23rd April 2024
Share

TUMAKURU:SHAKTHIPEETA FOUNDATION

ಕುಂದರನಹಳ್ಳಿ ರಮೇಶ್ ರವರ ವಿಚಿತ್ರ/ವಿಶಿಷ್ಠ ಎಂದರೆ,  25 ವರ್ಷಗಳ ಕಾಲ ಬಡತನದ ಬೇಗೆಯಲ್ಲಿ ಬೆಂದು, ಕುಂದರನಹಳ್ಳಿಯ ಗಂಗಮಲ್ಲಮ್ಮ ದೇವಿಯನ್ನು ಆರಾಧಿಸಿ, 35 ವರ್ಷಗಳ ಕಾಲ ಬಿಸಿರಕ್ತ ಇದ್ದಾಗ ಸಮಾಜದ ಅಭಿವೃದ್ಧಿ ಸೇವೆಗೆ ನಿರಂತರವಾಗಿ ಶ್ರಮಿಸಿ,

60 ವರ್ಷಗಳ ನಂತರ ವಿಶ್ವದ 108 ಶಕ್ತಿಪೀಠಗಳನ್ನು ಆರಾಧಿಸಿ, ಸ್ವಯಂ ದುಡಿದುಕೊಂಡು, ಶಕ್ತಿಪೀಠ ಫೌಂಡೇಷನ್ ಮೂಲಕ, ಅಗತ್ಯ ಮೂಲಭೂತ ಸೌಕರ್ಯದೊಂದಿಗೆ ಶಕ್ತಿಭವನ, ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ರೂಪಿಸುವ ಪರಿಕಲ್ಪನೆಯೊಂದಿಗೆ,

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯ ಮತ್ತು ಇದೂವರೆಗೂ ಅವರು ಬರೆದಿರುವ 12 ಅಭಿವೃದ್ಧಿ ಪರ ಪುಸ್ತಕಗಳ ಯೋಜನೆಗಳಿಗೆ, ನಿರಂತರವಾಗಿ 2047 ರವರೆಗೆ  ಶ್ರಮಿಸಲು ಸಮರ್ಪಣೆ ಮಾಡಿಕೊಂಡಿದ್ದಾರೆ.

ದಿನಾಂಕ:22.12.2023 ರಂದು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಇಬ್ಬರೇ ಕುಳಿತು, ಸಮಾಲೋಚನೆ ನಡೆಸುವ ಸಂದರ್ಭದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಲವಾದಿ ನಾರಾಯಣಸ್ವಾಮಿರವರು ಆಗಮಿಸಿದ ಚಿತ್ರ.

ನಂತರ ಅದೇ ದಿವಸ ಶಕ್ತಿಭವನ ಕಟ್ಟಡದಲ್ಲಿ, ತನ್ನ ಸ್ಪಷ್ಠ ನಿರ್ಧಾರಗಳ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಹಂಚಿಕೊಂಡು ‘ಮೌನ ಕ್ರಾಂತಿ’ ಯೊಂದಿಗೆ ಮುಂದುವರೆದಿದ್ದಾರೆ. 

ಶ್ರೀ ಜಿ.ಎಸ್.ಬಸವರಾಜ್ ರವರು ಅವರ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಸಂದರ್ಭ ಬರುವವರೆಗೂ, ರಹಸ್ಯ’ ವಾಗಿ ಇಡಲು ನಿರ್ಧರಿಸಿದ್ದಾರೆ.

  1. ಅಫಿಕ್ಸ್ (ಅಫಿಕ್ಸ್ ತರಬೇತಿ ಕೇಂದ್ರ) ಸ್ಥಾಪಿಸಿ, ದಿನಾಂಕ: 01.08.1988 ರಿಂದ ಬಿದರೆಹಳ್ಳಕಾವಲ್‍ನಲ್ಲಿ  ಬೃಹತ್ ಕೈಗಾರಿಕೆ ಸ್ಥಾಪನೆಗೆ 35 ವರ್ಷಗಳ ನಿರಂತರ ಹೋರಾಟ- 2023 ರಲ್ಲಿ ಹೆಲಿಕ್ಯಾಪ್ಟರ್ ಹಾರಾಟ.
  2. ಅಪ್ನಾಸ್(ಅಭಾವ ಪೀಡೀತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ) ಸ್ಥಾಪಿಸಿ, ದಿನಾಂಕ: 07.01.1997 ರಿಂದ 27 ವರ್ಷಗಳ ನೀರಾವರಿ ಹೋರಾಟ – ಎತ್ತಿನಹೊಳೆ, ಭಧ್ರಾ ಮತ್ತು ಹೇಮಾವತಿ ಜೊತೆಗೆ ರಾಜ್ಯಾಧ್ಯಾಂತ ಕೆರೆಗಳಿಗೆ ವಿವಿಧ ನದಿ ನೀರು
  3. ಅರ್ಪ್ (ಅಭಿವೃದ್ಧಿ ರೆವೂಲ್ಯೂಷನ್ ಫೋರಂ) ಸ್ಥಾಪಿಸಿ, ದಿನಾಂಕ: 04.05.2001 ರಿಂದ 23 ವರ್ಷಗಳ ಕಾಲ ತುಮಕೂರು ಸಮಗ್ರ ಅಭಿವೃದ್ಧಿಗಾಗಿ ಹೋರಾಟ, ನೂರಾರು ಯೋಜನೆಗಳ ಅನುಷ್ಠಾನ.
  4. ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, ದಿನಾಂಕ: 16.08.2019 ರಿಂದ 5 ವರ್ಷಗಳ ಕಾಲ ಶಕ್ತಿಪೀಠ. ಅಭಿವೃದ್ಧಿ ಪೀಠ ಮತ್ತು ಜಲಪೀಠಗಳ ಸಂಶೋಧನೆ.
  5. ಬಿಎಸ್‍ಎಸ್. (ಭಾರತ ಸ್ವಾತಂತ್ರ್ಯ ಸೇನೆ @ 100) ಸ್ಥಾಪಿಸಿ, ದಿನಾಂಕ:15.08.2022 ರಿಂದ 2 ವರ್ಷಗಳ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಅಧ್ಯಯನ.
  6. ಶಕ್ತಿಭವನ ನಿರ್ಮಾಣ ಮಾಡಿ, 2024 ರಲ್ಲಿ ಲೋಕಾರ್ಪಣೆ ಮಾಡಿ, ಇದೂವರೆಗೂ ಶ್ರೀ ಹನುಮಂತರಾಯಪ್ಪನವರ(ಶಕ್ತಿಪೀಠ), ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ (ಅಭಿವೃದ್ಧಿ ಪೀಠ) ಹಾಗೂ  ನೀರಾವರಿ ತಜ್ಞ ಜಿ.ಎಸ್.ಪರಮ ಶಿವಯ್ಯನವರ (ಜಲಪೀಠ) ಹಾಗೂ ನೂರಾರು ಜನರ ಪ್ರೇರಣೆಯಿಂದ ನಡೆದ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳ  ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ ಮತ್ತು  ಹ್ಯೂಮನ್ ಲೈಬ್ರರಿ ಮೂಲಕ ವಿವಿಧ ಮ್ಯೂಸಿಯಂ ಸ್ಥಾಪನೆ ಗುರಿ.
  7. ನಾಲೇಡ್ಜ್ ಬ್ಯಾಂಕ್ @ 2047 ಮತ್ತು ಡಾಟಾ ಮಿತ್ರ@ 2047 ಮೂಲಕ, 2047 ಕ್ಕೆ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ಪಡೆಯಲು ಹಾಗೂ ನಂಬರ್ ಒನ್ ಕರ್ನಾಟಕ ಪರಿಕಲ್ಪನೆಗಾಗಿ, 2024 ರಿಂದ-2047 ರವರೆಗೆ ನಿರಂತರವಾಗಿ ಪಕ್ಷಾಂತರ ಜನರ ಸಹಭಾಗಿತ್ವದಲ್ಲಿ ಶ್ರಮಿಸಲು ಡಿಜಿಟಲ್ ವೇದಿಕೆ ನಿರ್ಮಾಣ.
  8. ಭಾರತ ದೇಶದ ಎಲ್ಲಾ ಪ್ರಧಾನ ಮಂತ್ರಿಗಳ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಮುಖ್ಯಮಂತ್ರಿಯವರ ಅವಧಿಯ 1947 ಕ್ಕಿಂತ ಮೊದಲು ಇದ್ದ ಸ್ಥಿತಿ- 1947 ರಿಂದ 2022 ರವರೆಗೆ ಅಭಿವೃದ್ಧಿ ಹೊಂದಿರುವ ಹಾಗೂ 2047 ರವರೆಗೆ ಆಗಬೇಕಾಗಿರುವ ನೀಡ್ ಬೇಸ್ಡ್ ಯೋಜನೆಗಳ ಅವಧಿವಾರು ವಿಶ್ಲೇóಷಣೆ.
  9. ದಿನಾಂಕ:30.11.2023 ರಿಂದ ಕುಟುಂಬದ ಆರ್ಥಿಕ ವ್ಯವಹಾರದಿಂದ ದೂರ ಸರಿದು, ರಕ್ತ ಸಂಭಂದ ಮಾತ್ರ ಇಟ್ಟುಕೊಂಡು, ಸ್ವಯಂ ದುಡಿಮೆ, ದಾನಿಗಳ ಮತ್ತು ಸರ್ಕಾರಗಳ ಅನುದಾನದಿಂದ ಶ್ರಮಿಸಲು ಡಿಜಿಟಲ್ ರೂಪುರೇಷೆಗಳಿಗೆ ಚಾಲನೆ ನೀಡಿದ್ದಾರೆ.

ಆಸಕ್ತರು ಸಹಕರಿಸ ಬಹುದಾಗಿದೆ.

ಅಗೋಚರ ಶಕ್ತಿ.