9th October 2024
Share

TUMAKURU:SHAKTHIPEETA FOUNDATION

  ಶಕ್ತಿಭವನ ಕಟ್ಟಡದಲ್ಲಿ ವಿಶ್ವದ 108 ಶಕ್ತಿಪೀಠಗಳ ಮ್ಯೂಸಿಯಂ ಆರಂಭಿಸುವ ಮುನ್ನ, ಜೀವನದ 36 ವರ್ಷಗಳ ಅಭಿವೃದ್ಧಿ ಹೋರಾಟದ ಸಿಹಿ ಮತ್ತು ಕಹಿ ಅನುಭವಗಳನ್ನು, ವಿಶ್ವದ 108 ಶಕ್ತಿಪೀಠಗಳ ಸಮ್ಮುಖದಲ್ಲಿ ಆತ್ಮಾವಲೋಕನ ಮಾಡಿಕೊಂಡು ಡಿಜಿಟಲ್, ದಾಖಲೆ ಮಾಡಲು ದೃಢ ನಿರ್ಧಾರ ಕೈಗೊಳ್ಳಲಾಗಿದೆ.

 ದಿನಾಂಕ:23.01.2024 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಾಜಿ ಸಚಿವರಾದ ಶ್ರೀ ವಿ.ಸೋಮಣ್ಣವರೊಂದಿಗೆ ಹಲವಾರು ಅಭಿವೃದ್ಧಿ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

 ತುಮಕೂರು ಜಿಲ್ಲೆಯ ಪ್ರತಿಯೊಂದು ಭೂತ್‍ಗಳ  ವ್ಯಾಪ್ತಿಯ ಜ್ಞಾನಿಗಳೊಂದಿಗೆ /ಮತದಾರರೊಂದಿಗೂ ಸಮಾಲೋಚನೆ ನಡೆಸಲು ನಿರ್ಧಾರ ಮಾಡಲಾಗಿದೆ.

ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ವಿಕಾಸ ಸೌಧದಲ್ಲಿ ಕುಳಿತು ಮಾತನಾಡುವಾU, ನನಗೆ ಒಂದು ಕಿವಿ ಮಾತು ಹೇಳಿದರು, ನೋಡಪ್ಪ ಯಾವುದೇ ಕಾರಣಕ್ಕೂ, ಯಾವುದೇ ವ್ಯಕ್ತಿ, ಸಂಘಸಂಸ್ಥೆ ಮತ್ತು ಸರ್ಕಾರಗಳೊಂದಿಗೆ ಯಾವುದೇ ಹಣಕಾಸು ಅಶಿಸ್ತು ಇರಬಾರದು. ಪ್ರತಿಯೊಂದಕ್ಕೂ ದಾಖಲೆ ಪಕ್ಕಾ ಇರಲಿ.

 ಬಹುತೇಕ 34 ವರ್ಷಗಳು ನನ್ನೊಂದಿಗೆ ಅಭಿವೃದ್ಧಿ ಯಾತ್ರೆಯಲ್ಲಿ ಸಹಕರಿಸಿದ್ದೀಯ, ಈಗ ತುಮಕೂರು ಕೇಂದ್ರೀಯ ವಿದ್ಯಾಲಯದ ಪೋಷಕರ ವೆಲ್‍ಫೇರ್ ಅಸೋಶಿಯೇಷನ್ ನಲ್ಲಿನ ನಡವಳಿಕೆಗಳ ಬಗ್ಗೆ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ವಸ್ತು ಸ್ಥಿತಿ ಬಗ್ಗೆ ಪ್ರಕಟಣೆ ನೀಡಲೇ ಬೇಕು. ಸಾರ್ವಜನಿಕ ಜೀವನ ಪಾರದರ್ಶಕವಾಗಿರಬೇಕು ಎಂಬ ಖಡಕ್ ಸಲಹೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ  ಇದೂವರೆಗೂ ನಾನು ವ್ಯವಹರಿಸಿರುವ ವ್ಯಕ್ತಿ ಅಥವಾ ಸಂಘಸಂಸ್ಥೆಗಳ  ಕಹಿ ಅನುಭವಗಳ/ ವಿವಾದಗಳ ಬಗ್ಗೆ ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿಯಲ್ಲಿ  ಮಾಹಿತಿ ಸಂಗ್ರಹಿಸುವುದು ಅಗತ್ಯವಾಗಿದೆ.

ಈ ಹಿನ್ನಲೆಯಲ್ಲಿ ದಿನಾಂಕ:24.01.2024 ರಂದು ತುಮಕೂರು ಕೇಂದ್ರೀಯ ವಿದ್ಯಾಲಯದ ಪೋಷಕರ ವೆಲ್ ಫೇರ್ ಅಸೋಶಿಯೇಷನ್ ನ ಅಧ್ಯಕ್ಷರಾದ ಶ್ರೀ ಟಿ.ಎಂ.ಕರುಣ್ ರವರು, ಕಾರ್ಯದರ್ಶಿ ಶ್ರೀ ಬಿ.ಎನ್.ಕರುಣಾಕರ್ ರವರೊಂದಿಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ.

ಮೂಕನಾನ ರೇಸಾರ್ಟ್ ಪ್ರಮುಖರಾದ ಶ್ರೀ ವೇದಾನಂದಾಮೂರ್ತಿರವರು, ಶ್ರೀ ತೀರ್ಥರಾಮೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶ್ರೀ ಕೆ.ಆರ್.ಮಹೇಶ್ ರವರು, ತೀರ್ಥರಾಮೇಶ್ವರ ವಜ್ರದ ದೇವಾಲಯದ ಸಮಿತಿ, ಕುಂದರನಹಳ್ಳಿ ಗಂಗಮಲ್ಲಮ್ಮ ದೇವಾಲಯ ಅಭಿವೃದ್ಧಿ ಸಮಿತಿ, ಹೆಚ್.ಎ.ಎಲ್ ಸಂತ್ರಸ್ಥರು, ವಿಶ್ವ ಷೆಡ್ ವಿವಾದ, ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ವಿಜ್ಞಾನ ಗುಡ್ಡದ ಸ್ನೇಹಿತರು,

 ಹೀಗೆ ನಾನು ಸಕ್ರೀಯವಾಗಿ ಕಾರ್ಯನಿರ್ವಹಿಸಿದ ಪ್ರತಿಯೊಂದು ವಿಚಾರಗಳ ಬಗ್ಗೆ ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿಯಲ್ಲಿ  ದಾಖಲೆಗಳ ಮತ್ತು  ಎಪಿಸೋಡ್ ಮಾಹಿತಿ ಸಂಗ್ರಹ ಆಂದೋಲನ ಆರಂಭಿಸಲು,  ಬೆಂಗಳೂರಿನ ಆಧ್ಯಾಪ್ರಜ್ಞಾ ಸ್ಟಾಟ್ ಅಫ್ ಕಂಪನಿಯೊಂದಿಗೆ, ತುಮಕೂರು ಜಿಲ್ಲೆಯ 2735 ಗ್ರಾಮಗಳ ಮತ್ತು 500 ಕ್ಕೂ ಹೆಚ್ಚು ಬಡಾವಣೆಗಳವಾರು, ಸುಮಾರು 3500 ಕ್ಕೂ ಹೆಚ್ಚು ಎಪಿಸೋಡ್ ಮಾಡಲು ಎಂ.ಓ.ಯು ಮಾಡಿಕೊಳ್ಳಲಾಗುವುದು.

ಇದೂವರೆಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಸಾವಿರಾರು ಯೋಜನಾವಾರು ಮಾಹಿತಿ ಸಂಗ್ರಹದ ಬಗ್ಗೆ,  ಮುಂಬರುವ ಲೋಕಸಭಾ ಅದಿವೇಶನಕ್ಕೆ ಮೊದಲು, ‘ಕುಂದರನಹಳ್ಳಿಯಲ್ಲಿ ಪಂಚವಟಿ ಗಿಡ’ ಹಾಕುವ ಮೂಲಕ ‘ಅಭಿವೃದ್ಧಿ ಮ್ಯೂಸಿಯಂ-ಆತ್ಮಾವಲೋಕನ ಆಂದೋಲನ’ ಆರಂಭಿಸಲಾಗುವುದು. ಹುಟ್ಟೂರಿನಿಂದಲೇ ಆತ್ಮಾವಲೋಕನ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ.

ನನ್ನಿಂದ ತೊಂದರೆ ಪಟ್ಟುವರು ನನ್ನೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಬಹುದು ಅಥವಾ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಲಿಖಿತವಾಗಿ ದೂರುಗಳನ್ನು/ವಿವರಗಳನ್ನು ನೀಡಿ, ನನಗೆ ನಕಲು ಪ್ರತಿಯನ್ನು ವಾಟ್ಸ್ ಅಫ್ ಮಾಡಲು ಬಹಿರಂಗ ಮನವಿ ಮಾಡಲಾಗಿದೆ

ನಾನೇ ತಮ್ಮ ಮನೆಗೆ ಬಂದು ಚಿತ್ರೀಕರಣ ಮಾಡಿಕೊಳ್ಳಲು ಇಚ್ಚಿಸಿದ್ದೇನೆ. ಜೀವಮಾನದಲ್ಲಿ ಬದುಕಿರುವವರೆಗೂ, ಒಂದು ಸಣ್ಣ ತಪ್ಪು ಸಹ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಕೈಗೊಳ್ಳಲಾಗಿದೆ, ಆದಷ್ಟು ಮೌನ ವೇ ನನ್ನ ಪ್ರತಿಕ್ರೀಯೆ ಎಂಬ ಅಂಶವನ್ನು ಶಕ್ತಿಪೀಠ ಫ್ಯಾಮಿಲಿಗಳ ಗಮನಕ್ಕೆ ತರಲಾಗಿದೆ.