22nd December 2024
Share

TUMAKURU: SHAKTHIPEETA FOUNDATION

    ಭಾರತದ ಇತಿಹಾಸದಲ್ಲಿ 2047 ರವರೆಗಿನ ಅಭಿವೃದ್ಧಿ ಅಧ್ಯಯನಕ್ಕೆ, ನಾಲೇಡ್ಜ್ ಬ್ಯಾಂಕ್-2047 ಆರಂಭಿಸಲು, ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ರವರ ಜಯಂತಿ ದಿವಸ, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ತುಮಕೂರು  ರೀಸರ್ಚ್ ಫೌಂಡೇಷನ್ ಉದ್ಘಾಟನೆ ಕಾರ್ಯಕ್ರಮ ಸರಳವಾಗಿ ನಡೆಯಿತು.

 ತುಮಕೂರು ಫೈಲÀಟ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡು ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಂತರ ಕರ್ನಾಟಕ  ರಾಜ್ಯ ಮಟ್ಟಕ್ಕೆ ವಿಸ್ತರಣೆ ಮಾಡಲು,  ತುಮಕೂರು ವಿಶ್ವ ವಿದ್ಯಾನಿಯಲದಲ್ಲಿ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಫೋಟೋದಲ್ಲಿ ಇರುವವರ ಸಮ್ಮುಖದಲ್ಲಿ ಶ್ರೀ ಎಂ.ವೆಂಕಟೇಶ್ವರಲುವರು, ಮಾನ್ಯಕುಲಪತಿ (ಪರೀಕ್ಷಾಂಗ),ಯವರಾದ ಶ್ರೀ ಕೆ. ಪ್ರಸನ್ನಕುಮಾರ್ ರವರು. ಡಾ. ಎ.ಎಂ ಮಂಜುನಾಥ್‍ರವರು, ಪ್ರೋ. ಪರಶುರಾಮ್ ರವರು ಮಾಡಿದ ಉಪನ್ಯಾಸದ ಮತ್ತು ನನ್ನ ಉದ್ಘಾಟನಾ ಮಾತಿನ ಹೂರಣ

  1. ತುಮಕೂರು ಜಿಲ್ಲೆಯ, 10 ತಾಲ್ಲೋಕುಗಳ, 50 ಹೋಬಳಿಗಳ, 330 ಗ್ರಾಮಪಂಚಾಯಿತಿಗಳ 2727 ಗ್ರಾಮಗಳು ಮತ್ತು 11 ನಗರ ಸ್ಥಳೀಯ ಪ್ರದೇಶಗಳ 253 ವಾರ್ಡ್‍ಗಳಲ್ಲಿ ಇರುವ ಬಡಾವಣೆವಾರು, ಪ್ರತಿಯೊಂದು ಗ್ರಾಮದ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕ(VISION DOCUMENT-2047) ರಚಿಸಲು, ಪ್ರತಿ ವ್ಯಾಪ್ತಿಯಲ್ಲೂ ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳ, ನಾಲೆಡ್ಜ್‍ಬಲ್ ವ್ಯಕ್ತಿಗಳು, ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ನೌಕರರನ್ನು ಒಳಗೊಂಡ  ರೀಸರ್ಚ್ ಫೌಂಡೇಷನ್ ಸ್ಥಾಪಿಸುವುದು.
  2. ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಪೌಂಡೇಷನ್‍ಗೆ, ಅಗತ್ಯ ಮೂಲಭೂತ ಸೌಕರ್ಯ ಗಳು ಸೇರಿದಂತೆ ಪ್ರಸ್ತಾವನೆ ಸಲ್ಲಿಸುವುದು.
  3. ಸ್ಟೂಡೆಂಟ್ ಎಕಾನಮಿಕ್ ಝೋನ್,  ಎಜುಕೇಷನ್ ಹಬ್ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಂಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಫಂಡ್ಸ್ ಗೆ ಪ್ರಸ್ತಾವನೆ ಸಲ್ಲಿಸುವುದು.
  4. ತುಮಕೂರು ರೀಸರ್ಚ್ ಫೌಂಡೇಷನ್ ರೂಪುರೇಷೆ ಸಿದ್ಧಪಡಿಸಿ ಸರ್ಕಾರಗಳ ಅನುಮೋದನೆ ಪಡೆಯುವುದು.
  5. ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸುವ ಮೊದಲು ಜಿಲ್ಲೆಯ ಶಾಲಾ ಕಾಲೇಜುಗಳ ಮೂಲಕ ವ್ಯಾಪಕ ಜನ ಜಾಗೃತಿ ಮೂಡಿಸಿ, ಜ್ಞಾನ ದಾನಿಗಳಿಂದ ಸಲಹೆ ಪಡೆಯುವುದು.

ಭಾಗವಹಿಸಿದ್ಧ ಎಲ್ಲರಿಗೂ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿ ನೀಡಲಾಯಿತು. ದಿನಾಂಕ:03.10.2023 ರಂದೇ, ಮೇಲ್ಕಂಡ ಅಂಶಗಳ ಬಗ್ಗೆ  ಇಂಟರ್ನ್‍ಷಿಪ್ ಗಾಗಿ ಸಲಹೆ ಪಡೆಯಲು ಸಭೆ ಆಯೋಜಿಸಿರುವುದಾಗಿ ಉಪಕುಲಸಚಿವರಾದ ಶ್ರೀಮತಿ ಮಂಗಳಗೌರಿರವರು ಪ್ರಕಟಿಸಿದರು.