27th July 2024
Share

TUMAKURU:SHAKTHIPEETA FOUNDATION

  ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದ ತುಮಕೂರು ರೀಸರ್ಚ್ ಫೌಂಡೇಷನ್-2047, ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮವಾರು ಮತ್ತು ಬಡಾವಣೆವಾರು ಊರಿಗೊಂದುಪುಸ್ತಕ/ಬಡಾವಣೆಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್@ 2047 ರಚಿಸಲು ಆಸಕ್ತಿ ಇರುವ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ವಿಶ್ಲೇಷಣೆ ಆರಂಭಿಸಿದೆ.

ಒಂದು ಅಂದಾಜಿನ ಪ್ರಕಾರ ಸುಮಾರು 7500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ನೊಂದಾವಣೆಯಾಗಿದ್ದರಂತೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರವಾರು, 330 ಗ್ರಾಮಪಂಚಾಯಿತಿವಾರು, 2734 ಗ್ರಾಮವಾರು, 11 ನಗರ ಸ್ಥಳೀಯ ಸಂಸ್ಥೆವಾರು/ಬಡಾವಣೆವಾರು, ಯಾವ ಗ್ರಾಮ/ಬಡಾವಣೆಯಲ್ಲಿ ನೊಂದಾಯಿಸಿಕೊಂಡಿದ್ದಾರೆ, ಎಷ್ಟು ಜನ ನೊಂದಾಯಿಸಿಕೊಂಡಿದ್ದಾರೆ,

ಯಾವ ಗ್ರಾಮ/ಬಡಾವಣೆವಾರು ಯಾರೊಬ್ಬರೂ ನೊಂದಾಯಿಸಿಕೊಂಡಿಲ್ಲ, ಅಂತಹ ಗ್ರಾಮ/ಬಡಾವಣೆವಾರುಗಳಿಗೆ ಏನು ಮಾಡಬೇಕು ಎಂಬ ಬಗ್ಗೆ ಸಮಾಲೋಚನೆ ಆರಂಭವಾಗಿದೆ. ಜೊತೆಗೆ ವಿಶ್ವ ವಿದ್ಯಾನಿಲಯದ ಫ್ಯಾಕಲ್ಟಿಗಳವಾರು/ಗ್ರಾಮವಾರು/ಬಡಾವಣೆವಾರು ಆಸಕ್ತಿ ಇರುವವರ ಪಟ್ಟಿಯನ್ನು ಸಿದ್ಧಪಡಿಸಲು ಈಗಾಗಲೇ ವಿಶ್ವ ವಿದ್ಯಾನಿಲಯದ ಕುಲಪತಿಗಳಿಗೆ ಸಲಹೆ ನೀಡಲಾಗಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು, ಫೆಬ್ರವರಿಯಲ್ಲಿ 2024-25 ಸಾಲಿನ ಆಯವ್ಯಯ ಮಂಡನೆ ಮಾಡುವುದರಿಂದ ಈಗಲೇ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಗಳಿಗೆ ಸಲ್ಲಿಸುವ ಅಗತ್ಯವಿದೆ.

ತುಮಕೂರು ಜಿಲ್ಲೆಯ ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು, ಎಲ್ಲಾ ಧರ್ಮಗಳ ನೇತಾರರು, ಎಲ್ಲಾ ಜಾತಿ/ಉಪಜಾತಿಗಳ ಪ್ರಮುಖರು ಹಾಗೂ ಅಧಿಕಾರಿಗಳ ಜಾಗೃತಿಗಾಗಿ ಜಿಲ್ಲೆಯಾದ್ಯಾಂತ ಪ್ರವಾಸ ಹಮ್ಮಿಕೊಳ್ಳಲಾಗುವುದು.

ಆಸಕ್ತರು ಸಲಹೆ ಮತ್ತು ಸಹಕಾರ ನೀಡಲು ಬಹಿರಂಗ ಮನವಿ ಮಾಡಲಾಗಿದೆ.