25th July 2024
Share

TUMAKURU:SHAKTHIPEETA FOUNDATION

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿಯ ಪ್ರಮುಖ ಅಂಶ, ಎಲ್ಲಾವರ್ಗದ ಚುನಾಯಿತ ಜನಪ್ರತಿನಿಧಿಗಳ, ಸರ್ವಪಕ್ಷಗಳ, ಎಲ್ಲಾ ಜಾತಿ ಸಂಘಟನೆಗಳ ಮತ್ತು ಎಲ್ಲಾ ಧರ್ಮಗುರುಗಳ, ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ, ರಾಜ್ಯದ ಪ್ರತಿ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸುವುದಾಗಿದೆ.

ದಿನಾಂಕ:30.11.2023 ರಂದು ಹರಿಹರ ಮಠದ ಆವರಣದಲ್ಲಿ ಶ್ರೀಗಳು ಮಾಡಿರುವ ಆಕ್ಯುಪ್ರಷರ್ ಕಾಮಗಾರಿಯ ವಿಶೇಷತೆಗಳನ್ನು ಗಮನಿಸಲು ಭೇಟಿ ನೀಡಿದ್ದೆವು. ಸ್ವಾಮೀಜಿಗಳು ನನಗೆ ಪರಿಚಯ ವಿಲ್ಲದಿದ್ದರೂ, ಮಕ್ಕಳು ಸ್ವಾಮೀಜಿ ಇದ್ದಾರೆ ಎಂದು ಹೇಳಿದ ನಂತರ ಭೇಟಿ ಆದೆವು.

ನಮ್ಮ ಕನಸಿನ ಪರಿಕಲ್ಪನೆಗಳ ಬಗ್ಗೆ ವಿಷಯ ಹಂಚಿಕೊಂಡಾಗ, ಪಂಚಮಶಾಲಿ ಫೀಠದ ಗುರುಗಳಾದ ಶ್ರೀ ವಚನಾನಂದ ಸ್ವಾಮಿಜಿಯವರು, ಕರ್ನಾಟಕ ರಾಜ್ಯದಲ್ಲಿ ಎಲ್ಲಾ zsರ್ಮದ ಮಠಗಳು ಸುಮಾರು 3000 ಕ್ಕೂ ಹೆಚ್ಚು ಇವೆ.

ಎರಡು ಗ್ರಾಮಪಂಚಾಯಿತಿಯ ಹೊಣೆಗಾರಿಕೆಯನ್ನು ಒಬ್ಬರು ಸ್ವಾಮೀಜಿ ಪಡೆದು, ಮಕ್ಕಳಿಗೆ ಮಾನವೀಯತೆ ಜ್ಞಾನ ತುಂಬಿ, ಪಾರದÀರ್ಶಕವಾಗಿ, ಆಯಾ ವ್ಯಾಪ್ತಿಯ ವಿಷನ್ ಡಾಕ್ಯುಮೆಂಟ್-2047  ಸಹಕರಿಸುವುದು ಒಂದು ‘ಇತಿಹಾಸ’ ಸೇರಲಿದೆ ಎಂದು ಆತ್ಮ ವಿಶ್ವಾಸದಿಂದ ನುಡಿದರು.

ಜೊತೆಗೆ ಬಾರತ 2047 ರೊಳಗೆ ವಿಶ್ವ ಗುರು ಆಗಲು, ಕರ್ನಾಟಕ ಏಷ್ಯಾದಲ್ಲಿ ನಂಬರ್ ಒನ್ ಆಗಲು, ಯಾರೆಲ್ಲಾ, ಹೇಗೆಲ್ಲಾ ಶ್ರಮಿಸಬೇಕು, ಜಾತಿ/ಉಪಜಾತಿ ಗಣತಿ ಸೇರಿದಂತೆ ಹಲವಾರು ವಿಷಯಗಳನ್ನು ಹಂಚಿಕೊಂಡರು.

ಪೂರ್ವಾಶ್ರಮದಲ್ಲಿ, ತುಂಗಾನದಿಯನ್ನು ನೋಡಲು ಬಂದ ಒಬ್ಬ ಹುಡುಗ, ಅಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸ್ವಚ್ಚ ಮಾಡುವ ಧೃಡ ನಿರ್ಧಾರ ಕೈಗೊಂಡು, ಸ್ವಚ್ಚ ಮಾಡಿ, ಅಲ್ಲಿನ ಜನರ ಮನಸ್ಸು ಗೆದ್ದು, ಮುಂದೊಂದು ದಿನ ಇಲ್ಲಿ ಗಂಗಾರತಿ ಮಾದರಿ ಯಲ್ಲಿ ತುಂಗಾರತಿ ಮಾಡುವ ಪರಿಕಲ್ಪನೆಗೆ ಜೀವ ತುಂಬಿದ, ಆ ಹೃದಯವಂತ ಛಲಗಾರ ಹುಡುಗ, ಈಗ ಹರಿಹರದಲ್ಲಿ ಇರುವ ಪಂಚಮಶಾಲಿ ಪೀಠದ ಗುರುಗಳಾದ ಶ್ರೀ ವಚನಾನಂದಾ ಸ್ವಾಮಿಜಿ ಎಂದು ಹೇಳಿದ ಘಟನೆ ನಿಜಕ್ಕೂ ಮೈ ಜುಂ ಎನಿಸಿತು.

  1. ಕರ್ನಾಟಕ ರಾಜ್ಯದ ಎಲ್ಲಾ ಧರ್ಮಗಳ ಧರ್ಮಗುರುಗಳ/ಪ್ರಮುಖರ ಕಚೇರಿ ಜಿ.ಐ.ಎಸ್ ಲೇಯರ್ 
  2. ಕರ್ನಾಟಕ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಕಚೇರಿ ಜಿ.ಐ.ಎಸ್ ಲೇಯರ್ 
  3. ಕರ್ನಾಟಕ ರಾಜ್ಯದ ಎಲ್ಲಾ ಜಾತಿ/ಉಪಜಾತಿಗಳ ರಾಜ್ಯಮಟ್ಟದ ಅಧ್ಯಕ್ಷರ ಕಚೇರಿ ಜಿ.ಐ.ಎಸ್ ಲೇಯರ್ 

ಮಾಡುವ ಕೆಲಸ ಪ್ರಗತಿಯಲ್ಲಿದೆ, ಪ್ರತಿಯೊಬ್ಬರ ಸಹಕಾರ. ಸಲಹೆ, ಮಾರ್ಗದರ್ಶನ ಪಡೆಯವುದು ಸಂದೋರ್ಭಚಿತವಾಗಿದೆ.