26th July 2024
Share

TUMAKURU:SHAKTHIPEETA FOUNDATION

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದ ತುಮಕೂರು ರೀಸರ್ಚ್ ಫೌಂಡೇಷನ್-2047 ರ ನೇತೃತ್ವದಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್-2047 ರ ಟೆಂಪ್ಲೇಟ್ / DATAMITHRA-2047 ಕರಡು ಪ್ರತಿಯನ್ನು ಬಟನ್ ಒತ್ತುವುದರ ಮೂಲಕ   ಬಿಡುಗಡೆ ಮಾಡಿದರು.

ವಿಕಸಿತ ಭಾರತ @ 2047 ಯೋಜನೆ ಮತ್ತು ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್-2047 ಎರಡರ ಉದ್ದೇಶವೂ ಒಂದೇ ಆಗಿದೆ.  ಭಾರತ ದೇಶಕ್ಕೆ ತುಮಕೂರು ಯೂನಿವರ್ಸಿಟಿ ಮಾಡೆಲ್ ಜಾರಿಯಾಗುವಂಥಹ ಯೋಜನೆ ರೂಪಿಸಿ,

 ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುದಾನಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ, ಮಂಜೂರು ಮಾಡಿಸುವ ಹೊಣೆಗಾರಿಕೆ ನನ್ನದು. ವಿದ್ಯಾರ್ಥಿಗಳಿಗೆ, ಪ್ರೋಫೆಸರ್ ಗಳಿಗೆ, ಸಾಪ್ಟ್ ವೇರ್ ಕಂಪನಿಯವರಿಗೆ ಎಲ್ಲರಿಗೂ ಅವರವರ ದುಡಿಮೆಯ ಪಾಲಿನ ಹಣ ತಲುಪಬೇಕು. ಒಂದು ಸುಸಜ್ಜಿತ ಕ್ಯಾಂಪಸ್ ಸಹ ಸ್ಥಾಪನೆಯಾಗಬೇಕು. ಸೇವೆಯ ಜೊತೆಗೆ ಹಣದ ಅವಶ್ಯಕತೆಯೂ ಇದೆ ಎಂದು ಸೂಚಿಸಿದರು.

ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು, ರಿಜಿಸ್ಟಾರ್ ಗಳಾದ ಶ್ರೀಮತಿ ಸಾಹಿದಾ ಝಂ. ಝಂ ರವರು, ಶ್ರೀ ಪ್ರಸನ್ನಕುಮಾರ್ ರವರು, ಶ್ರೀಮತಿ ಮಂಗಳಗೌರಿರವರು, ಶ್ರೀ ಪರುಶುರಾಂರವರು, ವಿಶ್ವವಿದ್ಯಾನಿಲಯದ ಕಾಲೇಜುಗಳ ಪ್ರಾಂಶುಪಾಲರಗಳು, ಫ್ಯಾಕಲ್ಟಿ, ಸಿಬ್ಬಂಧಿ ಮತ್ತು ಆಯಾ ಗ್ರಾಮದ ಎಲ್ಲಾ ಹಂತದ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಅತ್ಯುತ್ತಮವಾದ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ಮತ್ತು ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಸುವ ಭರವಸೆ ನೀಡಿದರು.

ಕುಂದರನಹಳ್ಳಿ ರಮೇಶ್, ಶ್ರೀ ಎಂ.ಕೆ.ನಾಗರಾಜರಾವ್ ರವರು, ಶ್ರೀ ಸತ್ಯಾನಂದ್ ರವರು, ಶ್ರೀ ಕಾಂತ್ ರವರು, ಶ್ರೀಮತಿ ಗೀತಾರವರು, ಶ್ರೀ ಹೇಮಂತ್ ಕುಮಾರ್ ರವರು ಇದ್ದರು.

–      ಆಗೋಚರ ಶಕ್ತಿ