TUMAKURU: SHAKTHIPEETA FOUNDATION
ತುಮಕೂರಿನಲ್ಲಿ ಆರಂಭವಾಗುತ್ತಿರುವ ‘ಶಕ್ತಿಭವನ’ ಶಕ್ತಿಪೀಠ, ಅಭಿವೃದ್ಧಿಪೀಠ ಮತ್ತು ಜಲಪೀಠಗಳ ಮ್ಯೂಸಿಯಂಗಳ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಮತ್ತು ಆಡಳಿತ ಕೇಂದ್ರ ಕಚೇರಿ.
ಶಕ್ತಿಪೀಠ ಫೌಂಡೇಷನ್, ತುಮಕೂರು ಜಿಲ್ಲೆಯ ವಸಂತನರಸಾಪುರದ ಇಂಡಸ್ಟ್ರಿಯಲ್ ಕಾರಿಡಾರ್‍ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ‘ಶಕ್ತಿಪೀಠ ಡಾಟಾ ಪಾರ್ಕ್’ ಮತ್ತು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್‍ನ ‘ಶಕ್ತಿಪೀಠ ಕ್ಯಾಂಪಸ್’ನಲ್ಲಿ ಬರುವ ಹಾಗೂ ‘ಕರ್ನಾಟಕ ರಾಜ್ಯದ್ಯಾಂತ ಸ್ಥಾಪಿಸಲು ಉದ್ದೇಶಿರುವ 545 ವಿವಿಧ ವರ್ಗದ ಅಧ್ಯಯನ ಪೀಠ’ಗಳು ಸೇರಿದಂತೆ, ಎಲ್ಲಾ ಯೋಜನೆಗಳ ರೂಪುರೇಷೆ ಇಲ್ಲಿ ನಿರ್ಧಾರವಾಗಲಿದೆ.
2047 ಕ್ಕೆ ಭಾರತ ದೇಶ, ಕರ್ನಾಟಕ ರಾಜ್ಯ ಹಾಗೂ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗಳು ಹೇಗೆ ಅಭಿವೃದ್ಧಿಯಾಗಲಿವೆ ಎಂಬ ಬಗ್ಗೆ ‘ಅಂದು–ಇಂದು–ಮುಂದು’ ಪರಿಕಲ್ಪನೆಗಳ ವಿಶ್ಲೇಷಣೆ ಇದೇ ಕಟ್ಟಡದಲ್ಲಿ ನಡೆಯಲಿದೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತಮ್ಮ ಜಿಲ್ಲೆಯ ಹಾಗೂ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಆನೇಕ ಕನಸುಗಳನ್ನು ಕಂಡರೂ, ಅವರು 5 ಬಾರಿ ಸಂಸದರಾದರೂ, ಎಲ್ಲಾ ‘ಅರ್ಹತೆಗಳು ಇದ್ದರೂ ಸಚಿವ’ರಾಗಲಿಲ್ಲ. ಅವರ ಬಹುತೇಕ ಆಸೆಗಳು ನನೆಗುದಿಗೆ ಬಿದ್ದಿವೆ.ಕಡತಗಳು ಕುಂಟುತ್ತಿವೆ, ಇನ್ನೂ ಸಾವಿರಾರು ಪ್ರಸ್ತಾವನೆಗಳೇ ಆಗಿಲ್ಲ.
ಈಗಾಗಲೇ ಅವರು ಚುನವಾಣಾ ರಾಜಕೀಯಕ್ಕೆ ನಿವೃತ್ತಿ ಘೋಶಿಸಿದ್ದಾರೆ. ಅವರು ಇದೂವರೆಗೂ ಕುಂದರನಹಳ್ಳಿ ರಮೇಶ್ ರವರಿಗೆ, ಕಳೆದ 34 ವರ್ಷಗಳಿಂದ, ಸುಮಾರು ಒಂದು ಸಾವಿರ ಬಾರಿ ಹೇಳಿದ ಮಾತು ನಿನ್ನ ಬಳಿ ಹಣವಿಲ್ಲ, ಎಂ.ಎಲ್.ಎ. ಎಂ.ಪಿ ಆಗೋದು ಕಷ್ಟ.
ನನ್ನ ರಾಜಕೀಯ ಮುಗಿಯುವುದರೊಳಗೆ, ನನ್ನದು ನಡೆದರೆ ನಿನ್ನನ್ನು ‘ಎಂ.ಎಲ್.ಸಿ’ ಮಾಡಿಸುತ್ತೇನೆ. ನನ್ನ ಕನಸಿನ ಯೋಜನೆಗಳನ್ನು, ನೀನೂ ಮುಂದುವರೆಸು ಎಂದು ಹೇಳಿದ್ದಾರಂತೆ, ಇನ್ನೂ ಈಗಲೂ ಹೇಳುತ್ತಲೇ ಇದ್ದಾರಂತೆ.
ಕುಂದರನಹಳ್ಳಿ ರಮೇಶ್ ರವರ ‘ಹಣೆ ಬರಹ ಇರಬೇಕಲ್ಲ!’ ಅದು ಅವರ ಕರ್ಮ. ಆದರೂ ಅವರು, ಅವರ ಕುಟುಂಬ ಮತ್ತು ಅವರ ಸಾವಿರಾರು ಜನ ಅಭಿವೃದ್ಧಿ ಪರ ಹಿತೈóಷಿಗಳು, ಒಂದು ದೃಢ ನಿಧಾರ ಮಾಡಿದ್ದಾರೆ.
ಬಸವರಾಜ್ ರವರ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸುಗಳನ್ನು ಅನುಷ್ಠಾನಕ್ಕೆ ತರಲು, ನಿರಂತರ ಪ್ರಯತ್ನ ಮುಂದುವರೆಸೋಣ, ಅಧಿಕಾರ ಇರಲಿ, ಇಲ್ಲದಿರಲಿ ಸರ್ಕಾರಗಳ ಒಡನಾಟ ಇದೆಯಲ್ಲ ಎಂಬ ಪರಿಕಲ್ಪನೆಯೇ ‘ಶಕ್ತಿಭವನ’ದ ಉದ್ದೇಶ ಎಂದರೆ ತಪ್ಪಾಗಲಾರದು.
ದಿನಾಂಕ:07.01.1997 ರಂದು ತುಮಕೂರಿನ ಪ್ರವಾಸಿ ಮಂದಿರದಲ್ಲಿ ಅಪ್ನಾಸ್ (ಅಭಾವ ಪೀಡೀತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ) ಸ್ಥಾಪಿಸಿ, ದಿನಾಂಕ: 07.01.1997 ರಿಂದ 27 ವರ್ಷಗಳ ನಿರಂತರ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದ ‘ಶುಭದಿವಸ’.
ಅಂದು ಕುಂದರನಹಳ್ಳಿ ರಮೇಶ್ ಆಯೋಜಿಸಿದ ಮೊದಲ ಸಭೆಗೆ ಬಂದಿದ್ದವರು ಜಿ.ಎಸ್.ಪರಮಶಿವಯ್ಯನವರು, ಜಿ.ಎಸ್.ಬಸವರಾಜ್‍ರವರು. ಆಗಿನ ಸಂಸದರಾದ ಎಸ್.ಮಲ್ಲಿಕಾರ್ಜುನಯ್ಯನವರು, ಶ್ರೀ ಕೋದಂಡ ರಾಮಯ್ಯನವರು, ಮತ್ತು ಹಲವಾರು ಸ್ನೇಹಿತರಂತೆ.
ಅವರಲ್ಲಿ ಪ್ರಮುಖರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ಶ್ರೀ ಕೋದಂಡ ರಾಮಯ್ಯನವರು ಮಾತ್ರ ಇದ್ದಾರೆ. ಮೊದಲ ಸಭೆಯ 27 ವರ್ಷಗಳ ನಂತರ, ಅವರಿಬ್ಬರನ್ನು ದಿನಾಂಕ:07.01.2024 ರಂದು ಶಕ್ತಿಭವನ ಅಪೂರ್ಣ ಕಟ್ಟಡಕ್ಕೆ ಆಹ್ವಾನಿಸಿ ‘ಶಕ್ತಿಭವನ’ಕ್ಕೆ ದೇಶದ, ರಾಜ್ಯದ ವಿವಿಧ ನದಿಗಳ ಜಲವನ್ನು ಪ್ರೋಕ್ಷಣೆ ಮಾಡಿಸಲಾಗುವುದು.
ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಗಳಿಗೆ ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಯೋಜನೆಗೆ, ದೇಶದ ನದಿ ಜೋಡಣೆಯ ಮತ್ತು ರಾಜ್ಯದ ನದಿ ಜೋಡಣೆ ಯೋಜನೆಗೆ, ಯಾವ ನದಿ ನೀರು ಬರಲಿದೆ ಎಂಬ ನಿಖರವಾದ ಅಧ್ಯಯನದ ಹಲವಾರು ತಜ್ಞರುಗಳ ಅಭಿಪ್ರಾಯಗಳ ‘ವಿಶ್ಲೇಷಣೆ’ ಗೆ ಚಾಲನೆ ನೀಡಲಾಗುವುದು.
ನಂತರದ ವಿವಿಧ ಸಭೆಗಳಲ್ಲಿ, ಅಂದಿನಿಂದ ಇಲ್ಲಿಯವರೆಗೂ ಸಹಕಾರ, ‘ಜ್ಞಾನದಾನ’ ಮಾಡಿರುವ ಪ್ರತಿಯೊಬ್ಬರನ್ನು ಶಕ್ತಿಭವನಕ್ಕೆ ಆಹ್ವಾನಿಸಿ, ‘ಹ್ಯೂಮನ್ ಲೈಬ್ರರಿಯಲ್ಲಿ ಡಿಜಿಟಲ್ ದಾಖಲೆ’ ಮಾಡಲಾಗುವುದು.
ಜಲಪೂಜೆಯೊಂದಿಗೆ ಆರಂಭಿಸಿ, ಶಕ್ತಿಭವನ ಕಟ್ಟಡ ಸಂಪೂರ್ಣವಾದ ನಂತರ ‘ವಿಶ್ವದ 108 ಶಕ್ತಿದೇವತೆಗಳು, 12 ಜ್ಯೋತಿರ್ಲಿಂಗಗಳು, ದೇಶದಲ್ಲಿ ಇರುವ ಸರ್ವಧರ್ಮಗಳ, ಎಲ್ಲಾ ಜಾತಿ/ಉಪಜಾತಿಗಳ ದೇವರುಗಳ ನೇತೃತ್ವದಲ್ಲಿ’ ಸಂಶೋಧನೆ ಮತ್ತು ಅಧ್ಯಯನ ವನ್ನು ನಮ್ಮ ಸಂಸ್ಕøತಿಯ ವಿಧಿ, ವಿಜ್ಞಾನಗಳೊಂದಿಗೆ ಆರಂಭಿಸಲಾಗುವುದು.
ಈ ಹಿನ್ನಲೆಯಲ್ಲಿ, ಶಕ್ತಿಭವನದ ಕಟ್ಟಡ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕಾಮಗಾರಿಗಳ ಗುತ್ತಿಗೆದಾರರು ತಮ್ಮ, ತಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಮುಂದೆ ವಿವಿಧ ಕಾಮಗಾರಿಗಳಿಗೆ, ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಇರುವವರು ‘ಶಕ್ತಿಗೋಪುರ’ ದಲ್ಲಿ ಎಂ.ಓ.ಯುಗಳಿಗೆ ಸಹಿ ಮಾಡಿಕೊಳ್ಳುವ ಸಂಬಂz, ಪೂರ್ವಭಾವಿ ಸಭೆಯನ್ನು,s ದಿನಾಂಕ:04.01.2024 ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಿ ದಿನಾಂಕ: 05.01.2024 ಸಂಜೆ 5 ಗಂಟೆವರೆಗೆ ಪೂರ್ಣಗೊಳ್ಳುವಂತೆ ಆಯೋಜಿಸಲಾಗಿದೆ. ದಯವಿಟ್ಟು ಸಹಕರಿಸಲು ಮನವಿ.
–ಆಗೋಚರ ಶಕ್ತಿ