27th July 2024
Share

TUMAKURU:SHAKTHIPEETA FOUNDATION

 ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಮೀಸಲಾತಿ ಪರವಿರೋಧ, ಅರ್ಹತೆಗೆ ತಕ್ಕ ಉದ್ಯೋಗ, ಇವು ಭಾರತದ ಸಂವಿಧಾನದ ಮೆಟ್ಟಿಲುಗಳು. ರಾಜಕೀಯಕ್ಕೋಸ್ಕg, ಸರ್ವಪಕ್ಷಗಳ ರಾಜಕಾರಣಿಗಳು À  ಎಲ್ಲವನ್ನೂ ಗಾಳಿಗೆ ತೂರಿದ್ದಾರೆ, ಎಂದರೆ ಅತಿಶಯೋಕ್ತಿಯಲ್ಲ.

ಜಾತಿಗಣತಿ ಸಿದ್ಧವಾಗಿದೆ, ಅದರಲ್ಲಿ ತಪ್ಪಿರಬಹುದು, ಅದನ್ನು ತಿದ್ದುಪಡಿ ಮಾಡದೇ ಒಪ್ಪಿಕೊಳ್ಳಲು ಸಾದ್ಯಾವಿಲ್ಲ. ಮತ್ತೇ ವಿರೋಧ ಏಕೆ, ಏನಾಗಬೇಕು ಎಂಬ ಬಗ್ಗೆ ಸಲಹೆ ನೀಡಬಹುದಲ್ಲಾ! ಅದನ್ನು ಹೇಳಬೇಕಾದರೆ ವರದಿ ಬಿಡುಗಡೆ ಆಗಲೇ ಬೇಕಲ್ಲವೇ?

ಕೇವಲ 120 ರಿಂದ 150 ಮನೆಗೆ, ಸುಮಾರು 750 ಆಸುಪಾಸಿನ ಜನಸಂಖ್ಯೆಗೆ ಒಂದು ಬ್ಲಾಕ್ ಮಾಡಿದ್ದಾರೆ. ಪರಿಷ್ಕರಣೆಗಾಗಿ ಎಲ್ಲಾ ಜಾತಿಯ, ಎಲ್ಲಾ ರಾಜಕೀಯ ಪಕ್ಷಗಳ, ಆಯಾ ಮಟ್ಟದ ಅಧಿಕಾರಿ/ನೌಕರರ ಮತ್ತು ವಿವಿಧ ವರ್ಗದರವ 15 ಜನರ ಟಾಸ್ಕ್ ಪೋರ್ಸ್ ರಚಿಸಿದರೆ, ತಲಾ 10 ಮನೆಯಂತೆ ಒಂದೇ ದಿವಸದಲ್ಲಿ ಆಗಿರುವ ತಪ್ಪು ತಿದ್ದಬಹುದಲ್ಲವೇ?

ತುಮಕೂರು ಜಿಲ್ಲೆಯ ಒಂದು ಚಿತ್ರಣ ನೋಡಿ, ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆಯಡಿಯಲ್ಲಿ, ಪ್ರತಿಯೊಂದು ಮನೆಯ, ಸ್ವತ್ತಿನ ಬಗ್ಗೆ ಜಿ.ಐ.ಎಸ್ ಡಿಜಿಟಲ್ ದಾಖಲೆ ಮಾಡುತ್ತಿದ್ದಾರೆ.

ಅದೇ ರೀತಿ ಜಾತಿಗಣತಿ ವ್ಯಾಪ್ತಿಯ ಜಿ.ಐ.ಎಸ್ ಡಿಜಿಟಲ್ ದಾಖಲೆ ಮಾಡಿ, ಇಲ್ಲಿ ಯಾವುದೇ ಕಾರಣಕ್ಕೂ ಯಾವ ಕುಟುಂಬವೂ ಮಿಸ್ ಆಗುವುದಿಲ್ಲಾ.

ಜಾತಿಗಣತಿ ನೋಂದಣೆ ಮಾಡಿಸದಿದ್ದರೆ, ಆಧಾರ್ ಗುರುತಿನ ಪತ್ರ ಮಾಡಿಸದಿದ್ದರೆ, ಸರ್ಕಾರದ ಯಾವುದೇ ಸವಲತ್ತು ನೀಡಬಾರದು. ಕಠಿಣ ನಿಯಮ ಮಾಡಿ, ರಾಜ್ಯದ ಕಾನೂನು ಪಾಲಿಸದೇ ಇರುವವರನ್ನು ಗಡಿಪಾರು ಮಾಡಲಿ,  ಇದು ಸರ್ಕಾರವಲ್ಲವೇ? ಇಲ್ಲಿ ಇಬ್ಬಂಧಿತನ ಏಕೆ? ಎಲ್ಲರಿಗೂ ಒಂದೇ ನ್ಯಾಯ ಅಲ್ಲವೇ?

ಸರ್ವಪಕ್ಷಗಳು, ಎಲ್ಲಾ ಜಾತಿಗಳು, ಈ ಬಗ್ಗೆ ಸ್ಪಷ್ಟ ಅಭಿಪ್ರಾಯಗಳನ್ನು ಘೋಶಿಸಬೇಕು. ನಾಟಕಗಳನ್ನು ನಿಲ್ಲಿಸಿ, ನೈಜ ಅರಿವು ಮೂಡಿಸಲಿ. ಈ ವರದಿ ನಂತರದ ವಿಶ್ಲೇಷಣೆ ಎಲ್ಲಾ ಜಾತಿಗಳಲ್ಲೂ ಬದಲಾವಣೆ ತರಲಿದೆ. ಮೀಸಲಾತಿಯೇ ಉಲ್ಟಾ-ಪಲ್ಟಾ ಆಗಲಿದೆ. ಬಹುಸಂಖ್ಯಾತರು- ಅಲ್ಪ ಸಂಖ್ಯಾತರೇ ಬದಲಾಗುತ್ತಾರೆ.

ಊರಿಗೊಂದುÀ/ಬಡಾವಣೆಗೊಂದು ಪುಸ್ತಕವಿಷನ್ ಡಾಕ್ಯುಮೆಂಟ್-2047 ಸಹ ಶೈಕ್ಷಣಿಕ ಗಣತಿ, ಆರ್ಥಿಕ ಗಣತಿ ಮತ್ತು ಜಾತಿಗಣತಿಗೆ ಅಡಿಪಾಯವಾಗಲಿದೆ. ಬಗ್ಗೆ, ನ್ಯಾಯಾಲಯದಲ್ಲಿ ಪಿ..ಎಲ್ ಸಹ ಬೀಳಲಿದೆ.