12th April 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ 3571 ಪ್ಲಾಟ್‍ಗಳಿವೆ, ವಿವಿಧ ದೇಶಗಳ, ಭಾರತ ದೇಶದ ವಿವಿಧ ರಾಜ್ಯಗಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಜನ ಇಲ್ಲಿನ ನಿವಾಸಿಗಳು. ಇದೊಂದು ವಿವಿಧ ಸಂಸ್ಕøತಿಯ ತವರು, ವಿವಿಧ ರಾಜ್ಯದ ಹಬ್ಬಗಳ/ ನಾಡಹಬ್ಬಗಳ ಹಬ್ ಎಂದರೆ ತಪ್ಪಾಗಲಾರದು.

 ಪ್ರತಿ ದಿವಸ ಕನಿಷ್ಟ ಒಬ್ಬೊಬ್ಬರನ್ನು ಪರಿಚಯ ಮಾಡಿಕೊಳ್ಳುವುದು ನನ್ನ ಹವ್ಯಾಸವಾಗಿದೆ. ಇಲ್ಲಿನ ನಿವಾಸಿಗಳು ದಾನಿಗಳು ಹೌದು. ವಿವಿಧ ರಾಜ್ಯಗಳ ನಿವಾಸಿಗಳ ತಂಡವೊಂದರ ಪ್ರಮುಖರು ಒಂದು ದಿವಸ ಸಾರ್, ದೀಪಾವಳಿ ಹಬ್ಬದ ಹಂಗವಾಗಿ ಬಡ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧಾಶ್ರಮದ ಅಗತ್ಯವಿರುವವರಿಗೆ ಬ್ಯಾಗ್, ಪುಸ್ತಕ, ರಗ್ ಹಾಗೂ ಹಳೇ ಬಟ್ಟೆಗಳನ್ನು ದಾನ ಮಾಡಿದರೇ ಹೇಗೆ ಎಂಬ ಪ್ರಸ್ತಾಪ ಇಟ್ಟರು.

ಒಂದೆರಡು ಸಭೆಯಲ್ಲಿ ನಾನು ಬಾಗಿಯಾದೆ. ನಾನು 12 ದಿವಸ ಪ್ರವಾಸಕ್ಕೆ ಹೋದಾಗಲೂ ಸೋಶಿಯಲ್ ಮಿಡಿಯಾ ಮೂಲಕ ಎಲ್ಲವನ್ನೂ ಗಮನಿಸುತ್ತಿದೆ. ನನ್ನ ಮಕ್ಕಳಿಬ್ಬರಿಗೂ ಡಿಜಿಟಲ್ ದಾನ ನೀಡಲು ಹೇಳಿದೆ.

ದೆಹಲಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ಇದ್ಧ ಸಂದರ್ಭದಲ್ಲಿ, ವಿಜಯನಗರ ಜಿಲ್ಲೆಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಸಮರ್ಥ ಸರ್ಕಾರದ ಖರ್ಚಿನಲ್ಲಿ  ಜಪಾನಿಗೆ ಹೋಗಿ ಬಂದು ತಂಗಿದ್ದ.

  ಅವನನ್ನು ಶ್ರೀ ಪುಟ್ಟರಾಜು ಪರಿಚಯ ಮಾಡಿಸಿದಾಗ, ನಾನು ಸುಮಾರು 15 ನಿಮಿಷ ಅವನೊಂದಿಗೆ ಸಮಾಲೋಚನೆ ನಡೆಸಿದಾಗ, 6 ನೇ ತರಗತಿಯಲ್ಲಿಯೇ ಅವನು ರಾಷ್ಟ್ರೀಯ ಮಟ್ಟದ ಇನ್‍ಸ್ಪೈರ್ ಅವಾರ್ಡಿ ಎಂಬ ಮಾಹಿತಿ ದೊರೆಯಿತು.

ಜೊತೆಗೆ ಸಾರ್ ನನಗೆ ನೂರಾರು ಐಡಿಯಾ ಇದೆ, ಅವಿಷ್ಕಾರ ಮಾಡಲು ನನಗೆ ದೇವರು ಐಡಿಯಾ ಕೊಟ್ಟಿದ್ದಾನೆ, ಆದರೇ ನನ್ನ ಬಳಿ ಹಣವಿಲ್ಲ ಎಂದು ನೇರವಾಗಿ ಹೇಳಿದಾಗ ನನಗೆ ಹೃದಯ ಬಡಿದೆಬ್ಬಿಸಿತು.

ಮಾರನೇ ದಿನ 2047 ಕ್ಕೆ ಭಾರತ ವಿಶ್ವ ಗುರುವಾಗಬೇಕಾದರೆ, ಕರ್ನಾಟಕ ರಾಜ್ಯ ಏಷ್ಯಾ ಖಂಡದಲ್ಲಿಯೇ ನಂಬರ್ 1 ಆಗಬೇಕಾದರೆ, ಪ್ರಪಂಚದ ವಿವಿಧ ಧರ್ಮಗಳ ಆಚಾರ- ವಿಚಾರಗಳ ಅವಲೋಕನ ಅಗತ್ಯ ಎನಿಸಿದ್ದರ ಹಿನ್ನಲೆಯಲ್ಲಿ ಮುಸ್ಲಿಂ ಧರ್ಮದ ಬಗ್ಗೆ ವಿಚಾರ ವಿನಿಮಯದ ತುರ್ತು ಸಭೆ ಚರ್ಚೆ ನಡೆಯಿತು.

ಈ ಸಭೆಯಲ್ಲಿ ಧಾರವಾಡದ ಮಾಜಿ ಸಂಸದರಾದ ಪ್ರೋ.ಐ.ಜಿ.ಸನಧಿಯವರ ಪುತ್ರರಾದ ಶ್ರೀ ಶಕೀರ್ ರವರು ಹಾಗೂ ಉತ್ತರ ಪ್ರದೇಶದ ಆಯೋದ್ಯಾ ಜಿಲ್ಲೆಗೆ ಹೊಂದಿಕೊಂಡಿರುವ ಸಿದ್ದಾರ್ಥ ಜಿಲ್ಲೆಯ ಶ್ರೀ ಇಫ್ತಿಕಾರ್ ರವರು ಭಾಗವಹಿಸಿದ್ದರು. ಪುಟ್ಟರಾಜು ಆತಿಥ್ಯ ಉಪಹಾರದೊಂದಿಗೆ ಬಿಸಿ, ಬಿಸಿ ಚರ್ಚೆ ನಡೆಯಿತು.

ಮುಸ್ಲೀಂ ಧರ್ಮದಲ್ಲಿ ಪ್ರತಿಯೊಬ್ಬರೂ ತಾನು ದುಡಿದ ಹಣದಲ್ಲಿ ಶೇಕಡ 2.5 ರಷ್ಟು ದಾನ ಮಾಡಲೇ ಬೇಕು ಎಂಬ ಧರ್ಮ ನಿಯಮದ ಬಗ್ಗೆ ನನ್ನ ಗಮನ ಸೆಳೆಯಿತು. ಈ ರೀತಿ ಯಾವ ಯಾವ ಧರ್ಮದಲ್ಲಿ ಇದೆ ಎಂಬ ಮಾಹಿತಿ ಸಂಗ್ರಹದ ಕಡೆಯೂ ನನ್ನ ಗಮನ ಹರಿಸಲಾಯಿತು. ಅವರೇ ಅಧ್ಯಯನ ಆರಂಭಿಸಲು ಆರಂಭಿಕ ಚರ್ಚೆ ನಡೆಯಿತು.

ಬೆಂಗಳೂರಿಗೆ ಬಂದ ಮಾರನೇ ದಿವಸ ವಾಕ್ ಮಾಡುವಾಗ, ಪಿಜೆಸಿ: ದೀಪಾವಳಿ ದಾನಿಗಳÀ ಜೊತೆ ಚರ್ಚೆ. ಆಗ ನಾನು ಅವರಲ್ಲಿ ಒಂದು ಮನವಿ ಮಾಡಿದೆ. ನೀವೂ ಏಕೆ ಯಾವುದುÀ, ಯಾರಿಗೆ ಅಗತ್ಯವಿದೆಯೋ ಅದನ್ನು ದಾನ ಮಾಡ ಬಾರದು. ಎಲ್ಲರೂ ಬ್ಯಾಗ್ ಕೊಡುವ ಬದಲು, ಫೀಜ್ ಕಟ್ಟಲು ಹಣವಿಲ್ಲವದವನಿಗೆ ಪೀಜ್ ಕಟ್ಟುವುದು, ಬಟ್ಟೆ ಬೇಕು ಎಂದವರಿಗೆ ಬಟ್ಟೆ ನೀಡುವುದು, ಅವಿಷ್ಕಾರ ಮಾಡುವವರಿಗೆ ಮೆಟಿರಿಯಲ್ ಕೊಡಿಸುವುದು, ಹೀಗೆ ಸುಧೀರ್ಘ ಚರ್ಚೆ ¥ಲಪ್ರಧವಾಯಿತು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೋರ್ಟಲ್ ಮಾಡುವ ಮೂಲಕ ಡಿಜಿಟಲ್ ಮಾಹಿತಿ ಸಂಗ್ರಹ ಮಾಡೋಣ, ಪ್ರತಿ ವರ್ಷವೂ ನೀಡ್ ಬೇಸ್ಡ್ ದಾನ ಮಾಡೋಣ, ರಾಜ್ಯ ಮಟ್ಟದ ಕಾರ್ಯಕ್ರಮ ನಮ್ಮಿಂದಲೇ ಆರಂಭಿಸೋಣ. ಪ್ರಥಮ ಸಭೆಯನ್ನು ತುಮಕೂರಿನಲ್ಲಿಯೇ ಮಾಡೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಆರಂಭಿಸಿರುವ, ತುಮಕೂರು ರೀಸರ್ಚ್ ಫೌಂಡೇಷನ್-2047 ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆರಂಭಿಸಲು ಚಿಂತನೆ ಆರಂಭವಾಗಿದೆ. ಪಿಜೆಸಿ ಅಸೋಯೇಷನ್ ನಿರ್ಣಯವೂ ಒಳ್ಳೆಯದು ಎಂಬ ಸಲಹೆ ನೀಡಿದ್ದೇನೆ. ನೋಡೋಣ ನಮ್ಮೆಲ್ಲರ ಚಿಂತನೆ ಎಲ್ಲಿಗೆ ತಲುಪಲಿದೆ.

ದಯವಿಟ್ಟು ಈ ಬಗ್ಗೆ ಜ್ಞಾನದಾನ ಮಾಡಲು ಮನವಿ.