21st November 2024
Share

TUMAKURU:SHAKTHIPEETA FOUNDATION

  ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಯಾವುದೇ ಜಾತಿ/ಉಪಜಾತಿಗೂ ಸಾಮಾಜಿಕ ನ್ಯಾಯ ದೊರಕಿಲ್ಲ’. ಚುನಾವಣೆ ಇಲ್ಲದಿದ್ದರೆ, ಯಾವುದೇ ಜಾತಿ/ಉಪಜಾತಿ ಇಲ್ಲಿಯವರೆಗೂ ಇರುತ್ತಿರಲಿಲ್ಲ. ಎಲ್ಲರೂ ಎಲ್ಲಾ ಜಾತಿಯವರನ್ನು ಪ್ರೀತಿಸುತ್ತಿದ್ದರು.

ಜಾತ್ಯಾತೀತ ಎಂದರೂ, ಜಾತಿ ಹೊರತಾಗಿ ಯಾವುದೂ ಎಲ್ಲ. ಇದು ಎಲ್ಲರಿಗೂ ಗೊತ್ತು. ಜಾತಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಬೇಕು ಅಥವಾ ಪಕ್ಕಾ ಜಾತಿಗಣತಿ ಆಗಬೇಕು ಇದನ್ನು ಎಲ್ಲರೂ ಒಪ್ಪಬಹುದು ಅಥವಾ ಬಿಡಬಹುದು.

ಅಭಿವೃದ್ಧಿಯಲ್ಲಿ, ಶೈಕ್ಷಣಿಕವಾಗಿ, ಆರ್ಥೀಕವಾಗಿ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಈ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕು. ಇದೊಂದು ಜಾತಿ ಯುದ್ಧ ಆಗಬಾರದು. ಎಲ್ಲಾ ಜಾತಿಯವರೂ ಸಹಕರಿಸಬೇಕು. ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲೂ ಅವಕಾಶ ಇರಬೇಕು. ಇದೊಂದು ಜಾತಿ ಗಣತಿ ಕರಡು ವರದಿ ಎಂದು ಸರ್ಕಾರ ಘೋಷಣೆ ಮಾಡಬೇಕು. ಇಲ್ಲಿ ಪರವಿರೋಧ ಯಾವ ಕಾರಣಕ್ಕೆ ಎಂದು ಎಲ್ಲಾ ಜಾತಿಯವರೂ ಸ್ಪಷ್ಟ ಪಡಿಸಬೇಕು.

  ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ತನ್ನ ಆಧಾರ್ ಕಾರ್ಡ್‍ನಲ್ಲಿ, ಕೃಷಿ ಜಮೀನು ದಾಖಲೆಗಳಲ್ಲಿ, ನಿವೇಶನ ಮತ್ತು ಕಟ್ಟಡಗಳ ದಾಖಲೆಗಳಲ್ಲಿ, ರೇಷನ್ ಕಾರ್ಡ್‍ನಲ್ಲಿ, ಆದಾಯ ಪತ್ರದಲ್ಲಿ, ಆಯುಷ್ಮಾನ್ ಕಾರ್ಡ್‍ನಲ್ಲಿ, ಡ್ರೈವಿಂಗ್ ಲೈಸೆನ್ಸ್ ನಲ್ಲಿ,  ಮತದಾರರ ಕಾರ್ಡ್‍ನಲ್ಲಿ, ವಿವಾಹ ನೋಂದಣೆಯಲ್ಲಿ, ಹೀಗೆ ಪ್ರತಿಯೊಂದು ಕಾರ್ಡ್ ನಲ್ಲಿ ಜಾತಿ ಸೇರ್ಪಡೆ ಕಡ್ಡಾಯ ಮಾಡಬೇಕು.

  ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ತನ್ನ ಧರ್ಮ, ಜಾತಿ, ಉಪಜಾತಿ ಯನ್ನು ಸ್ವಯಂ ಆಗಿ ಒಂದು ಭಾರಿ ಮಾತ್ರ ಘೋಷಣೆ’ ಮಾಡಿಕೊಳ್ಳಬೇಕು. ಭಾರತ ದೇಶದಲ್ಲಿನ ಯಾವುದೇ ರಾಜ್ಯದ ಜನರು ಇಲ್ಲಿ ವಾಸವಿದ್ದರೂ, ಆ ಜಾತಿಯನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿರಬೇಕು.

ದೇಶಾದ್ಯಾಂತ ಒಂದೇ ಜಾತಿ ಪಟ್ಟಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಅಥವಾ ಜಾತಿ ಕಿತ್ತು ಅರಬ್ಬಿ ಸಮುದ್ರಕ್ಕೆ ಎಸೆದು, ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಗುರುತಿನ ಪತ್ರನೀಡಬೇಕು. ಇದಕ್ಕೆ ಪಕ್ಷಾತೀತವಾಗಿ ಯಾವುದೇ ರಾಜಕಾರಣಿಗಳೂ, ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅವರಿಗೆ ‘ಜಾತಿ/ಉಪಜಾತಿಯೇ ಚುನಾವಣೆಯಲ್ಲಿ ಬ್ರಹ್ಮಾಸ್ತ್ರ.