂದ 2023 ರವರೆಗಿನ ಯೋಜನೆಗಳು ಮತ್ತು ಮುಂದೆ ಕೈಗೊಳ್ಳುವ ಯೋಜನೆಗಳ ಮಾಹಿತಿಗಳನ್ನು, ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತಲುಪಿಸುವ ಮತ್ತು ಯೋಜನೆಗಳ ಡಾಟಾ ಬಗ್ಗೆ ರಾಜ್ಯದ ಪ್ರತಿಯೊಂದು  ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ ರಚಿಸಿ, ‘2047 ರವರೆಗೂ ಮಾನಿಟರಿಂಗ್’ ಮಾಡುವ ಜೊತೆಗೆ, ವಿಧ್ಯಾರ್ಥಿಗಳು ತಮ್ಮ ಬದುಕಿನ ನಾಯಕತ್ವ ಪಡೆಯಲು ಸಹಕರಿಸುವ ಒಂದು ವೇದಿಕೆಯಾಗಲಿದೆ.

2047 ರ ವೇಳೆಗೆ ಭಾರತ ವಿಶ್ವ ಗುರು ಮತ್ತು ಏಷ್ಯಾದಲ್ಲಿಯೇ ನಂಬರ್ ಒನ್ ಕರ್ನಾಟಕದ ರಾಜ್ಯದ ಕನಸಿನ ಮೊದಲು ಮೆಟ್ಟಿಲು ಆಗಲಿದೆ. ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಎಂಬ ಕರಡು ವರದಿಯಲ್ಲಿರುವ ಎಲ್ಲಾ ಅಂಶಗಳ ಸಾಧಕ-ಭಾದಕಗಳ ಬಗ್ಗೆ ಸಮಾಲೋಚನೆ ನಡೆಸಿ, ಅಂತಿಮ ವರದಿ ಸಿದ್ಧಪಡಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಕ್ರಾಂತಿಕಾರಿಕ ಯೋಜನೆ ರೂಪಿಸಲಿದೆ.ನಾಲೇಡ್ಜ್ ಬ್ಯಾಂಕ್-2047 ರ ರೂಪುರೇಷೆಗೂ ಅಡಿಪಾಯ ಹಾಕಲಿದೆ.

ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನವಾದ  ದಿನಾಂಕ:15.09.2023 ರಂದು ನಡೆದ ಸಭೆಯಲ್ಲಿ ನಿರ್ಣಯ ಮಾಡಿ, ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜಯಂತಿ ದಿನವಾದ ದಿನಾಂಕ:02.10.2023 ರಂದು ಅತ್ಯಂತ ಸರಳವಾಗಿ ‘ತುಮಕೂರು ರೀಸರ್ಚ್ ಫೌಂಡೇಷನ್’ ಉದ್ಘಾಟನೆ ಮಾಡುತ್ತಿರುವುದು ಸಹ ಒಂದು ದಾಖಲೆಯಾಗಿದೆ.

ಮುಂದಿನ 100 ದಿನಗಳ ಒಳಗೆ ಒಂದು ಪವಾಡವನ್ನೇ ಸೃಷ್ಠಿಸಲು ಸಿದ್ಧತೆ ಆರಂಭವಾಗಿದೆ. ಸಹಕರಿಸಿದ ಮಾನ್ಯ ಕುಲಪತಿಯವರಾದ  ಶ್ರೀ ಎಂ.ವೆಂಕಟೇಶ್ವರಲುರªರು, ಮಾನ್ಯ ಕುಲಸಚಿವರಾದ ಶ್ರೀಮತಿ ನಾಹಿದಾ ಜಂ ಜಂ ರವರು, ಪ್ರೋ:ಕೆ.ಪ್ರಸನ್ನ ಕುಮಾರ್‍ರವರು, ಶ್ರೀಮತಿ ಮಂಗಳಗೌರಿರವರು, ಶ್ರೀ ಪರಶುರಾಮ್ ರವರು ಮತ್ತು ಶ್ರೀ ಡಾ.ಮಂಜುನಾಥ್ ರವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ.

ಇದೊಂದು ದೇಶದ ದೊರೆ ಶ್ರೀ ನರೇಂದ್ರಮೋದಿಯವರು ಮತ್ತು ರಾಜ್ಯದ ದೊರೆ ಶ್ರೀ ಸಿದ್ಧರಾಮಯ್ಯನವರು ಮೆಚ್ಚುವ ಯೋಜನೆಯಾಗಲಿದೆ.

ಉನ್ನತ ಶಿಕ್ಷಣ ಇಲಾಖೆಯ  ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್ ರವರು ‘ಸುಭಧ್ರವಾದ ರೂಪುರೇಷೆ’ ಸಿದ್ಧಪಡಿಸಲು ಆಲೋಚನೆ ಮಾಡಿದ್ದಾರೆ.