21st November 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರ 2014 ರಲ್ಲಿ ಶ್ರೀ ಸಿದ್ಧರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿದೆ. ಇದೊಂದು ಜಾತಿಗಣತಿ ಸಮೀಕ್ಷೆ ಎಂದು ಹೇಳಲಾಗುತ್ತಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಇದೊಂದು ಬ್ರಹ್ಮಾಸ್ತ್ರಎಂದರೆ ತಪ್ಪಾಗಲಾರದು.

ವಕ್ಕಲಿಗರು, ಲಿಂಗಾಯಿತರು ಮತ್ತು ಬ್ರಾಹ್ಮಣರು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಕೂಗು ಇದೆ. ನಾನು ಕೆಲವರೊಂದಿಗೆ ಸಮಾಲೋಚನೆ ನಡೆಸಿದಾಗ, ಅವರು ಸಹ ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಅದರಲ್ಲಿ ಆಗಿರುವ ಲೋಪದೋಷóಗಳನ್ನು ಸರಿಪಡಿಸಿಕೊಳ್ಳಲು ನಮ್ಮ ಆಗ್ರಹ ಎನ್ನುತ್ತಿದ್ದಾರೆ. ಅವರ ಒಳ ಮರ್ಮ ಗೊತ್ತಿಲ್ಲ.

ಪ್ರಧಾನಿ ಶ್ರೀ ನರೇಂದ್ರಮೋದಿಯವರ ನೇತೃತ್ವದ ಭಾರತ ಸರ್ಕಾರ 2023 ರಲ್ಲಿ, ನ್ಯಾಷನಲ್ ರೀಸರ್ಚ್ ಫೌಂಡೇಷನ್ ಬಿಲ್ ಜಾರಿಗೊಳಿಸಿದೆ.

ಈಗಿನ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರರವರ ಕನಸಿನ ಯೋಜನೆಗೆ, 2014 ರಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೋಕಿನಲ್ಲಿ ಸುಮಾರು 800-900 ಎಕರೆಯಲ್ಲಿ ಕರ್ನಾಟಕ ಹೆರಿಟೇಜ್ ಹಬ್’ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆದಿದೆ.

ತುಮಕೂರು ವಿಶ್ವ ವಿದ್ಯಾನಿಲಯ ತುಮಕೂರು ರೀಸರ್ಚ್ ಫೌಂಡೇಷನ್-2047 ಅನ್ನು ಸ್ಥಾಪಿಸಿ, ನಾನು ಸರ್ಕಾರಕ್ಕೆ ಸಲ್ಲಿಸಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಸ್ಟ್ರಾಟಜಿಯ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರುಡು ಪ್ರತಿಯಲ್ಲಿ, ಈ ಮೂರು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ಹೆರಿಟೇಜ್ ಹಬ್ ಕ್ಯಾಂಪಸ್ ನಲ್ಲಿ, ಈ ಕೆಳಕಂಡ ಯೋಜನೆಗಳನ್ನು ಜಾರಿಗೊಳಿಸಲು ಮಾಸ್ಟರ್ ಪ್ಲಾನ್ ಮಾಡಲು ಸರ್ಕಾರವನ್ನು ಆಗ್ರಹ ಪಡಿಸುತ್ತಿದ್ದೇನೆ. ಇದೊಂದು ಸಂಶೋಧನಾ ಗ್ರಾಮ-2047 ಆಗಲಿದೆ.

  1. ಕನಾಟಕ ರಾಜ್ಯದ 31 ಜಿಲ್ಲೆಗಳಿಗೂ ತಲಾ ಒಂದು ಎಕರೆಯಂತೆ 50 ಎಕರೆ ಜಮೀನು ನಿಗದಿ ಮಾಡುವುದು.
  2. ಭಾರತ ದೇಶದ ಕೇಂದ್ರಾಡಳಿತ ಪ್ರದೇಶಗಳ ಸೇರಿದಂತೆ 37 ರಾಜ್ಯಗಳಿಗೆ ತಲಾ ಒಂದು ಎಕರೆಯಂತೆ 50 ಎಕರೆ ಜಮೀನು ನಿಗದಿ ಮಾಡುವುದು.
  3. ಕರ್ನಾಟಕ ರಾಜ್ಯದಲ್ಲಿ ವಾಸವಿರುವ ಎಲ್ಲಾಧರ್ಮಗಳಿಗೂ ತಲಾ ಒಂದು ಎಕರೆಯಂತೆ 10 ಎಕರೆ ಜಮೀನು ನಿಗದಿ ಮಾಡುವುದು.
  4. ಕರ್ನಾಟಕ ರಾಜ್ಯದಲ್ಲಿ ವಾಸವಿರುವ ಎಲ್ಲಾ ಜಾತಿ/ಉಪಜಾತಿಗಳಿಗೆ  ತಲಾ ಒಂದೊಂದು ನಿವೇಶನದಂತೆ ಸುಮಾರು  1500 ನಿವೇಶನ ನಿಗದಿ ಮಾಡುವುದು.
  5. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಶ್ವ ಕರ್ಮ ಯೋಜನೆ, ಒಂದು ಜಿಲ್ಲೆ-ಒಂದು ಉತ್ಪನ್ನ ಮತ್ತು ಕರ್ನಾಟಕ ರಾಜ್ಯದ ರೈತರು ಬೆಳೆಯುವ ಬೆಳೆಗಳ ಮೌಲ್ಯ ವರ್ಧಿತ ಉತ್ಪನ್ನಗಳಿಗೆ, ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಒಂದೊಂದು ನಿವೇಶನ ನಿಗದಿ ಮಾಡುವುದು.
  6. ಕಾಮನ್ ಫೆಸಿಲಿಟಿ ಸೆಂಟರ್ ಗೆ ಅಗತ್ಯವಿರುವಷ್ಟು ಜಮೀನು ನಿಗದಿಗೊಳಿಸುವುದು ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವುದು.
  7. ಎಲ್ಲಾ ಧರ್ಮ, ಜಾತಿ/ಉಪಜಾತಿಗಳಿಗೆ ಕಟ್ಟಡಕ್ಕೆ, ಅವರ ಜಾತಿಯ ಜನರ ಸಮಗ್ರ ಅಭಿವೃದ್ಧಿಗಾಗಿ ವರದಿ ಸಿದ್ಧಪಡಿಸಲು ಮತ್ತು ಅವರ ಜಾತಿಯ ಪಕ್ಕಾ ಸಮೀಕ್ಷೆಗಾಗಿ ತಲಾ 5 ಕೋಟಿ ಹಣ ನಿಗದಿ ಮಾಡುವುದು.
  8. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅನುದಾನವನ್ನು ಮಂಜೂರು ಮಾಡಿಸಲು ಶ್ರಮಿಸುವುದು.
  9. ಕರ್ನಾಟಕ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಈ ಕೆಳಕಂಡ ಗ್ಯಾರಂಟಿ ಪತ್ರಗಳನ್ನು ನೀಡುವುದು
  10. ಧರ್ಮ, ಜಾತಿ/ಉಪಜಾತಿ  ಗ್ಯಾರಂಟಿ ಕಾರ್ಡ್
  11. ಪ್ರತಿ ಕುಟುಂಬ/ವ್ಯಕ್ತಿಗೂ ಯೂನಿವರ್ಸಲ್ ಬೇಸಿಕ್ ಇನ್ ಕಮ್ ಗ್ಯಾರಂಟಿ ಕಾರ್ಡ್
  12. ಅವರವರ ಆಸ್ತಿಗಳಿಗೆ ಅನುಗುಣವಾಗಿ ದೊರೆಯುವ ಸಾಲದ ಗ್ಯಾರಂಟಿ ಕಾರ್ಡ್
  13. ಬಿಪಿಎಲ್, ಎಪಿಎಲ್ ತೆಗೆದು ಹಾಕಿ, ಆರ್ಥಿಕ ಸ್ಥಿತಿಗೆ ಅನುಗುಣವಾಗಿ ರ್ಯಾಂಕಿಂಗ್ ಗ್ಯಾರಂಟಿ ಕಾರ್ಡ್(ಪ್ರತಿ ವರ್ಷ ಅಫ್ ಡೇಟ್ ಮಾಡುವುದು)
  14. ಅವರವರ ಧರ್ಮ, ಜಾತಿ/ಉಪಜಾತಿಯ ಜನರ ಅಭಿವೃದ್ಧಿ ಹೊಣೆಗಾರಿಕೆಯನ್ನು ಆಯಾ ಜಾತಿಯ ರಾಜ್ಯ ಮಟ್ಟದ ಸಂಸ್ಥೆಗಳಿಗೆ ನೀಡುವುದು.

ಈ ಎಲ್ಲಾ ಯೋಜನೆಗಳ ನಿರ್ವಹಣೆಯನ್ನು ತುಮಕೂರು ರೀಸರ್ಚ್ ಫೌಂಡೇಷನ್-2047  ವಹಿಸಿಕೊಳ್ಳಲು ಮಾರ್ಗಸೂಚಿಗಳೊಂದಿಗೆ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡುವುದು.

‘ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಅನ್ನು, ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಸಿದ್ಧಪಡಿಸಿ, ನಿಖರವಾದ ಲೈವ್ ಡಾಟಾ ದೊಂದಿಗೆ, ಪ್ರತಿಯೊಬ್ಬರ ಕರ್ತವ್ಯದ ರ್ಯಾಂಕಿಂಗ್ ಪ್ರಕಟಿಸುವ ಜೊತೆಗೆ, ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರಕಲು ಶ್ರಮಿಸ ಬಹುದಾಗಿದೆ.

ಪ್ರಧಾನಿ ಶ್ರೀ ನರೇಂದ್ರಮೋದಿಯವರ ವಿಶ್ವ ಗುರು ಭಾರತ-2047 ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಏಷ್ಯಾದಲ್ಲಿಯೇ ಕರ್ನಾಟಕ ರಾಜ್ಯ ನಂಬರ್ಒನ್ ಆಗ ಬೇಕು ಎಂಬ ಕನಸಿಗೆ ಅಡಿಪಾಯ’ ವಾಗಲಿದೆ.

ಇದನ್ನು ಒಂದು ಪ್ರಾಧಿಕಾರ Àವಾಗಿಯೂ ಮಾಡಬಹುದಾಗಿದೆ.

ಪ್ರಸ್ಥಾವನೆ ಸಿದ್ಧಪಡಿಸಲು ಆಸಕ್ತಿ ಇರುವವರು ಸಂಪರ್ಕಿಸಲು ಬಹಿರಂಗ ಮನವಿ.