26th July 2024
Share

TUMAKURU:SHAKTHIPEETA FOUNDATION

 ದಿನಾಂಕ:04.01.2024 ರಂದು ಮಾನ್ಯ ಗೃಹ ಸಚಿವರು ಕರ್ನಾಟಕ ಸರ್ಕಾರ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಸಹಕಾರಿ ಸಚಿಚರಾದ ಶ್ರೀ.ಕೆ.ಎನ್.ರಾಜಣ್ಣನವರ ಉಪಸ್ಥಿತಿಯಲ್ಲಿ, ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ, ಈ ಕೆಳಕೆಂಡ ವಿಚಾರಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದಿದ್ದಾರೆ.

ಈಗಾಗಲೇ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಿದ್ದು, ವಿವಿಧ ಇಲಾಖೆಗಳಲ್ಲಿ ನನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆಗಳ ಬಗ್ಗೆ, ಮಾನ್ಯ ಮುಖ್ಯಮಂತ್ರಿಯವರು, ತುಮಕೂರಿಗೆ ಬಂದಾಗ ಘೋಷಣೆ ಮಾಡಿಸಲು ಮತ್ತು ತಮ್ಮ ಅಧ್ಯಕ್ಷತೆಯಲ್ಲಿ 2047 ಯೋಜನೆಗಳ ಬಗ್ಗೆ  ನಿರಂತರವಾಗಿ ಶ್ರಮಿಸಲು ಸಮಿತಿ ರಚಿಸಲು’ ಅಗತ್ಯ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.

1.ತುಮಕೂರು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ-2 ಸ್ಥಾಪಿಸಲು   ಜಿಲ್ಲಾಧಿಕಾರಿಗಳು, ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ, ಮೂಲಭೂತ ಸೌಕರ್ಯ ಇಲಾಖೆಯಲ್ಲಿ ನನೆಗುದಿಗೆ ಬಿದ್ದಿದೆ, ಜಮೀನು ಭೂ ಸ್ವಾಧೀನ ಮಾಡಲು ಸೂಚಿಸುವುದು.

2.ಬೆಂಗಳೂರು-ತುಮಕೂರು ವಸಂತನರಸಾಪುರದವರೆಗೆ ಮೆಟ್ರೋ ಸಾಧ್ಯಾತಾ ವರದಿಯ ಬಗ್ಗೆ ಸಮೀಕ್ಷೆ ನಡೆಸಲು, ಈಗಾಗಲೇ ಪತ್ರ ಬರೆದಿದ್ದು ಮೆಟ್ರೋ ನಿಗಮದಲ್ಲಿ ನನೆಗುದಿಗೆ ಬಿದ್ದಿದೆ, ಸಮೀಕ್ಷೆಗೆ ಚಾಲನೆ ನೀಡಲು ಸೂಚಿಸುವುದು.

3.ತುಮಕೂರು ಜಿಲ್ಲೆ ಹೆಚ್..ಎಲ್ ಗೆ ಹೆಚ್ಚುವರಿ 1100 ಎಕರೆ, ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳು, ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ, ಕೂಡಲೇ ನಿಯಾಮುನುಸಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಮತ್ತು ಸ್ಥಳೀಯರಿಗೆ ಉದ್ಯೋಗ’ ನೀಡಲು ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸುವುದು. ಹೆಚ್.ಎ.ಎಲ್ ಘಟಕದ ಸುತ್ತಮುತ್ತಲಿನ ಗ್ರಾಮಗಳಿಗೆ ‘ಸಿ.ಎಸ್.ಆರ್’ ಫಂಡ್ ನೀಡಲು ಹೆಚ್.ಎ.ಎಲ್ ಗೆ ಸೂಚಿಸುವುದು.

4.ತುಮಕೂರು ಜಿಲ್ಲೆ ಫೈಲಟ್ ಯೋಜನೆಯಾಗಿ ಜಿಲ್ಲೆಯ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯಡಿ ಕೈಗೊಳ್ಳಲು, ದಿಶಾ ಸಮಿತಿಯಲ್ಲಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿಯಾಮುನುಸಾರ ಪ್ರಸ್ತಾವನೆಯನ್ನು ಅಫ್ ಲೋಡ್ ಮಾಡಲು ಸೂಚಿಸುವುದು.

5.ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮಾನ್ಯ ಮುಖ್ಯಮಂತ್ರಿಯವರಿಂದ, ಮಾನ್ಯ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ, ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ, ನದಿ ನೀರು ಸರಬರಾಜು ಮಾಡಲು, ತುಮಕೂರು ಜಿಲ್ಲೆಯಲ್ಲಿ ಸುಮಾರು 50 ಟಿಎಂ.ಸಿ ಅಡಿ ನೀರಿನ ವಾಟರ್ ಬ್ಯಾಂಕ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸುವುದು. 

6.ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ತುಮಕೂರಿನ ಶಕ್ತಿಪೀಠ ಫೌಂಡೇಷನ್, ತುಮಕೂರು ರೀಸರ್ಚ್ ಫೌಂಡೇಷನ್-2047 ಸ್ಥಾಪಿಸಿ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳವಾರು ಇರುವ 2735 ಗ್ರಾಮಗಳು ಮತ್ತು 11 ನಗರ ಸ್ಥಳೀಯ ವ್ಯಾಪ್ತಿಯ 253 ವಾರ್ಡ್‍ಗಳ ವ್ಯಾಪ್ತಿಯ ಎಲ್ಲಾ ಬಡಾವಣೆಗಳವಾರು, ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ರಚಿಸಲು, ಸುಮಾರು 7500 ವಿದ್ಯಾರ್ಥಿಗಳು ಡಾಟಾಮಿತ್ರ-2047 ಗೆ ನೊಂದಾಯಿಸುವ ಮೂಲಕ ಚಾಲನೇ ನೀಡಿದ್ದಾರೆ.

ಒಂದೇ ದಿವಸ, ಗ್ರಾಮ/ಬಡಾವಣೆವಾರು ವ್ಯಾಪ್ತಿಯ ಸುಮಾರು 3500 ಕ್ಕೂ ಹೆಚ್ಚು, ರೀಸರ್ಚ್ ಫೌಂಡೇಷನ್-2047 ಆನ್ ಲೈನ್ ಮೂಲಕ ಉದ್ಘಾಟನೆ ಮಾಡಲು, ಮಾನ್ಯ ಪ್ರಧಾನ ಮಂತ್ರಿಯವರಿಗೆ, ಮಾನ್ಯ ಮುಖ್ಯಮಂತ್ರಿಯವರಿಂದ ಪತ್ರ ಬರೆಸುವುದು.

  ಡಾಟಾ ವನ್ನು ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ ಮತ್ತು ಡಿಜಿಟಲ್ ಲೈಬ್ರರಿ ಯಲ್ಲಿ ಸ್ಟೋರ್ ಮಾಡಿಸಲು ಅಗತ್ಯ ಕ್ರಮಕೈಗೊಳ್ಳುವುದು.

ಈ ಕಾರ್ಯಕ್ರಮವನ್ನು ಗಿನ್ನೀಸ್, ಲಿಮ್ಕಾ ಅಥವಾ ಯಾವುದಾದರೂ ದಾಖಲೆ ಮಾಡಿಸಲು ಕ್ರಮಕೈಗೊಳ್ಳುವುದು.

7.ತುಮಕೂರು ಜಿಲ್ಲೆಯನ್ನು ನಿರುದ್ಯೋಗ ರಹಿತ ಜಿಲ್ಲೆಯಾಗಿ ನಿರ್ಮಾಣ ಮಾಡಲು, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ರೀಸರ್ಚ್ ಫೌಂಡೇಷನ್-2047  ಮೂಲಕ ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್ ಸ್ಥಾಪಿಸಲು, ಈಗಾಗಲೇ ವಿಸಿಯವರು ಜಿಲ್ಲಾದಿಕಾರಿಗಳಿಗೆ ಸರ್ಕಾರಿ ಜಮೀನು ಗುರುತಿಸಿ ಪತ್ರ ಬರೆದಿದ್ದಾರೆ. ವಿಶ್ವ ವಿದ್ಯಾನಿಲಯಕ್ಕೆ ಅಗತ್ಯ 100 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಮಂಜೂರು ಮಾಡಿಸುವುದು.

8.ತುಮಕೂರು ಜಿಲ್ಲೆಯ ಶಿರಾ ತಾಲ್ಲೋಕಿನಲ್ಲಿ, ಈಗಾUಲೇ ಸುಮಾರು 800 ಎಕರೆಗೂ ಹೆಚ್ಚು ಜಮೀನನನ್ನು ಕರ್ನಾಟಕ ಹೆರಿಟೇಜ್ ಹಬ್ ನಿರ್ಮಾಣ ಮಾಡಲು, ಸಚಿವ ಸಂಪುಟದ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರಲು ‘ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್ ಸ್ಥಾಪಿಸಲು ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ರಚಿಸಿರುವ, ತುಮಕೂರು ರೀಸರ್ಚ್ ಫೌಂಡೇಷನ್-2047 ವಹಿÀಸಲು ಕ್ರಮ ಕೈಗೊಳ್ಳುವುದು.

9.ರಾಜ್ಯ ಸರ್ಕಾರದ ಜೊತೆ ಎಂ.ಓ.ಯು ಮಾಡಿಕೊಂಡು, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸರ್ಕಾರಕ್ಕೆ ಸಲ್ಲಿಸಿರುವ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿನ ಸಲಹೆಯಂತೆ, ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು, ಈಗಾಗಲೇ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿರುವಂತೆ ಪಕ್ಷಾತೀತ ಸಮಿತಿ ರಚಿಸಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರುಗಳ, ಶಾಸಕರುಗಳ, ವಿಧಾನಪರಿಷತ್ ಸದಸ್ಯರುಗಳ, ತುಮಕೂರು ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಯವರ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ರವರ, 11 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ, 330 ಗ್ರಾಮಪಂಚಾಯಿತಿಗಳ ಅಧ್ಯಕ್ಷರ, ಗ್ರಾಮ ಮಟ್ಟದಲ್ಲಿ ಗ್ರಾಮಪಂಚಾಯತ್ ಸದಸ್ಯರ, ಬಡಾವಣೆ ಮಟ್ಟದಲ್ಲಿ ವಾರ್ಡ್ ಸದಸ್ಯರ  ಅಧ್ಯಕ್ಷತೆಯಲ್ಲಿ, ಆಯಾ ವ್ಯಾಪ್ತಿಯ, ವಿವಿಧ ಸಮಿತಿ ರಚಿಸಿ, ಸಭೆ ನಡೆಸಲು ಡಿಜಿಟಲ್ ಟೆಂಪ್ಲೇಟ್ ಸಿದ್ಧಪಡಿಸಿ,  ಆಯಾ ವ್ಯಾಪ್ತಿಯ ಮಾಸ್ಟರ್ ಪ್ಲಾನ್– 2047  ಸಿದ್ಧಪಡಿಸಲು,   ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ರಚಿಸಿರುವ, ತುಮಕೂರು ರೀಸರ್ಚ್ ಫೌಂಡೇಷನ್-2047 ಗೆ ವಹಿÀಸಲು ಕ್ರಮ ಕೈಗೊಳ್ಳುವುದು ಮತ್ತು ಎಲ್ಲಾ ಇಲಾಖೆಗಳು ಸಹಕರಿಸಲು ನಿರ್ದೇಶನ ನೀಡುವುದು.   

ಆಗೋಚರ ಶಕ್ತಿ