23rd December 2024
Share

TUMAKURU:SHAKTHIPEETA FOUNDATION

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈಗಾಗಲೇ ವಿವಿಧ ಇಲಾಖೆಗಳ ಮೂಲಕ ಸಂಗ್ರಹಮಾಡಿರುವ ಡಾಟಾ ಹಾಗೂ ಟೋಪೋಷೀಟ್, ಗೂಗಲ್ ಇಮೇಜ್, ವಿವಿಧ ಇಲಾಖೆಗಳು ಸಿದ್ಧಪಡಿಸರುವ ನಕ್ಷೆಗಳೂ, ಜಾತಿಗಣತಿ, ಶೈಕ್ಷಣಿಕ, ಆರ್ಥಿಕ ಆಧಾರದ ಮೇಲೆ  ವಿಶ್ಲೇಷಣೆ ಮಾಡಿ, 2047 ರವರೆಗೆ ಅಗತ್ಯವಿರುವ ಯೋಜನೆಗಳ ಮಾಹಿತಿ ಸಂಗ್ರಹವೇ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047

 ನನ್ನ ಅನುಭವದ ಪ್ರಕಾರ, ಎಲ್ಲಾ ಇಲಾಖೆಗಳ ಮತ್ತು ಆಯಾ ಗ್ರಾಮದ/ಬಡಾವಣೆವಾರು ವಿದ್ಯಾರ್ಥಿಗಳ ಸಹಭಾಗಿತ್ವದ ಜೊತೆಗೆ, ಆಯಾ ವ್ಯಾಪ್ತಿಯ ಎಲ್ಲಾ ವರ್ಗದ ಜನರ ಸಹಕಾರವೂ ಅಗತ್ಯವಾಗಿದೆ.

ಡಾಟಾ ವಿಶ್ಲೇಷಣೆಯಲ್ಲಿ ಕೆಳಕಂಡ 5 ಅಂಶಗಳು ಮಹತ್ವ ಪಡೆಯಲಿವೆ.

  1. ಗ್ರಾಮವಾರು ಸವೆರ್À ನಂಬರ್
  2. ಸರ್ವೇನಂಬರ್ ವಾರು ಭೂ ಬಳಕೆ.
  3. ಗ್ರಾಮವಾರು ಮನೆತನ
  4. ಮನೆತನವಾರು ಕುಟುಂಬ
  5. ಕುಟುಂಬವಾರು ವ್ಯಕ್ತಿ

ತುಮಕೂರು ಜಿಲ್ಲೆ ಫೈಲಟ್ ಯೋಜನೆಯಾಗಿ ಆರಂಭಿಸಲು ಸಿದ್ಧತೆ ನಡೆಸಿದ್ದು. ಒಂದು ಜಿ.ಐ.ಎಸ್ ಪರಿಣಿತ ಸಾಪ್ಟ್ ವೇರ್ ಕಂಪನಿಯ ಅಗತ್ಯವಿದೆ. ಹಲವಾರು ಸ್ಟಾಟ್ ಅಫ್ ಕಂಪನಿಗಳ ಅಗತ್ಯವೂ ಇದೆ. ಈ ಹಿನ್ನಲೆಯಲ್ಲಿ ಆಸಕ್ತಿ ಇರುವವರು ಸಂಪರ್ಕಿಸಬಹುದು.

ರಾಜ್ಯ ಸರ್ಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಡಾಟಾ ಆಪರೇಟರ್ ನೇಮಕ ಮಾಡುತ್ತಿದ್ದೂ, ಅವರಿಗೂ ಈ ಬಗ್ಗೆ ತರಬೇತಿ ನೀಡುವುದು ಸೂಕ್ತವಾಗಿದೆ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆಗೆ ವಿಶೇಷ ಗಮನ ಹರಿಸಲಾಗಿದೆ.

ಜ್ಞಾನವುಳ್ಳವರೂ ಸಂಪರ್ಕಿಸಬಹುದು.