7th December 2024
Share

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರ ಜಿಲ್ಲೆಗೊಂದು ಎಕ್ಸ್ ಪೋರ್ಟ್ ಹಬ್’ ಸ್ಥಾಪನೆಗೆ ಯೋಜನೆ ರೂಪಿಸಿದೆ. ತುಮಕೂರು ಜಿಲ್ಲೆಯಲ್ಲಿ ಸುಮಾರು 51 ರಪ್ತು ಘಟಕಗಳು ಇವೆಯಂತೆ. ಪ್ರತಿಯೊಂದು ಘಟಕದ ಜಿಐಎಸ್ ಲೇಯರ್ ಮಾಡುವ ಮೂಲಕ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲು ಆರಂಭಿಸಲಾಗಿದೆ.

ಕೈಗಾರಿಕಾ ಘಟಕಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ನೂರಾರು ಕೋಟಿ ತೆರಿಗೆ ಕಟ್ಟುವ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯ ನೀಡದೆ ಇದ್ದರೆ ಹೇಗೆ ಎಂಬ ಅಭಿಪ್ರಾಯ ಕೈಗಾರಿಕೋಧ್ಯೊಮಿಗಳದ್ದಾಗಿದೆ.

ತುಮಕೂರು ಜಿಲ್ಲೆಯಲ್ಲಿ ರಫ್ತು ಮಾಡಲು ಅವಕಾಶವಿರುವ ಉತ್ಪನ್ನಗಳ ಅಧ್ಯಯನ ವರದಿಗಳ ಸಂಗ್ರಹವೂ ಆರಂಭವಾಗಿದೆ. 2047 ರವರೆಗೆ ತುಮಕೂರು ಜಿಲ್ಲೆಯ ಕೈಗಾರಿಕಾ ಕ್ರಾಂತಿ ಬಗ್ಗೆ ವಿಶೇಷ ಗಮನ ಹರಿಸುವ ಮೂಲಕ, ತುಮಕೂರು ಜಿಲ್ಲಾ ನಿರುದ್ಯೋಗಿ ರಹಿತ ಜಿಲ್ಲೆಯಾಗಬೇಕು, ಈ ಬಗ್ಗೆ ಸ್ಟೂಡೆಂಟ್ ಸ್ಪೆಷಲ್ ಎಕಾನಮಿಕ್ ಝೋನ್ ಆರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ.

ಈ ಬಗ್ಗೆ ಜ್ಞಾನವುಳ್ಳವರು ಮಾಹಿತಿ ನೀಡಲು ಮನವಿ ಮಾಡಲಾಗಿದೆ.

ತುಮಕೂರು ಜಿಲ್ಲೆಯ, ಪಂಡಿತನಹಳ್ಳಿಯಲ್ಲಿ ಇರುವ ಇನ್‍ಕ್ಯಾಪ್ ಘಟಕಕ್ಕೆ ಭೇಟಿ ನೀಡಿದ ಚಿತ್ರ.