9th October 2024
Share

TUMAKURU:SHAKTHI PEETA FOUNDATION

   ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್  ಇದೂವರೆಗೂ  ತುಮಕೂರಿನ ಸ್ಪೆಕ್ಟ್ರಾ ಸೋಶಿಯೇಟ್ಸ್ ನ ಶ್ರೀ ಸತ್ಯಾನಂದ್ ರವರು, ಬೆಂಗಳೂರಿನ ಪ್ರೀತಿ ಕ್ಯಾಡ್ ಕನ್ಸ್‍ಲ್‍ಟೆನ್ಸಿ ಯ ಶ್ರೀ ವೇದಾನಂದಾ ಮೂರ್ತಿರವರು ಮತ್ತು ಅವರ ತಂಡಗಳ ಜೊತೆ ಕಳೆದ 20 ವರ್ಷಗಳಿಂದಲೂ ಉಚಿತವಾಗಿ ಸಲಹೆ ಪಡೆಯಲಾಗುತ್ತಿದೆ.

ಈಗ ಬೆಂಗಳೂರಿನ ಆದ್ಯಪ್ರಜ್ಞ ಟೆಕ್ನಾಲಜಿಯ ಶ್ರೀ ಎಂ.ಎಸ್.ಶ್ರೀಕಾಂತ್ ರವರು ನಮ್ಮ ಜೊತೆ ಹೆಜ್ಜೆ ಹಾಕಲು ಮುಂದೆ ಬಂದಿದ್ದಾರೆ. ಕಾನೂನು ಸಲಹೆಗಾರರಾಗಿ ಶ್ರೀ ಎಂ.ಮಲ್ಲಿಕಾರ್ಜುನರವರು ಉಚಿತವಾಗಿ ಸಲಹೆ ನೀಡುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ರಾಜ್ಯದ ವಿಶ್ವ ವಿದ್ಯಾನಿಯಗಳ ಜೊತೆ ವ್ಯವಹಾರ ನಡೆಸುತ್ತಿರುವುದರಿಂದ ಇನ್ನೂ ಮುಂದೆ ಉಚಿತವಾಗಿ ಸೇವೆ ಪಡೆಯಲು ಮನಸ್ಸು ಇಚ್ಚಿಸುತ್ತಿಲ್ಲ. ನನಗೆ ಕಾನೂನು, ತಾಂತ್ರಿಕ, ಜಿ.ಐ.ಎಸ್. ಸಾಪ್ಟ್ ವೇರ್ ಡೆವಲಪ್ಪರ್, ಸೋಶಿಯಲ್ ಮೀಡಿಯಾ ಮತ್ತು ವೆಬ್‍ಸೈಟ್ ಡೆವಲಪ್ಪರ್ ಹಾಗೂ ಯೋಜನಾವಾರು ಸಲಹಾಗಾರರ ಅಗತ್ಯವಿದೆ.

ಈಗ ಉಚಿತವಾಗಿ ಜಾÐನದಾನ ಮಾಡಿ, ನಂತರ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅನುದಾನ ಮಂಜೂರು ಮಾಡಿದಾಗ, ತಮ್ಮ ಸೇವೆಗೆ ತಕ್ಕ ಸಂಭಾವನೆ ಪಡೆಯಲು ಎಂ.ಓ.ಯು ಮಾಡಿಕೊಳ್ಳಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಈ ಎಂ.ಓ.ಯು ಗಳನ್ನು ಸಹ ಪ್ರಸ್ತಾವನೆಯಲ್ಲಿ ಸೇರ್ಪಡೆ ಮಾಡಲಾಗುವುದು. ಇದೊಂದು ವಿಶಿಷ್ಠ, ವಿನೂತನವಾದ ಪಿಪಿಪಿ ಯೋಜನೆ ಪ್ರಸ್ತಾವನೆಯಾಗಲಿದೆ.

ಅವರವರ ಕಚೇರಿಯ ಜೊತೆಗೆ, ತುಮಕೂರಿನ ಶಕ್ತಿಭವನದಲ್ಲಿ ಹಾಗೂ ಶಕ್ತಿಪೀಠ ಕ್ಯಾಂಪಸ್ ನಲ್ಲಿ  ಕಾರ್ಯ ನಿರ್ವಹಿಸಲು ಆಸಕ್ತಿ ಇರಬೇಕು.  ಕೆಲಸ ಗಾರರು ಉಳಿದುಕೊಳ್ಳಲು ವ್ಯವಸ್ಥೆ ಇರಲಿದೆ. ಅಗತ್ಯವಿದ್ದಾಗ ನನ್ನ ಜೊತೆ ರಾಜ್ಯ, ದೇಶ ಮತ್ತು ವಿದೇಶ ಸುತ್ತಲೂ ಬರಲು ಸಹಮತ ಇರಬೇಕು.

ತುಮಕೂರು ರೀಸರ್ಚ್ ಫೌಂಡೇಷನ್-2047 ಕೆಲಸ ಕಾರ್ಯಗಳಿಗೂ ಇದೇ ಮಾದರಿಯಲ್ಲಿ ಪ್ಯಾನಲ್ ಮಾಡಲು ಕಾನೂನು ಮತ್ತು ನಿಯಮದ ಬಗ್ಗೆ ಸಮಾಲೋಚನೆ ನಡೆಯಲಿದೆ.

ನನಗೆ ಕರೆ ಮಾಡಿದರೆ ನಿಮ್ಮ ಕಚೇರಿಗೆ ಬರಲಿದ್ದೇನೆ.