TUMAKURU:SHAKTHIPEETA FOUNDATION
TRF-2047 :ಗ್ರಾಮೀಣ ಡಿಜಿಟಲ್ ಸೇವೆ
‘ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ’ ನೇಮಕ ಮಾಡಬೇಕು ಎಂಬುದು ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯಲ್ಲಿನ ಅಂಶವಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಿಂದ ಆರಂಭಿಸಿ, ಗ್ರಾಮ ಮಟ್ಟದವರೆಗೂ ಡಿಜಿಟಲ್ ಸೇವೆಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಹೆಸರಿನಲ್ಲಿ ನೀಡುತ್ತಿವೆ ಮತ್ತು ಅಗತ್ಯ ಡಾಟಾ ಸಂಗ್ರಹ ಮಾಡುತ್ತಿವೆಯಂತೆ.
ಇವುಗಳ ಸೇವೆ ಮತ್ತು ಕರ್ತವ್ಯ ಏನು? ಯಾವ ಯಾವ ಸರ್ಕಾರ ಈ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸಾಧಕ- ಬಾಧಕಗಳು ಏನು? ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ರೂಪ್ ನಡಿ ತರಲು ಸಾದ್ಯಾವೇ, ಎಂಬ ಬಗ್ಗೆ ಸರ್ಕಾರದಲ್ಲಿನ ಅಧ್ಯಯನ ವರದಿಗಳು ಏನು ಹೇಳುತ್ತವೆ, ಎಂಬ ಮಾಹಿತಿ ಪಡೆಯಲು ಒಂದು ಉಪ ಸಮಿತಿಯನ್ನು ತುಮಕೂರು ರೀಸರ್ಚ್ ಫೌಂಡೇಷನ್-2047 ರಚಿಸಲು ಚಿಂತನೆ ನಡೆಸಿದೆ.
- ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ)
- ವೀಲೇಜ್ ಲೆವೆಲ್ ಎಂಟರ್ ಪ್ರೆನ್ಯೂರ್ (ವಿ.ಎಲ್.ಇ)
- ಗ್ರಾಮ-1
- ತುಮಕೂರು-1
- ನಾಡಕಚೇರಿ
- ಭೂಮಿ
- ಅಟಲ್ ಕೇಂದ್ರ
- ಬಾಪೂಜಿ ಸೇವಾ ಕೇಂದ್ರ
- ಸೇವಾ ಸಿಂಧು.
- ರೈತ ಸಂಪರ್ಕ ಕೇಂದ್ರ
- ಗ್ರಾಮಪಂಚಾಯಿತಿ.
- ವಿಲೇಜ್ ಅಕೌಂಟೆಂಟ್
- ರೆವಿನ್ಯೂ ಇನ್ ಸ್ಪೆಕ್ಟರ್.
- ಅಂಗನವಾಡಿ
- ಗ್ರಾಮೀಣ ಗ್ರಂಥಾಲಯ
- ತಾಲ್ಲೋಕು ಕಚೇರಿಗಳ ರೆಕಾರ್ಡ್ ರೂಮ್
- ಬ್ಯಾಂಕ್ ಮಿತ್ರ.
- ರೈತ ಮಿತ್ರ
- ವಿವಿಧ ಗಣತಿಗಳು
- ಅಂಕಿಅಂಶಗಳ ಇಲಾಖೆ.
- ಅಂಚೆ ಕಚೇರಿ.
- ಇತ್ಯಾದಿ
ಈ ಹಿನ್ನಲೆಯಲ್ಲಿ ತುಮಕೂರಿನ ಒಂದು ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ) ಗೆ ಭೇಟಿ ನೀಡಿ, ಸಿ.ಎಸ್.ಸಿ ಜಿಲ್ಲಾ ಮ್ಯಾನೇಜರ್ ಶ್ರೀ ಲೋಕೇಶ್ ರವರೊಂದಿಗೆ ಮತ್ತು ಅಲ್ಲಿಗೆ ಆಗಮಿಸಿದ್ಧ ಪಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
ಈ ಬಗ್ಗೆ ಮಾಹಿತಿಗಳಿದ್ದಲ್ಲಿ ಆಸಕ್ತರು ಜ್ಞಾನದಾನ ಮಾಡಿ.