TUMAKURU:SHAKTHIPEETA FOUNDATION
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ವಿಶ್ವಗುರು ಭಾರತ-2047’ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ‘ಏಷ್ಯಾದಲ್ಲಿಯೇ ಕರ್ನಾಟಕ ನಂಬರ್-1 ರಾಜ್ಯ-2047’ ರ ಕನಸು ನನಸು ಮಾಡಲು, ನಿರಂತರವಾಗಿ ಶ್ರಮಿಸಲು, ‘ದೇಶದ ಪ್ರಥಮ KNOWLEDGE BANK-2047’ ನ್ನು ದಿನಾಂಕ:15.10.2023 ರಂದು ಲೋಕಾರ್ಪಣೆ ಮಾಡಬೇಕು, ಎಂಬ ನನ್ನ ಕನಸಿಗೆ ‘ಶಕ್ತಿಭವನ’ ದ ಅಪೂರ್ಣ ಕಾಮಗಾರಿ ತಡೆಯೊಡ್ಡಿದೆ ಎಂದು ಹೇಳಲು ನೋವಾಗುತ್ತಿದೆ.
ಕಟ್ಟಡ ಅಪೂರ್ಣವಾದರೇನು? ಆರಂಭಿಕ ಚಟುವಟಿಕೆಗಳನ್ನು ‘ದೇವಿ ಪುಸ್ತಕ ಪಾರಾಯಣ’ ಮಾಡುವ ಮೂಲಕ ಆರಂಭಿಸಲು ನಿರ್ಧರಿಸಿದ್ದೇನೆ.ನಂತರ ಎಲ್ಲಾ ಕಾಮಗಾರಿ ಪೂರ್ಣಗೊಂಡ ನಂತರ ಲೋಕಾರ್ಪಣೆ ಮಾಡಲಾಗುವುದು.
‘ಶಕ್ತಿಭವನ’ ದ ‘ಪ್ರಂಟ್ ಎಲಿವೇಷನ್‘ ಗೆ ಇದಕ್ಕಿಂತ ಇನ್ನೇನು ಬೇಕು. ಬಂದವರೆಲ್ಲಾ ಮರ ಕಡಿಯಿರಿ ಎಂಬ ಸಲಹೆ ನೀಡುತ್ತಿದ್ದಾರೆ. ಅವರ ಸಲಹೆಗಳಿಗೆ ನನ್ನ ತಿರಸ್ಕಾರವಿದೆ. ನಾನೇ ಹಾಕಿ ಬೆಳೆಸಿದ ಮರಗಳನ್ನು ಕಡಿಯುವುದರಲ್ಲಿ ಅರ್ಥವಿಲ್ಲ. ಈ ಮರಗಳು ನನಗೆ ಯಾವುದೇ ರೀತಿ ಅಡ್ಡಬರುವುದಿಲ್ಲ.
ದಿನಾಂಕ:28.10.2022 ರಂದು ಭೂಮಿ ಪೂಜೆ ಮಾಡಿದ್ದರೂ, ನವೆಂಬರ್ 7 ರಂದು ಕಟ್ಟಡದ ಕಾಮಗಾರಿಯನ್ನು ಅಧಿಕೃತಕವಾಗಿ ಆರಂಭಿಸಲಾಯಿತು. ಕಟ್ಟಡದ ಆರಂಭದ ದಿವಸವೇ ದಿನಾಂಕ:15.10.2023 ರಂದು ಶರನ್ನವರಾತ್ರಿ ಪೂಜೆ ಮಾಡುವ ಮೂಲಕ ‘ಶಕ್ತಿಭವನವನ್ನು ಲೋಕಾರ್ಪಣೆ’ ಮಾಡಬೇಕು ಎಂದು ತೀರ್ಮಾನ ಮಾಡಿಕೊಂಡಿದ್ದೇವು.
ಆದರೇ ನಾವು ಅಂದು ಕೊಂಡಂತೆ ಆದರೇ ನಮ್ಮನ್ನು ಹಿಡಿಯುವವರು ಯಾರು? ದೇವಿಯ ಕೃಪೆಗೆ ಬದ್ಧರಾಗಿರಲೇ ಬೇಕಲ್ಲವೇ?