TUMAKURU:SHAKTHIPEETA FOUNDATION
ತುಮಕೂರು ರೀಸರ್ಚ್ ಫೌಂಡೇಷನ್-2047, ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮದ ಮತ್ತು ಪ್ರತಿಯೊಂದು ಬಡಾವಣೆಯಲ್ಲಿನ ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳ ಸಮೀಕ್ಷೆಯನ್ನು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರ ಕ್ಷೇತ್ರದಿಂದ ಆರಂಭಿಸಲು ಹೆಜ್ಜೆ ಇಡಲಿದೆ.
ತುಮಕೂರು ಜಿಲ್ಲೆಯ, 11 ವಿಧಾನಸಭಾ ಕ್ಷೇತ್ರದ, 330 ಗ್ರಾಮಪಂಚಾಯಿತಿ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ 253 ವಾರ್ಡ್‍ಗಳ ವ್ಯಾಪ್ತಿಯಲ್ಲಿನ ಬಡಾವಣೆಗಳ ಪಟ್ಟಿಯನ್ನು ಮಾಡಲಾಗುವುದು.
ತುಮಕೂರು ವಿಶ್ವ ವಿದ್ಯಾನಿಲಯ ಮೊದಲು ತನ್ನ ವ್ಯಾಪ್ತಿಯ ಕಾಲೇಜುಗಳನ್ನು ವಿಧಾನಸಭಾ ಕ್ಷೇತ್ರವಾರು ಮಾಡಿ, ಕಾಲೇಜುವಾರು ಜಿಯೋಫೆನ್ಸ್ ಮಾಡಲು ಸಮಾಲೋಚನೆ ನಡೆಸಿದ್ದೆವು. ಆದರೇ 11 ವಿಧಾನಸಭಾ ಕ್ಷೇತ್ರವಾರು ಕಾಲೇಜುಗಳ ಜಿಐಎಸ್ ಲೇಯರ್/ಸಮೀಕ್ಷೆ ನೋಡಿದ ನಂತರ, ನನಗೆ ಅನಿಸಿರುವುದು, ವಿದ್ಯಾರ್ಥಿಗಳವಾರು ಗ್ರಾಮವಾರು, ಬಡಾವಣೆವಾರು ಜಿಯೋಫೆನ್ಸ್ ಸಾಕು.
ಆಯಾ ಗ್ರಾಮದ/ಬಡಾವಣೆಯ ಯಾವುದೇ ವಿಧ್ಯಾರ್ಥಿ, ಜಿಲ್ಲೆಯ, ರಾಜ್ಯದ, ದೇಶದ, ಪ್ರಪಂಚದ ಯಾವುದೇ ಶಾಲಾ ಕಾಲೇಜಿನಲ್ಲಿ ಓದುತ್ತಿದ್ದರೂ, ಆ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047 ರ ಸದಸ್ಯನಾಗಿರುವುದರಿಂದ, ವಿದ್ಯಾರ್ಥಿವಾರು ಶಾಲಾ ಕಾಲೇಜುವಾರು ಡಿಜಿಟಲ್ ಮಾಹಿತಿ, ಬೆರಳ ತುದಿಗೆ ದೊರೆಯಲಿದೆ.
ವಿಧಾನಸಭಾ ಕ್ಷೇತ್ರವಾರು– 2047 ಸಮಿತಿ.
- ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ. ಡಾ.ಜಿ.ಪರಮೇಶ್ವರ್ ರವರು ಸೂಚಿಸಿದ ಒಬ್ಬ ಪ್ರತಿನಿಧಿ
- ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದ ಒಬ್ಬ ಪ್ರತಿನಿಧಿ
- ತುಮಕೂರು ಜಿಲ್ಲೆಯ ನಾಲ್ಕು ಜನ ವಿಧಾನಸಭಾ ಸದಸ್ಯರು ಸೂಚಿಸಿದ ಒಬ್ಬೊಬ್ಬರು ಸೂಚಿಸಿದ ಒಬ್ಬ ಪ್ರತಿನಿಧಿ.
- ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದ ಒಬ್ಬ ಪ್ರತಿನಿಧಿ.
- ತುಮಕೂರು ಜಿಲ್ಲಾಧಿಕಾರಿ ಸೂಚಿಸಿದ ಒಬ್ಬ ಪ್ರತಿನಿಧಿ
- ತುಮಕೂರು ಜಿಲ್ಲಾ ಪಂಚಾಯತ್ ಸೂಚಿಸಿದ ಒಬ್ಬ ಪ್ರತಿನಿಧಿ
- ತುಮಕೂರು ವಿಶ್ವ ವಿದ್ಯಾನಿಲಯ ವಿಸಿಯವರು ಸೂಚಿಸಿದ ಒಬ್ಬ ಪ್ರತಿನಿಧಿ.
- ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು.
- ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸರ್ವ zsರ್ಮ/ಜಾತಿ/ ಉಪಜಾತಿಯ ಪ್ರತಿನಿಧಿಗಳು.
ಈ ಮೇಲ್ಕಂಡ ಸಮಿತಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಲಿದೆ. ಇದೇ ರೀತಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೂ ಮುಂದುವರೆಯಲಿದೆ.
ನಂತರ ಪ್ರತಿಯೊಂದು ಗ್ರಾಮ/ಬಡಾವಣೆ ಹಂತದ ವಿಷನ್‍ಗ್ರೂಪ್, ಪ್ರಷರ್‍ಗ್ರೂಪ್ ಮತ್ತು ಚುನಾಯಿತ ಜನಪ್ರತಿನಿಧಿಗಳ ಗ್ರೂಪ್‍ಗೆ ರವಾನಿಸಲಾಗುವುದು. ಬದಲಾವಣೆ ಇದ್ದಲ್ಲಿ ಸಲಹೆ ನೀಡಬಹುದಾಗಿದೆ.
ಅಂದರೆ ಬಿ.ಇ.ಓ, ಪಿಯು ಡಿಡಿ, ವಿಸಿ ವಿಶ್ವವಿದ್ಯಾನಿಲಯ ಮತ್ತು ಸಂಭಂಧಿಸಿದ ಇಲಾಖೆಗಳು ಮುದ್ರೆ ಒತ್ತಲಿವೆ. ಅದೇ ಡಾಟಾ/ ನಕ್ಷೆಗೆ, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ತುಮಕೂರು ಜಿಲ್ಲಾಧಿಕಾರಿ ಮತ್ತು ತುಮಕೂರು ಜಿಲ್ಲಾ ಪಂಚಾಯತ್ ಸಿ.ಇ.ಓ ಮುದ್ರೆ ಬಿಳಬೇಕಿದೆ.
- ಗ್ರಾಮ/ಬಡಾವಣೆ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್ -2047 : ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳು.
- ಗ್ರಾಮ/ಬಡಾವಣೆ ವ್ಯಾಪ್ತಿಯ ಚುನಾಯಿತ ಜನಪ್ರತಿ ನಿಧಿಗಳ ಗ್ರೂಪ್-2047: ಗ್ರಾಮಪಂಚಾಯಿತಿ, ತಾಲ್ಲೋಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಕ್ಷೇತ್ರ, ವಿಧಾನ ಪರಿಷತ್ ಕ್ಷೇತ್ರ, ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲರ್/ನಗರಸಭಾ ಸದಸ್ಯರು/ಪುರಸಭೆ ಸದಸ್ಯರು/ ಪಟ್ಟಣ ಪಂಚಾಯಿತಿ ಸದಸ್ಯರು ಇರಲಿದ್ದಾರೆ.
- ಗ್ರಾಮ/ಬಡಾವಣೆ ವ್ಯಾಪ್ತಿಯ ವಿಷನ್ ಗ್ರೂಪ್-2047 : ಗ್ರಾಮ ಮಟ್ಟz/ಬಡಾವಣೆ ಮಟ್ಟದÀ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸರ್ಕಾರದಿಂದ ಅನುಮೋದನೆ ಪಡೆಯಬೇಕಿದೆ.
- ಗ್ರಾಮ/ಬಡಾವಣೆ ವ್ಯಾಪ್ತಿಯ ಪ್ರಷರ್ ಗ್ರೂಪ್-2047: ಆಸಕ್ತರು ನೊಂದಾಯಿಸಿ ಕೊಳ್ಳ ಬಹುದು.
ಮಾರ್ಗದರ್ಶಿ ಸೂತ್ರಕ್ಕೆ ಸರ್ಕಾರದ ಮುದ್ರೆ ಬಿದ್ದ ನಂತರ ಅಂತಿಮ ಗೊಳಿಸಲಾಗುವುದು. ಈ ವಿಷಯದ ಬಗ್ಗೆ ಮೊದಲು ‘ತುಮಕೂರು ರೀಸರ್ಚ್ ಫೌಂಡೇಷನ್-2047’ ರಲ್ಲಿ ನಿರ್ಣಯ ಮಾಡಬೇಕಿದೆ.