21st November 2024
Share

TUMAKURU:SHAKTHIPEETA FOUNDATION

  ಆಧುನಿಕ ಯಾಂತ್ರಿಕ ಜೀವನದಲ್ಲಿ ಮನಸ್ಸಿಗೆ ನೆಮ್ಮದಿಯೇ ಇಲ್ಲ ಎಂದು ಒದ್ದಾಡುವ ಜನರೇ, ನಿಮ್ಮ ಜಮೀನು ಅಥವಾ  ನಿಮ್ಮ ಮನೆಗೆ ಹತ್ತಿರವಿರುವ ಸರ್ಕಾರಿ ಜಮೀನು, ಉದ್ಯಾನವನ, ಕೆರೆ, ಕಟ್ಟೆ ಹಳ್ಳಗಳ ಪಕ್ಕ, ಪಂಚವಟಿ ಗಿಡಹಾಕಿ, ಪ್ರತಿ ದಿನ ಸಾದ್ಯಾವಾದರೆ 108 ಪ್ರದಕ್ಷಿಣೆ ಹಾಕಿ ಅಥವಾ ಗಿಡಗಳ ಆರೈಕೆ ಮಾಡಿ ಕೈಮುಗಿದು ಬನ್ನಿ.

   ಏಕಾಂತವಾಗಿ/ಒಂಟಿಯಾಗಿ ನಿಮ್ಮ ಕಷ್ಟ ಸುಖಗಳ ಬಗ್ಗೆ ಗಿಡಗಳ ಜೊತೆ ಮಾತನಾಡಲು ಆರಂಭಿಸಿ, ಕುಳಿತು ಧ್ಯಾನ ಮಾಡಿ, ನಂತರ ತಮ್ಮ ಜೀವನ ಶೈಲಿ ಗಮನಿಸಿ. ನಿಜಕ್ಕೂ ಒಂದು ಪವಾಡವೇ ಆಗಲಿದೆ. ಯಾವುದರಲ್ಲೂ ಸಿಗದ ನೆಮ್ಮದಿ ಪರಿಸರವೇ ದೇವರು  ಈ ಘೋಷಣೆಯಲ್ಲಿ ದೊರೆಯಲಿದೆ. ಇದು ಸರ್ವಧರ್ಮಗಳ ಭಾವೈಕ್ಯತೆಯ ತಾಣವಾಗಲಿದೆ.

ಕುಂದರನಹಳ್ಳಿ ರಮೇಶ್ ರವರಿಗೆ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಪಂಚವಟಿ ಗಿಡ ಹಾಕಲು ಪಾರಂಪರಿಕ ವೈಧ್ಯ ಕೊರಟಗೆರೆಯ ಶ್ರೀ ಗುರುಸಿದ್ಧರಾಧ್ಯರವರು ಸಲಹೆ ನೀಡಿದ್ದರಂತೆ. ನಂತರ ಬೆಂಗಳೂರಿನ ಪಿಜೆಸಿಯಲ್ಲಿಯೂ ಅವರನ್ನೇ ಕರೆಸಿ, ಪಂಚವಟಿ ಗಿಡ ಹಾಕಿಸಲು ಸಲಹೆ ಪಡೆಯಲಾಗಿತ್ತಂತೆ.

ರಾಮ ಮತ್ತೆ ಆಯೋಧ್ಯೆಯ ದೇವಾಲಯಕ್ಕೆ ಬರುವ ದಿವಸ, (22.01.2024) ರಂದು, ತುಮಕೂರಿನ ಶಕ್ತಿಭವನದ ಹಿಂಭಾಗ ಇರುವ ಉದ್ಯಾನವನದಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿ ಪಂಚವಟಿ ಗಿಡಗಳನ್ನು, ಜಯನಗರ ಪೂರ್ವದ ನಿವಾಸಿಗಳು ಭಕ್ತಿಪೂರ್ವಕವಾಗಿ ಹಾಕಿದ್ದಾರೆ.

ದೇಶದ 27 ಕ್ಕೂ ಹೆಚ್ಚು ನದಿನೀರನ್ನು ಗಿಡಗಳಿಗೆ ಹಾಕಲಾಗದೆ. ಅವರು ಹಾಕಿಸಿರುವ ಮೂರು ಕಡೆಯೂ, ಅವರು ಮತ್ತು ಅವರ ಕುಟುಂಬ, ಅವರ ಬಂಧುಬಳಗದ ಅಧ್ಯಯನ ಪ್ರವಾಸದ ಪುಣ್ಯಸ್ಥಳಗಳ,  ಶಕ್ತಿಪೀಠಗಳ, ಜ್ಯೋತಿರ್ಲಿಂಗಗಳ ಸ್ಥಳದ ಮಣ್ಣು ಮತ್ತು ಪಕ್ಕ ಇರುವ ನದಿಗಳ ನೀರನ್ನು ತಂದು ಹಾಕುವ ಪದ್ಧತಿ ಮುಂದುವರೆದಿದೆ.  

   ನೀವೂ ಸಹ ಪಂಚವಟಿ ಗಿಡಹಾಕುವಿರಾ ?

-ಅಗೋಚರ ಶಕ್ತಿ