27th July 2024
Share

TUMAKURU:SHAKTHIPEETA FOUNDATION

  ತುಮಕೂರು ರೀಸರ್ಚ್ ಫೌಂಡೇಷನ್-2047,  ಆರಂಭದಲ್ಲಿಯೇ ಪೇಪರ್ ಲೆಸ್ ಕಚೇರಿಯಾಗಿ ಕಾರ್ಯನಿರ್ವಹಿಸಲು ಭರದ ಸಿದ್ಧತೆ ನಡೆಸಿದೆ.

2047 ರವರೆಗೆ ಪ್ರತಿ ಸೆಕೆಂಡ್, ನಿಮಿಷ, ಗಂಟೆ, ದಿನ, ತಿಂಗಳು, ವರ್ಷ ಹೀಗೆ ಮುಂದಿನ 24 ವರ್ಷಗಳ ಅವಧಿಗೆ ಒಂದು ಡಿಜಿಟಲ್ ಅಜೆಂಡಾ ರೂಪಿಸುತ್ತಿದೆ.

ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯವೈಖರಿಗಳನ್ನು ವಿದ್ಯಾರ್ಥಿಗಳು ಇಂಟರ್ನ್‍ಶಿಪ್/ ಪ್ರೋಜೆಕ್ಟ್ ವರ್ಕ್/ಪಿ.ಹೆಚ್.ಡಿ ವಿಷಯವಾಗಿ ಆಗಿ ಅಧ್ಯಯನ ಮತ್ತು ಸಂಶೋಧÀನೆ ಮಾಡುವ ಮೂಲಕ, ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಒಡನಾಟ ಮೂಡಿಸಲಿದೆ.

ವಿದ್ಯಾರ್ಥಿಗಳು ಕಲಿಯುವ ಜೊತೆಗೆ ದುಡಿಮೆಯ ಅಗತ್ಯದ ಪ್ರತಿಪಾದನೆ ಸಿದ್ಧವಾಗುತ್ತಿದೆ. ತನ್ನ ಓದು ಮುಗಿದ ತಕ್ಷಣ, ನಾನು ಯಾವ ಮಾರ್ಗ ಹಿಡಿಯಬೇಕು ಎಂಬ ಗೊಂದಲವಿಲ್ಲದೆ. ಅವರೇ ಆಯ್ಕೆ ಮಾಡಿಕೊಳ್ಳಲು ಪೂರಕವಾಗಲಿದೆ.

ತನ್ನ ಸುತ್ತಮುತ್ತಲಿನ, ಸಮಾಜದ, ಪರಿಸರದ ಬಗ್ಗೆ ಸಂಪೂರ್ಣ ಹಿಡಿತ ಸಿಗುವ ವ್ಯವಸ್ಥೆ ಒಂದೇ ರೂಪ್‍ನಲ್ಲಿ ದೊರೆಯಲಿದೆ. ರಾಜ್ಯದ, ದೇಶದ, ವಿದೇಶಗಳ ಯೋಜನೆಗಳ ಮಾಹಿತಿಯೂ ಇರಲಿದೆ.

‘ನ್ಯಾಷನಲ್ ಎಜುಕೇಷನ್ ಪಾಲಿಸಿ’ ಮತ್ತು ಸ್ಟೇಟ್ ಎಜುಕೇಷನ್ ಪಾಲಿಸಿ’ ರೀತಿ ರಾಜಕಾರಣಗೊಳಿಸದೇ, ಎಲ್ಲರೂ ಒಪ್ಪುವ ರೀತಿ 2047 ಕ್ಕೆ ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಜಿಲ್ಲೆ, ನಮ್ಮ ತಾಲ್ಲೋಕು, ನಮ್ಮ ಊರು, ನಮ್ಮ ಬಡಾವಣೆ, ನಮ್ಮ ಕುಟುಂಬ ಮತ್ತು ನಾನು ಹೇಗೆ ಅಭಿವೃದ್ಧಿ ಹೊಂದ ಬೇಕು. ನಮ್ಮ ಚುನಾಯಿತ ಜನಪ್ರತಿನಿಧಿಗಳ ಕರ್ತವ್ಯ ಏನು? ಅಧಿಕಾರಿ ಮತ್ತು ನೌಕರರ ಕರ್ತವ್ಯ ಏನು, ಏನು ಮಾಡುತ್ತಿದ್ದಾರೆ ಎಂಬ ವಿಷಯಗಳ ತಾಜಾ ವರದಿ, ಪಾರದರ್ಶಕವಾಗಿ ದೊರೆಯಲಿದೆ.

 ಗ್ರಾಮಸಭೆಯಿಂದ ಆರಂಭಿಸಿ – ರಾಷ್ಟ್ರಪತಿಯವರು ಸಹಿ ಹಾಕುವ ತನಕ ಪಾಲೋ ಅಫ್ ನಡೆಯಬೇಕಿದೆ. ಯಾರು ಯಾರು ಏನು ಮಾಡಬೇಕೋ ಅದು ಟೆಂಪ್ಲೇಟ್ ರೂ¥ದಲ್ಲಿ ಇರಲಿದೆ. ಇವೆಲ್ಲವೂ ಆಯಾ ಇಲಾಖೆಯ ಅಧಿಕಾರಿಗಳ ಮತ್ತು ನಿವೃತ್ತ ಅಧಿಕಾರಿಗಳ ಅನುಭವದ ಆಧಾರದಲ್ಲಿಯೇ ಸಿದ್ಧವಾಗಲಿದೆ.

100-250  ಎಕರೆಯಲ್ಲಿ ಇಲಾಖಾವಾರು ಅಭಿವೃದ್ಧಿ ಮೂಸಿಯಂ-2047 ರೂಪುರೇಷೆ ಸಿದ್ಧವಾಗುತ್ತಿದೆ.  ಯಾವ ಇಲಾಖೆ, ಯಾವ ಅಧಿಕಾರಿ, ಯಾವುದೇ ಯೋಜನೆಯ ಅಂತಿಮ ಗುರಿ ವ್ಯಕ್ತಿ, ಕುಟುಂಬ ಮತ್ತು ಸರ್ವೇನಂಬರ್ ವಾರು ಅಭಿವೃದ್ಧಿಯೇ ಆಗಿದೆ. ಅದರ ಸಂಪೂರ್ಣ ಮಾಹಿತಿ 1947 ಕ್ಕಿಂತ ಮೊದಲು, 1947 ರ ನಂತರ, 2047 ರವರೆಗೆ ಮುಂದೇನು? ಎಂಬ ಮಾಹಿತಿ ದೊರೆಯಲಿದೆ.

ನ್ಯಾಷನಲ್ ರೀಸರ್ಚ್  ಫೌÀಂಡೇಷನ್ ಆಯವ್ಯಯದ  ಸಿಂಹಪಾಲು, ತುಮಕೂರು ರೀಸರ್ಚ್ ಫೌಂಡೇಷನ್ -2047 ನೀಡುವ ವರದಿಯ ಆಧಾರದ ಮೇಲೆ, ದೇಶಾಧ್ಯಂತ ಬಳಕೆ ಆಗಲೇ ಬೇಕಿದೆ.

ಆಗ ಮಾತ್ರ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಶ್ವ ಗುರು ಭಾರತ-2047 ಮತ್ತು ಮುಖ್ಯ ಮಂತ್ರಿ ಶ್ರೀ ಸಿದ್ಧರಾಮಯ್ಯನವರ ಏಷ್ಯಾದಲ್ಲಿಯೇ ನಂಬರ್ ಒನ್ ಕರ್ನಾಟಕ-2047 ರ ಪರಿಕಲ್ಪನೆಗೆ ಅರ್ಥಬರಲಿದೆ.

ಈ ಘೋಷಣೆಗಳು ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ಆದರೇ ಮಾತ್ರ ಗುರಿ ತಲುಪಲು ಸಾದ್ಯಾವಿದೆ. ವಿದ್ಯಾರ್ಥಿಗಳ ಮೂಲಕ ಪ್ರತಿಯೊಬ್ಬರನ್ನು ತನ್ನ ಕರ್ತವ್ಯದ ಕಡೆಗೆ ಗಮನ ಹರಿಸಲು ಜಾಗೃತಿ ಮೂಡಿಸುವುದೇ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕದ (ವಿಷನ್ ಡಾಕ್ಯುಮೆಂಟ್-2047)  ಪರಿಕಲ್ಪನೆ.

ತುಮಕೂರು ವಿಶ್ವ ವಿದ್ಯಾನಿಲಯ, ತನ್ನ ವಿದ್ಯಾರ್ಥಿಗಳ ಮೂಲಕ ಹಚ್ಚುತ್ತಿರುವ ಅಭಿವೃದ್ಧಿ ಕಿಡಿ, ದೇಶಾಧ್ಯಾಂತ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೂ ವ್ಯಾಪಿಸುವ ಕನಸು ನಮ್ಮದಾಗಿದೆ. ಈ ಪ್ರಸ್ತಾವನೆ ದಿನಾಂಕ: 02.10.2023 ರಿಂದ ಆರಂಭಿಸಿದ್ದು, ಅಂದಿನಿಂದ 100 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸುವ ಗುರಿ ನಮ್ಮದಾಗಿದೆ.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿಯ ಪ್ರತಿಯೊಂದು ವಾಕ್ಯದ ಪ್ರಸ್ತಾವನೆ ಸಿದ್ಧವಾಗುತ್ತಿದೆ. ನಮ್ಮ ಗುರಿ ಕರ್ನಾಟಕ ರಾಜ್ಯ 2047 ರ ವೇಳೆಗೆ ಅತಿ ಹೆಚ್ಚು ಅನುದಾನ ಪಡೆದ ರಾಜ್ಯಾವಾಗಬೇಕು. ‘ನಮ್ಮ ರಾಜ್ಯದ 28 ಲೋಕಸಭಾ ಸದಸ್ಯರ ಒಂದು ನಿಮಿಷದ ಅವಧಿಯೂ ವ್ಯರ್ಥವಾಗಬಾರದುವ್ಯರ್ಥ ಮಾಡುವವರು ಲೋಕಸಭೆಗೆ ಹೋಗುವ ಕನಸು ಕಾಣಬಾರದು.

ಆಸಕ್ತ ಜ್ಞಾನಿಗಳು ತಮ್ಮ ಸಲಹೆಗಳನ್ನು ನೀಡಲು ಬಹಿರಂಗ ಮನವಿ.