27th July 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆ ವಿಶ್ವದ ಭೂಪಟದಲ್ಲಿ ಹಲವಾರು ಯೋಜನೆಗಳಿಗೆ ಸಾಕ್ಷಿಯಾಗಲಿದೆ. ಯರ್ಯಾರು ಯಾವ ಯೋಜನೆಗೆ ಶ್ರಮಹಾಕಿದ್ದಾರೆ, ಎಂಬ ಬಗ್ಗೆ ಶಕ್ತಿಪೀಠ ಅಭಿವೃದ್ಧಿ ಮ್ಯೂಸಿಯಂ ನಲ್ಲಿ ನಿಖರವಾದ ಮಾಹಿತಿ ಸಂಗ್ರಹ ಆರಂಭವಾಗಲಿದೆ.

ಅಂಥಹ ಒಂದು ಮಹತ್ಕಾರ್ಯವನ್ನು ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭಿಸಲಿದೆ. ಅಂತೂ ಇಂತೂ ಶಕ್ತಿಭವನ ಕಟ್ಟಡ ನಿರ್ಮಾಣವಾಯಿತು.

   ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ ಮತ್ತು ಹ್ಯೂಮನ್ ಲೈಬ್ರರಿಗೆ ಪೂರಕವಾದ ಮೂಲಭೂತ ಸೌಕರ್ಯ, ಯಂತ್ರೋಪಕರಣಗಳು, ಶಕ್ತಿಪೀಠ ಲಾಕರ್ಸ್, ಆರ್ಟೀಸ್ಟ್, ಯೋಜನೆಗೊಂದು ಎಪಿಸೋಡ್ ಆರಂಭಿಸಲು ಬಹುಷಃ ರೂ 80,00,000(ಎಂಭತ್ತು ಲಕ್ಷ) ಹಣದ ಅಗತ್ಯವಿದೆ. ಮುಂದಿನ ವಾರ ಬಹುತೇಕ ಯೋಜನಾ ವೆಚ್ಚದ ಅಂದಾಜು ಪಟ್ಟಿ ಸಿದ್ಧವಾಗಲಿದೆ.

ಅಭಿವೃದ್ಧಿ ಮ್ಯೂಸಿಯಂ 1947 ಕ್ಕಿಂತ ಮೊದಲಿನ ಯೋಜನೆಗಳು ಸೇರಿದಂತೆ, 2047 ರ ಯೋಜನೆಗಳವರೆಗೆ ಮಾಹಿತಿ ಸಂಗ್ರಹ ಮಾಡಲು ಚಿಂತನೆ ನಡೆಸಲಾಗಿದೆ.

ತುಮಕೂರು ಅಂತರರಾಷ್ಟ್ರೀಯ ವಿಮಾನ ನಿಲ್ಧಾಣದ ಬಗ್ಗೆ ಕಥೆ ಹೇಳುತ್ತೀರೋ ಅಥವಾ ಜಮೀನು ಭೂ ಸ್ವಾಧೀನ ಪ್ರಕ್ರೀಯೆ ಆರಂಭಿಸುತ್ತಿರೋ ? ಎಂಬ ಅಣಕಗಳು ಜಾಸ್ತಿಯಾಗಿವೆ.

ಮೊದಲನೇ ಹಂತದಲ್ಲಿ ಅಧ್ಯಯನ ಆರಂಭಿಸಿದ ಯೋಜನೆಗಳು.  

  1. ತುಮಕೂರು ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ.(ಶಿರಾ, ಮಧುಗಿರಿ, ಕೊರಟಗೆರೆ ಮತ್ತು ತುಮಕೂರು ತಾಲ್ಲೋಕು)
  2. ಗುಬ್ಬಿಯಲ್ಲಿ ಹೆಚ್.ಎ.ಎಲ್ ವತಿಯಿಂದ ಯುದ್ಧ ವಿಮಾನ ತಯಾರಿಕ ಘಟಕ.
  3. ತುಮಕೂರಿನ ವಸಂತನರಸಾಪುರದವರೆಗೆ ಮೆಟ್ರೋ.
  4. ಸುಮಾರು 50 ಟಿ.ಎಂ.ಸಿ ಅಡಿ ನೀರು ಸಂಗ್ರಹದ ಬೃಹತ್ ವಾಟರ್ ಬ್ಯಾಂಕ್. (ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ತಾಲ್ಲೋಕು)
  5. ತುಮಕೂರು ಮಹಾನಗರ ಪಾಲಿಕೆ ಗಡಿಯಿಂದ 10 ಕೀಮೀ ಸುತ್ತ ಪ್ರಪಂಚದಲ್ಲಿಯೇ ವಿಶಿಷ್ಠ ಮಾದರಿಯಲ್ಲಿ ‘ಗ್ರೇಟರ್ ತುಮಕೂರು’ ಪರಿಕಲ್ಪನೆ.(ಗುಬ್ಬಿ, ತುಮಕೂರು, ಕೊರಟಗೆರೆ ಮತ್ತು ಶಿರಾ ತಾಲ್ಲೋಕು)
  6. ತುಮಕೂರು ಜಿಲ್ಲೆ ನಿರುದ್ಯೋಗ ರಹಿತ ಜಿಲ್ಲೆ ಘೋಷಣೆಗಾಗಿ  ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್.
  7. ಶಿರಾದಲ್ಲಿ ಹೆರಿಟೇಜ್ ಹಬ್.
  8. ಮಧುಗಿರಿ ಏಕಶಿಲಾ ಬೆಟ್ಟದ ಸಮಗ್ರ ಅಭಿವೃದ್ಧಿ.
  9. ಸರ್ಕಾರಿ ಮೆಡಿಕಲ್ ಕಾಲೇಜು (ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ)
  10. ಪಾವಗಡದಲ್ಲಿ ಸೋಲಾರ್ ಯೂನಿವರ್ಸಿಟಿ.
  11. ತುರುವೇಕೆರೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಗೋ ಉತ್ಪನ್ನ ಘಟಕ.
  12. ಕುಣಿಗಲ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟದ ರೈತ ಜಗತ್ತು.
  13. ತುಮಕೂರಿನಲ್ಲಿ ಜಯದೇವ ಹೃದಯ ಆಸ್ಪತ್ರೆ.
  14. ತಿಪಟೂರು ತಾಲ್ಲೂಕಿನಲ್ಲಿ  ಕೋಕನೆಟ್ ಸ್ಪೆಷಲ್ ಎಕನಾಮಿಕ್ ಝೋನ್.
  15. ಚಿಕ್ಕನಾಯಕನಹಳ್ಳಿ ತಾಲ್ಲೋಕು ವಜ್ರದಲ್ಲಿ ಪತಂಗಗಳ ಪಾರ್ಕ್.
  16. ಮಂದಾರಗಿರಿ ಬೆಟ್ಟದ ಬಳಿ ಸರ್ವಧರ್ಮ ಜಗತ್ತು.
  17. ದೇವರಾಯನ ದುರ್ಗದಲ್ಲಿ ಕಾಡುಪ್ರಾಣಿಗಳ ಜಗತ್ತು.
  18. ತುಮಕೂರಿನ ಇಂಡಸ್ಟ್ರಿಯಲ್ ನೋಡ್‍ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್
  19. ತುಮಕೂರಿನ ಇಂಡಸ್ಟ್ರಿಯಲ್ ನೋಡ್‍ನಲ್ಲಿ ಅರಣ್ಯ ಮ್ಯೂಸಿಯಂ.
  20. ತುಮಕೂರಿನ ಇಂಡಸ್ಟ್ರಿಯಲ್ ನೋಡ್‍ನಲ್ಲಿ ಮೆಡಿಕಲ್ ಹಬ್.
  21. ತುಮಕೂರಿನ ಇಂಡಸ್ಟ್ರಿಯಲ್ ನೋಡ್‍ನಲ್ಲಿ ಎಜುಕೇಷನ್ ಹಬ್.
  22. ತುಮಕೂರು ಜಿಲ್ಲಾದ್ಯಾಂತ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್@ 2047.

ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಶಾಸಕರು, 3 ಜನ ಲೋಕಸಭಾ ಸದಸ್ಯರು, 4 ಜನ ವಿದಾನ ಪರಿಷತ್ ಸದಸ್ಯರುÀ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಸೇರಿದಂತೆ ಎಲ್ಲಾ 22 ಜನರು ಒಂದೊಂದು ಯೋಜನೆ ಹೊಣೆಗಾರಿಕೆ ಪಡೆಯಲು ಮುಕ್ತವಾಗಿ ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು. ಅವರು ಇಚ್ಚೆ ಪಡುವ ಯೋಜನೆ ಸೇರ್ಪಡೆ ಮಾಡುವ ಆಲೋಚನೆಯೂ ಇದೆ.

ಯಾರು ಬೇಕಾದರೂ ಐಡಿಯಾ ಕೊಡಬಹುದು ಮುಕ್ತ ಅಹ್ವಾನ !