22nd December 2024
Share

TUMAKURU:SHAKTHIPEETA FOUNDATION

  ತುಮಕೂರು ಜೆಲ್ಲೆ ಬೆಂಗಳೂರು ಜಿಲ್ಲಗೆ ಹೆಬ್ಬಾಗಿಲು. ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಇನ್ನೂ ಹಲವಾರು ಯೋಜನೆಗಳಿಗೆ ಚಾಲನೇ ನೀಡಬೇಕಿದೆ. ಒಂದು ವ್ಯವಸ್ಥಿತವಾಗ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಜಿಲ್ಲಾಡಳಿತ ಸಜ್ಜಾಗಬೇಕಿದೆ ಎಂದು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಪ್ರತಿಪಾದಿಸುತ್ತಾರೆ.

ಚುನಾಯಿತ ಜನಪ್ರತಿನಿಧಿಗಳು ಬರುತ್ತಾರೆ, ಹೋಗುತ್ತಾರೆ, ಅಧಿಕಾರಿಗಳು ಬುರುತ್ತಾರೆ, ಹೋಗುತ್ತಾರೆ. ಆದರೆ ಜಿಲ್ಲೆಗೆ ಏನು ಬೇಕು ಎಂಬ ಅಭಿವೃದ್ಧಿ ಮಾರ್ಗದರ್ಶಿ ಸೂತ್ರ ಇರಬೇಕಲ್ಲವೇ?

ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾಗಿ ಹಲವಾರು ನಿರ್ಣಯಗಳನ್ನು ಕೈಗೊಂಡರೂ, ಅವರ ನೀರಿಕ್ಷೆಗೆ ತಕ್ಕಂತೆ ಪ್ರಗತಿ ಕಾಣಲಿಲ್ಲ. ಕಾರಣಗಳು ಹಲವಾರು. ಈ ಹಿನ್ನಲೆಯಲ್ಲಿ, ಜಿಲ್ಲೆಯ ಪ್ರತಿಯೊಂದು ಗ್ರಾಮ ಮತ್ತು ಬಡಾವಣೆ ಮಟ್ಟದಲ್ಲಿ ವಿದ್ಯಾರ್ಥಿಗಳ ಹಂತದಲ್ಲಿಯೇ ಅಭಿವೃದ್ಧಿ ಬೀಜ ಬಿತ್ತಲೂ ಹೊರಟಿದ್ದಾರೆ.

ದೇಶದಲ್ಲಿಯೇ ಪ್ರಥಮ ಎಂಬಂತೆ ಅಭಿವೃದ್ಧಿ ವಿಚಾರಗಳನ್ನು,  ತುಮಕೂರು ವಿಶ್ವವಿದ್ಯಾನಿಲಯ ಇಂಟರ್ನ್ ಶಿಪ್ ಅಡಿ ತರಲು ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ತುಮಕೂರು ರೀಸರ್ಚ್ ಫೌÀಂಡೇಷನ್-2047 ಜನ್ಮ ತಾಳಿದೆ.

ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹತ್ತರವಾದ ಪಾತ್ರ ವಹಿಸಬೇಕಿದೆ.