24th July 2024
Share

TUMAKURU:SHAKTHIPEETA FOUNDATION

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ತುಮಕೂರು ಡಾಟಾ ಜಿಲ್ಲೆ’ಯಾಗಿ ಘೋಷಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು.

ಈಗಿನ ತುಮಕೂರು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಪಂಚಾಯತ್ ಸಿ.ಇ.ಓ ರಾಗಿದ್ದರು. ತುಮಕೂರು ಜಿ.ಐ.ಎಸ್.ಪೋರ್ಟಲ್ ಮತ್ತು ತುಮಕೂರು ಎಂ.ಪಿ.ಪೋರ್ಟಲ್ ಲಾಂಚ್ ಮಾಡಿದ್ದು ಇತಿಹಾಸ. ಎನ್.ಐ.ಸಿ, ಯಿಂದ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಲಾಗಿತ್ತು.

 ಪ್ರತಿ ಶುಕ್ರವಾರ ಸಂಜೆ 5 ಘಂಟೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಆಗಿನ ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್ ರವರು, ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ. ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಂಭಂಧಿಸಿದ ಅಧಿಕಾರಿಗಳ ಸಭೆ, ವಿವಿಧ ಇಲಾಖೆಯ ಜಿ.ಐ.ಎಸ್.ಲೇಯರ್ ಬಗ್ಗೆ ಸಮಾಲೋಚನೆ ಮಾಡುವ ಮೂಲಕ ದೇಶದಲ್ಲಿಯೇ ದಾಖಲೆ ಮಾಡಿದ್ದರು.

ಅದೇ ರೀತಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಯೂ, ಪ್ರತಿವಾರ ಅಧಿಕಾರಿಗಳ ಸಭೆ ಆಯೋಜನೆ ಮಾಡಲಾಗಿತ್ತು. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಡೈರೆಕ್ಟರ್ ರವರಾದ ಶ್ರೀ ಡಾ.ಪ್ರಭುರವರು ಮತ್ತು ಅವರ ತಂಡ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ಭಾಗವಹಿಸುತ್ತಿದ್ದರು.

ಎನ್.ಐ.ಸಿ. ಎನ್.ಆರ್.ಡಿ.ಎಂ.ಎಸ್, ತುಮಕೂರು ಸ್ಮಾರ್ಟ್ ಸಿಟಿಯ ಐ.ಸಿ.ಸಿ.ಸಿ. ಗಳನ್ನು ಆಕ್ಟೀವ್ ಮಾಡಲಾಗಿತ್ತು. ಮಾಹಿತಿ ಕಣಜದ ರಾಜ್ಯ ಮಟ್ಟದ ಸಭೆಯನ್ನು ತುಮಕೂರು ಜಿಲ್ಲಾ ಪಂಚಾಯತ್ ಮತ್ತು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಆಯೋಜಿಸಲಾಗಿತ್ತು. 

ಈಗ ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಸ್ಥಾಪಿಸುವ ಮೂಲಕ, ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ 2734 ಗ್ರಾಮಗಳು, ಹೊಸದಾಗಿ ರಚಿಸುತ್ತಿರುವ 519 ಗ್ರಾಮಗಳು ಹಾಗೂ 11 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 253 ವಾರ್ಡ್ ಗಳಲ್ಲಿನ ಎಲ್ಲಾ ಬಡಾವಣೆಗಳಿಗೂ ವಿಷನ್ ಡಾಕ್ಯುಮೆಂಟ್@2047 ರಚಿಸಲು  ಊರಿಗೊಂದು/ ಬಡಾವಣೆಗೊಂದು  ಪುಸ್ತಕ:ಕರಡು ಟೆಂಪ್ಲೇಟ್ ಅನ್ನು

 ದಿನಾಂಕ:22.12.2023 ನೇ ಶುಕ್ರವಾರ ಬೆಳಿಗ್ಗೆ 9 ಘಂಟೆಗೆ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೇಂಕಟೇಶ್ವರಲು ರವರು ಮತ್ತು 94 ಕಾಲೇಜುಗಳ ಪ್ರಾಂಶುಪಾಲರ ಸಮ್ಮುಖದಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ರವರು ಬಟನ್ ಒತ್ತುವ ಮೂಲಕ ಡಾಟಾ ಮಿತ್ರ @ 2047 ಆಪ್ ಬಿಡುಗಡೆ ಮಾಡಲಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ, ಈ ಕರಡು ಪ್ರತಿಯಲ್ಲಿನ ಯಾವ ಅಂಶಗಳು ಅನಗತ್ಯ, ಇನ್ನೂ ಯಾವ ಆಂಶಗಳನ್ನು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ತುಮಕೂರು ಜಿಲ್ಲೆಯ, ಪ್ರತಿ ಗ್ರಾಮದ/ಬಡಾವಣೆಯ  ಲಕ್ಷಾಂತರ ವಿದ್ಯಾರ್ಥಿಗಳ ನೇತೃತ್ವದಲ್ಲಿ, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್@ 2047 ರಚಿಸಿ, ಚರ್ಚೆ ಮಾಡಿ ಸಲಹೆ ನೀಡಲಿದ್ದಾರೆ.

ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖಾವಾರು ವಿವಿಧ ಪೋರ್ಟಲ್‍ಗಳು, ಆಪ್ ಗಳ ಮೂಲಕ ಸಂಗ್ರಹ ಮಾಡಿರುವ ಎಲ್ಲಾ ಡಾಟಾಗಳನ್ನು ಆಯಾ ಇಲಾಖೆಯ ಅಧಿಕಾರಿಗಳು, ಆಯಾ ಗ್ರಾಮವಾರು ಅಫ್ ಡೇಟ್ ಮಾಡಲು ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಲಾಗುವುದು.

2047 ರವರೆಗೂ ನಿರಂತರವಾಗಿ ಕಾರ್ಯ ನಿರ್ವಹಿಸಲು ರೂಪುರೇಷೆ ಸಿದ್ಧವಾಗುತ್ತಿದೆ. ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಆಗಿ ಈ ವಿಷಯವನ್ನು ವಿಶ್ವ ವಿದ್ಯಾನಿಲಯ ಘೋಷಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ.

ಏಕಕಾಲದಲ್ಲಿ ತುಮಕೂರು ಜಿಲ್ಲೆಯ ಸುಮಾರು 3500 ಕ್ಕೂ ಹೆಚ್ಚು ಗ್ರಾಮ/ಬಡಾವಣೆ ವ್ಯಾಪ್ತಿಯ ರೀಸರ್ಚ್ ಸಮಿತಿಗಳನ್ನು, ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಹಾಗೂ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಉದ್ಘಾಟನೆ ಮಾಡುವ ಮೂಲಕ ಯಾವುದಾದರೊಂದು ದಾಖಲೆ ಮಾಡಲು ಪ್ರಯತ್ನ ಆರಂಭವಾಗಿದೆ.

 ನಾವು ಈಗಾಗಲೇ ಬಿಡುಗಡೆ ಮಾಡಿರುವ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯ ಅಂತಿಮ ವರದಿಯನ್ನು ರಾಜ್ಯದ ಸರ್ವಪಕ್ಷಗಳ ಮತ್ತು ಸರ್ವಧರ್ಮಗಳ, ಜಾತಿ/ಉಪಜಾತಿಗಳ ಸಂಘಟನೆಗಳ ಹಾಗೂ ತಮ್ಮೆಲ್ಲರ ಸಲಹೆಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು.

ಕುಂದರನಹಳ್ಳಿ ರಮೇಶ್ ರವರು ಗುಬ್ಬಿ ತಾಲ್ಲೋಕಿನ ಬಿದರೆಹಳ್ಳಕಾವಲ್ ಸುಮಾರು 930 ಎಕರೆ ಸರ್ಕಾರಿ ಜಮೀನಿನನಲ್ಲಿ ಯಾವುದಾದರೋಂದು ಬೃಹತ್ ಕೈಗಾರಿಕೆ ಸ್ಥಾಪಿಸಲು ದಿನಾಂಕ:01.08.1988 ರಂದು, ಕುಂದರನಹಳ್ಳಿ ಗಂಗಮಲ್ಲಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸಿ ಆರಂಭಿಸಿ, ಈಗ ಕೇಂದ್ರ ಸರ್ಕಾರದ ಹೆಚ್..ಎಲ್ ಘಟಕ ಆರಂಭವಾಗಿದೆ. ಶ್ರೀ ಜಿ.ಎಸ್.ಬಸವರಾಜ್ ರವರು ಸೇರಿದಂತೆ ಹಲವರ ಸಹಕಾರ ಮರೆಯುವಂತಿಲ್ಲ.

ಈಗ ನಾನು ಮತ್ತು ನನ್ನ ತಂಡ ವಿಶ್ವದ 108 ಶಕ್ತಿಪೀಠಗಳನ್ನು ಪೂಜಿಸಿ, 2047 ಕ್ಕೆ ಕರ್ನಾಟಕ ರಾಜ್ಯ ವಿಶ್ವದಲ್ಲಿಯೇ ನಂಬರ್ ಒನ್ ಅಭಿವೃದ್ಧಿ ಆಗಲೇ ಬೇಕು ಎಂಬ ಪರಿಕಲ್ಪನೆ ಮೂಲಕ, ರಾಜ್ಯದ ಕೋಟ್ಯಾಂತರ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಿರಂತರವಾಗಿ ಶ್ರಮಿಸಲು, ಕಡತಗಳ ಅನುಸರಣೆ ಮಾಡಲು ಪಣತೊಟ್ಟಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಅಭಿವೃದ್ಧಿ @ 2047 ಮಿತ್ರ ಹಾಗೂ ಪ್ರತಿ ಗ್ರಾಮ ಮತ್ತು ಬಡಾವಣೆಗಳ ಡಾಟಾಮಿತ್ರ @ 2047  ಗಳು ಅಭಿವೃದ್ಧಿ ಸೈನಿಕರಂತೆ ದುಡಿದರೇ ಮಾತ್ರ ಗುರಿ ಮುಟ್ಟ ಬಹುದಾಗಿದೆ.

ತುಮಕೂರು ಜಿಲ್ಲೆ ಫೈಲಟ್ ಯೋಜನೆಗೆ ಶ್ರೀ ಜಿ.ಎಸ್.ಬಸವರಾಜ್ ರವರೇ ಚಾಲನೆ ನೀಡಲಿದ್ದಾರೆ. ನಂತರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, 225 ವಿಧಾನ ಸಭಾ ಸದಸ್ಯರು, 75 ವಿಧಾನ ಪರಿಷತ್ ಸದಸ್ಯರು, 13 ಜನ ರಾಜ್ಯ ಸಭಾ ಸದಸ್ಯರಯ, 28 ಜನ ಲೋಕಸಭಾ ಸದಸ್ಯರು, ಇಬ್ಬರು ದೆಹಲಿ ಪ್ರತಿನಿಧಿಗಳ ಅವರವರ ವ್ಯಾಪ್ತಿಯ ನಾಯಕತ್ವ ವಹಿಸಲು ರೂಪುರೇಷೆ ಸಿದ್ಧವಾಗುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಈ ಪರಿಕಲ್ಪನೆಯ ಮೆಂಟರ್ ಕುಂದರನಹಳ್ಳಿ ರಮೇಶ್, ಶಕ್ತಿಪೀಠ ಫೌಂಡೇಷನ್ ಜೊತೆ ಎಂ.ಓ.ಯು ಮಾಡಿಕೊಂಡು  ಡಾಟಾ ಮಿತ್ರ @ 2047 ರಚಿಸುತ್ತಿರುವ ಆದ್ಯಪ್ರಜ್ಞಾ ಪ್ರೈವೈಟ್ ಲಿಮಿಟೆಡ್ ಕಂಪನಿಯ  ಶ್ರೀಕಾಂತ್ ರವರು ಮತ್ತು ಅವರ ತಂಡಕ್ಕೆ ಹಾಗೂ ತುಮಕೂರು ವಿಶ್ವ ವಿದ್ಯಾನಿಲಯದ ಎಲ್ಲಾ ಪ್ಯಾಕಲ್ಟಿ ಮತ್ತು ವಿದ್ಯಾರ್ಥಿಗಳಿಗೆ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಸಮಿತಿಯ ಎಲ್ಲಾ ಸದಸ್ಯರಿಗೆ, ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳು.

ತಮ್ಮ ಸಲಹೆಗಳಿಗೆ ಬಹಿರಂಗ ಆಹ್ವಾನ

-ಕೆ.ಆರ್.ಸೋಹನ್ ಡಾಟಾ ವಿಜ್ಞಾನಿ ಹಾಗೂ ಸಿ.ಇ.ಓ ಶಕ್ತಿಪೀಠ ಫೌಂಡೇಷನ್