TUMAKURU:SHAKTHIPEETA FOUNDATION
ಕಾಶ್ಮಿರದಿಂದ ಜಗನ್ನಾತೆ ಶಾರದಾÀದೇವಿ, ಶಂಕರಾಚಾರ್ಯರ ಮನವಿ ಮೇರೆಗೆ ಶೃಂಗೇರಿಗೆ ಬರಲು ಒಪ್ಪಿ, ಅವರ ಜೊತೆ ಯಾತ್ರೆ ಕೈಗೊಂಡಂರಂತೆ. ಅಮ್ಮನವರು ನಾನು ಶೃಂಗೇರಿಗೆ ಬರುವವರೆಗೂ, ತಾವೂ ಹಿಂದುರಿಗೆ ನೋಡಬಾರದು, ನಾನು ನಿಮ್ಮ ಹಿಂದೆ ಬರುತ್ತೇನೆ ನೀವು ಮುಂದೆ ನಡೆಯಿರಿ ಎಂದು ಹೇಳಿದರಂತೆ.
ಒಂದು ವೇಳೆ ನೀವೂ ಹಿಂದುರಿಗಿ ನೋಡಿದರೆ, ನಾನು ಅಲ್ಲಿಯೇ ನಿಲ್ಲತ್ತೇನೆ ಎಂಬ ಷರತ್ತು ವಿಧಿಸಿದ್ದರಂತೆ. ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಯಲ್ಲಿ, ಭಧ್ರಾ ಮತ್ತು ತುಂಗಾನದಿಯ ಸಂಗಮದ ಬಳಿ ನೀರಿನ ರಭಸದಿಂದ ದೇವಿಯ ಗೆಜ್ಜೆ ಶಬ್ಧ ಕೇಳಲಿಲ್ಲವಂತೆ, ಶಂಕರಾಚಾರ್ಯರು ಹಿಂದುರುಗಿ ನೋಡಿದರಂತೆ, ದೇವಿಯೂ ಮಾತಿನಂತೆ ಅಲ್ಲಿಯೇ ನಿಂತರಂತೆ, ಅಂದಿನಿಂದ ದಕ್ಷಿಣದ ಶ್ರೀ ಶಾರದಪೀಠ ಆಯಿತು ಎಂಬುದು ಇತಿಹಾಸ/ನಂಬಿಕೆ.
ಇಲ್ಲಿ ಆರ್ಕಿಯಾಲಿಜಿಕಲ್ ಇಲಾಖೆಗೆ ಒಳಪಟ್ಟಿರುವ ನರಸಿಂಹ ದೇವಾಲಯ ಮತ್ತು ರಾಮೇಶ್ವರ ದೇವಾಲಯವೂ ಇದೆ. ಇದೊಂದು ಒಳ್ಳೆಯ ಪುಣ್ಯ ಕ್ಷೇತ್ರ. ಶಿವಮೊಗ್ಗ ಜಿಲ್ಲೆಯÀಲ್ಲಿದ್ದರೂ ಅಷ್ಟೋಂದು ಅಭಿವೃದ್ಧಿ ಆಗಿಲ್ಲ ಎನಿಸಿತು.
ಲೋಕಸಭಾ ಸದಸ್ಯರಾದ ಶ್ರೀ ಬಿ.ಎಸ್.ರಾಘವೇಂದ್ರರವರ ಪರಿಕಲ್ಪನೆ ಏನಿದಿಯೋ ತಿಳಿದುಕೊಂಡ ನಂತರ ಈ ಬಗ್ಗೆ ಬರೆಯುವುದು ಸೂಕ್ತವೆನಿಸಿದೆ. ಶಕ್ತಿಪೀಠ ಸಕ್ರ್ಯೂಟ್ ನಲ್ಲಿ, ಈ ಪುಣ್ಯ ಕ್ಷೇತ್ರದ ಸೇರ್ಪಡೆ ಮಾಡಬೇಕು ಎಂಬುದು ಕೆಲವರ ಸಲಹೆ ಆಗಿದೆ. ಸರ್ಕಾರ ಏನು ಹೇಳುತ್ತದೆಯೋ ಕಾದು ನೋಡೋಣ?
ಪ್ರಪಂಚದಲ್ಲಿ ನಿಂತಿರುವ ಮಾತೆಯ ವಿಗ್ರಹ ಎಲ್ಲಿಯೂ ಇಲ್ಲವಂತೆ, ಒದೊಂದು ಕಡೆ ಮಾತ್ರ ಹೀಗಿದೆಯಂತೆ. ಹೆಚ್ಚಿಗೆ ಮಾಹಿತಿ ಇರುವವರು ಹಂಚಿಕೊಳ್ಳಲು ಮನವಿ.
ಆ ಪುಣ್ಯ ಸ್ಥಳಕ್ಕೆ ನಿನ್ನೆ ದಿನಾಂಕ:30.11.2023 ರಂದು ಭೇಟಿ ನೀಡಿದ್ದೆವು. ಕಾಕತಾಳೀಯವೆಂಬಂತೆ, 2019 ರಿಂದ ಶಕ್ತಿಪೀಠ ಫೌಂಡೇಷನ್ ಅನ್ನು, ಕೇಂದ್ರ ಸರ್ಕಾರದ ಎನ್.ಜಿ.ಓ ದರ್ಪಣ್ ಗೆ ನೊಂದವಾಣೆ ಮಾಡಲು ಸಾಧ್ಯಾವಾಗಿರಲಿಲ್ಲ. ಪಾನ್ ಕಾರ್ಡ್‍ನಲ್ಲಿ ಒಂದು ಅಕ್ಷರದ ಸಮಸ್ಯೆಯಿಂದ, ನಾಲ್ಕೈದು ಜನರು ಪ್ರಯತ್ನಿಸಿದ್ದರೂ, ಪ್ರಯೋಜನವಾಗಿರಲಿಲ್ಲ.
ನಿಂತಿರುವ ದೇವಿಯ ದರ್ಶನ ಮಾಡಿ, ಮನೆಗೆ ಬರುವ ವೇಳೆಗೆ, ನನ್ನ ಸ್ನೇಹಿತ ಶ್ರೀ ಪ್ರಮೋದ್ ರವರು, ಇದೂವರೆಗೂ ನಿಂತಿದ್ದ ಎನ್.ಜಿ.ಓ ದರ್ಪಣ್ ಕಡತ ನಡೆಯುಂತೆ ಮಾಡಿ, ಪ್ರೋಸಸ್ ಕಂಪ್ಲೀಟ್ ಎಂಬ ಮೆಸೆಜ್ ಕಳುಹಿಸಿದಾಗ ನನಗೆ ವಿಚಿತ್ರವೆನಿಸಿತು.