21st November 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ರಾಜ್ಯದ 18 ಕ್ಕೂ ಹೆಚ್ಚು ಜಿಲ್ಲೆಗಳ 2000 ಬಡ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅವರೆಲ್ಲ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು, ಶಾಸಕರು ಸೂಚಿಸುವ ಬಡಾವಣೆಗೊಂದು ಪುಸ್ತಕ ವಿಶ್ಲೇಷಣೆ ಮಾಡಿಸಲಾಗುವುದು. ಎಂದು ಪ್ರಾಂಶುಪಾಲರಾದ ಶ್ರೀ ರಾಜಕುಮಾರ್ ರವರು ಮತ್ತು ತಂಡ ಘೋಷಣೆ ಮಾಡಿಸಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಗಳ ಹುಟ್ಟೂರಿನ ಊರಿಗೊಂದು ಪುಸ್ತಕ ವಿಶ್ಲೇಷಣೆ ಮಾಡಿಸಲು ಜನಜಾಗೃತಿ ಮೂಡಿಸಲಾಗುವುದು ಎಂಬ ಭರವಸೆ ನೀಡಿದರು.

ತುಮಕೂರು ಸ್ಮಾರ್ಟ್ ಸಿಟಿಯವರು ನಿರ್ಮಾಣ ಮಾಡಿರುವ ವಿವಿಐಪಿ ಅತಿಥಿ ಗೃಹದಲ್ಲಿ, ರಾಜ್ಯ ಮಟ್ಟದ ನಾಲೇಡ್ಜ್ ಬ್ಯಾಂಕ್-2047 ಮತ್ತು ಅತ್ಯುತ್ತಮ ಗ್ರಂಥಾಲಯವನ್ನು   ಆರಂಭಿಸಬಹುದಾಗಿದೆ. ತುಮಕೂರು ವಿಶ್ವ ವಿದ್ಯಾನಿಲಯ ಸಹಕಾರ ನೀಡಲಿದೆ. ತುಮಕೂರು ನಗರಕ್ಕೆ ಬರುವ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಂತ್ರಿಗಳು ಬಹುತೇಕ ಇಲ್ಲಿಗೆ ಆಗಮಿಸಲಿದ್ದಾರೆ. ಇದೊಂದು ಅವರೆಲ್ಲರಿಗೂ ಸ್ಪೂರ್ತಿ ದಾಯಕವಾಗಲಿದೆ.

ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಮುಂದಿನ ಕ್ರಮ ಕೈಗೊಳ್ಳಲು ಸಮಾಲೋಚನೆ ನಡೆಸಲಾಯಿತು.

ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೊತ್ತಮರಾವ್ ರವರು ಮತ್ತು ಕಾಲೇಜು ಸಿಬ್ಬಂಧಿ ಜೊತೆಯಲ್ಲಿ ಇದ್ದರು.