27th July 2024
Share

TUMAKURU:SHAKTHIPEETA FOUNDATION

 ನಂಬರ್ ಒನ್ ಕರ್ನಾಟಕ ಜ್ಞಾನದಾನ ದಾನ ಮಾಡಿ ಕರಡು ಪ್ರಸ್ತಾವನೆಯ ಅಂಶಗಳಲ್ಲಿನ, ಪ್ರಮುಖ ಅಂಶ ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ (ವಿಷನ್ ಡಾಕ್ಯುಮೆಂಟ್-2047) 

  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಬೇಕಾದರೆ. ನಮ್ಮ ರಾಜ್ಯದಲ್ಲಿನ 224 ವಿಧಾನಸಭಾ ಕ್ಷೇತ್ರಗಳಲ್ಲಿ, ಯಾವುದಕ್ಕೆ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಕೊರತೆಯಿದೆ. ಆ ಯೋಜನೆಗೆ, ಆಯಾ ಇಲಾಖೆಯಿಂದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದಲ್ಲಿ ಮಾತ್ರ ಹೆಚ್ಚಿನ ಅನುದಾನ ತರಲು ಅಡಿಪಾಯ ಹಾಕಿದಂತಾಗುತ್ತದೆ.

ಈ ಪ್ರಸ್ತಾವನೆಗೆ ಮೂಲ ಮಾಹಿತಿ, ಪ್ರತಿಯೊಂದು ಗ್ರಾಮ ಹಾಗೂ ಪ್ರತಿಯೊಂದು ಬಡಾವಣೆಯ ಹಂತ ಎಂಬ ನನ್ನ ಪ್ರತಿಪಾದನೆಗೆ ಎಲ್ಲರೂ ಒಪ್ಪುತ್ತಾರೆ. ಆದರೇ ಹೇಗೆ ಆರಂಭ ಮಾಡಬೇಕು, ಎಷ್ಟು ಹಣ ಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರದ ಯೋಜನಾ ಇಲಾಖೆಯಲ್ಲಿ ಚರ್ಚೆ ಆರಂಭವಾದಾಗ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಏಕೆ, ಫೈಲಟ್ ಯೋಜನೆ ಆರಂಭ ಮಾಡಬಾರದು ಎಂಬ ಪರಿಕಲ್ಪನೆ ಮೂಡಿತು.

ದಿನಾಂಕ:06.09.2023 ರಂದು ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರನ್ನು ಭೇಟಿಯಾದಾಗ ನನ್ನ ಜೊತೆ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಇದ್ದರು. ಶ್ರೀಮತಿ ಪ್ರೋ.ಮಂಗಳಗೌರಿರವರು ಮತ್ತು ಶ್ರೀ ಪ್ರೋ.ಪರಶುರಾಮ್ ರವರನ್ನು ವಿಸಿಯವರು ಕರೆದು ನಡೆಸಿದ ಪ್ರತಿಫಲ

ದಿನಾಂಕ: 15.09.2023 ರಂದು ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನ ಮೊದಲು ಸಭೆ ನಡೆಸಿದೆವು. ದಿನಾಂಕ:02.10.2023 ರಂದು ಮಹಾತ್ಮ ಗಾಂಧಿ ಜಯಂತಿ ಹಾಗೂ ಜೈ ಜವಾನ್ಜೈ ಕಿಸಾನ್ ಘೋಷಣೆ ಮಾಡಿz, ಮಾಜಿ ಪ್ರಧಾನಿಯವರಾದ À ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮ ದಿನ ಸರಳವಾಗಿ ತುಮಕೂರು ರೀಸರ್ಚ್ ಫೌಂಡೇಷನ್-2047, ಜನ್ಮ ತಾಳಿತು.

ದಿನಾಂಕ:02.11.2023 ಅಂದರೆ 60 ದಿನಗಳಾಗುವ ಮುಂಚೆ, ದಿನಾಂಕ:30.10.2023 ರೊಳಗೆ –‘STUDENT MODULE: DATA MITHRA VISION -2047’ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು. ಮುಂದಿನ 4 ತಿಂಗಳ ಅವಧಿಯಲ್ಲಿ ಒಂದು ಸೆಮಿಸ್ಟರ್ ವಿದ್ಯಾರ್ಥಿಗಳು ಅಂದರೆ, ತುಮಕೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯ ಸುಮಾರು 15000 ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ (ವಿಷನ್ ಡಾಕ್ಯುಮೆಂಟ್-2047)  ಮಹತ್ವದ ನಿರ್ಣಯಕ್ಕೆ, ವಿಶ್ವ ವಿದ್ಯಾನಿಲಯದ ಸುಮಾರು 1000 ಕ್ಕೂ ಹೆಚ್ಚು ಅಧ್ಯಾಪಕ ವೃಂದ ಮತ್ತು ನೌಕರರ ವೃಂದ ಸಾಕ್ಷಿಯಾಗಲಿದ್ದಾರೆ.ಜೊತೆಗೆ ಪ್ರತಿಯೊಂದು ಗ್ರಾಮದ/ಬಡಾವಣೆಯ ಲಕ್ಷಾಂತರ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.

  ಈ ಅವಧಿಯಲ್ಲಿ ಇವರೆಲ್ಲರ ಸಲಹೆ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ, ಅಂತಿಮ ಟೆಂಪ್ಲೇಟ್ ಸಿದ್ಧವಾಗಲಿದೆ ಎಂಬ ಆಶಾಭಾವನೆ ನನ್ನದಾಗಿದೆ.

ನಮ್ಮ ವಿದ್ಯಾರ್ಥಿಗಳು ಅಧ್ಯಾಪಕ ವೃಂದದ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲೆಯ ಸುಮಾರು 3000 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತ್ತು ಬಡಾವಣೆಗಳಲ್ಲಿ, ಆಯಾ ವ್ಯಾಪ್ತಿಯ 6 ನೇ ತರಗತಿಯಿಂದ ಪಿ.ಹೆ.ಡಿ ವರೆಗಿನ, ಎಲ್ಲಾ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047, ರಚಿಸಲಿದ್ದಾರೆ.

ಇವುಗಳ ಲೋಕಾರ್ಪಣೆಯನ್ನು ಒಂದೇ ದಿವಸ ದೇಶದ ದೊರೆ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು, ರಾಜ್ಯದ ದೊರೆ ಮುಖ್ಯ ಮಂತಿಯವರಾದ್ರ ಶ್ರೀ ಸಿದ್ಧರಾಮಯ್ಯನವರು, ತುಮಕೂರು ಜಿಲ್ಲೆಯ ದೊರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಪರಮೇಶ್ವರ್ ರವರು ಸೇರಿದಂತೆ ಎಲ್ಲಾ ಹಂತದ ಚುನಾಯಿತ ಜನ ಪ್ರತಿನಿಧಿಯವರು ಸಾಕ್ಷಿಯಾಗಲಿದ್ದಾರೆ.

‘ಕರ್ನಾಟಕ ರಾಜ್ಯದ ಮತ್ತು ಭಾರತ ದೇಶದ ಎಲ್ಲಾ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಮಾದರಿಯಾಗಲಿದೆ, ತುಮಕೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಸಾಹಸ’.

ಇದು ಪ್ರಧಾನಿಯವರ ವಿಶ್ವ ಗುರು ಭಾರತ -2047 ಮತ್ತು ಮುಖ್ಯಮಂತ್ರಿಯವರ  ಏಷ್ಯಾದಲ್ಲಿ ಕರ್ನಾಟಕ ರಾಜ್ಯ ನಂಬರ್ ಒನ್ 2047 ಆಗಲು, ಬ್ರ್ಯಾಂಡ್ ನಮ್ಮೂರು/ ನಮ್ಮ ಬಡಾವಣೆಗೆ ಭಧ್ರ ಬುನಾದಿಯಾಗಲಿದೆ.

ಜೊತೆಗೆ ‘ಡಾಟಾ ಒನ್ಮ್ಯಾಪ್ ಒನ್ ಘೋಷಣೆಗೂ, ತುಮಕೂರು ಡಾಟಾ ಜಿಲ್ಲಾ ಕನಸಿಗೂ ಅಡಿಪಾಯವಾಗಲಿದೆ. ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿಯ ಮೊದಲ ಸಭೆಯ ಅಜೆಂಡಾಕ್ಕೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಸಲಹೆಯೂ ಇದಾಗಿತ್ತು.

ಆಗಿನ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಈಗಿನ ರಾಜ್ಯ ಸರ್ಕಾರದ ಅಡಿಷನಲ್ ಚೀಪ್ ಸೆಕ್ರೇಟರಿ ಮತ್ತು ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಕನಸು ಇದಾಗಿತ್ತು. ಈ ಕಾರಣದಿಂದಲೇ ವಿದ್ಯಾರ್ಥಿ ಕೆ.ಆರ್.ಸೋಹನ್ ರವರಿಗೆ ಪ್ರಾಜೆಕ್ಟ್ ವರ್ಕ್ ಆಗಿ ಅಧ್ಯಯನ ಮಾಡಲು ಅವಕಾಶ ನೀಡಿದ್ದರು.

  ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾದ ನನ್ನೊಂದಿಗೆ ಉಚಿತವಾಗಿ, ಸರ್ಕಾರದ ಯಾವುದೇ ಹಣಕಾಸಿನ ವ್ಯವಹಾರವಿಲ್ಲದೆ ಎಂ.ಓ.ಯು ಮಾಡಿಕೊಂಡಿದ್ದರು. ಈಗ ತುಮಕೂರು ವಿಶ್ವ ವಿದ್ಯಾನಿಲಯವೂ ಸಹ ಯಾವುದೇ ಆರ್ಥಿಕ ವ್ಯವಹಾರವಿಲ್ಲದೆ, ಶಕ್ತಿಪೀಠ ಫೌಂಡೇಷನ್ ಜೊತೆ ಎಂ.ಓ.ಯು ಮಾಡಿಕೊಳ್ಳಲು ಆಲೋಚನೆ ನಡೆಸಿದ್ದಾರೆ.

 ನಮ್ಮ ಪರಿಕಲ್ಪನೆಗೆ ಅಗತ್ಯವಿರುವ ಮಾಹಿತಿಯನ್ನು ನಿರಂತರವಾಗಿ, ಸರ್ಕಾರದಿಂದ  ಅಥವಾ ಬೇರೆ ಮೂಲಗಳಿಂದ ಹಣ ಮಂಜೂರಾದಾಗÀ ಪಡೆಯುವ ಮಾದರಿಯಲ್ಲಿ, ಜ್ಷಾನದಾನ ಮಾಡುತ್ತಿರುವ ವಿವಿಧ ಸಲಹಾಗಾರರಾದ ಶ್ರೀ ವೇದಾನಂದಾ ಮೂರ್ತಿ ರವರು, ಶ್ರೀ ಸತ್ಯಾನಂದ್ ರವರು ಮತ್ತು ಶ್ರೀ ಶ್ರೀಕಾಂತ್ ರವರ ಜೊತೆ ಎಂ.ಓ.ಯು ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ.

£ವಂಬರ್ ಮೊದಲವಾರ ದೆಹಲಿಗೆ ನಿಯೋಗ ಹೋಗಿ, ಕೇಂದ್ರ ಸರ್ಕಾರದ ಗಮನಕ್ಕೆ ತರಲು ಯೋಚಿಸಲಾಗಿದೆ. ಮಾನ್ಯ ಪ್ರಧಾನಿಯವರ ಬಳಿಗೆ ರಾಜ್ಯ  ಪ್ರತಿ ನಿಧಿಸುವ ಕೇಂದ್ರ ಸರ್ಕಾರದ ಸಚಿವರು ಮತ್ತು ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರ ನಿಯೋಗ ಕೊಂಡೊಯ್ಯಲು ಚಿಂತನೆ ನಡೆಸಲಾಗುವುದು.

ತುಮಕೂರು ರೀಸರ್ಚ್ ಫೌಂಡೇಷನ್-2047 ಒಂದು ಉಪಸಮಿತಿ ರಚಿಸಿಕೊಂಡು ಯಾವುದಾದರೂ ಅಂದರೆ ಗಿನ್ನೀಸ್ ದಾಖಲೆ, ಲಿಮ್ಕಾ ದಾಖಲೆ’ ಗೆ ಅರ್ಜಿಹಾಕಲು ಶ್ರಮಿಸಲು ಸಲಹೆ ನೀಡಲಾಗಿದೆ.

ತಮ್ಮ ಸಲಹೆ ನೀಡುವಿರಾ ?