TUMKURU:SHAKTHIPEETA FOUNDATION
2009 ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪ್ರಣಾಳಿಕೆಯನ್ನು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಿಡುಗಡೆ ಮಾಡಿತ್ತು. ಈಗ 2024 ರ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಪ್ರತಿಯೊಂದು ಬೂತ್, ಗ್ರಾಮಗಳ ಮತ್ತು ಬಡಾವಣೆಗಳ ಜನರ ಅಭಿಪ್ರಾಯದ ಮೇರೆಗೆ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ. ನಾಲೇಡ್ಜ್ ಬ್ಯಾಂಕ್ @ 2047 ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ 2683 ಬೂತ್‍ಗಳು ಇದ್ದರೆ, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1906 ಬೂತ್‍ಗಳ ಸಂಖ್ಯೆ
- ತುಮಕೂರು ವಿಧಾನ ಸಭಾ ಕ್ಷೇತ್ರ-254
- ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ-226
- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ-262
- ತುರುವೇಕೆರೆ ವಿಧಾನಸಭಾ ಕ್ಷೇತ್ರ-229
- ತಿಪಟೂರು ವಿಧಾನಸಭಾ ಕ್ಷೇತ್ರ-233
- ಗುಬ್ಬಿ ವಿಧಾನಸಭಾ ಕ್ಷೇತ್ರ-212
- ಮಧುಗಿರಿ ವಿಧಾನಸಭಾ ಕ್ಷೇತ್ರ-248
- ಕೊರಟಗೆರೆ ವಿಧಾನಸಭಾ ಕ್ಷೇತ್ರ-242
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 264 ಬೂತ್ಗಳು
- ಕುಣಿಗಲ್ ವಿಧಾನಸಭಾ ಕ್ಷೇತ್ರ-264
ಚಿತ್ರದುರ್ಗ ಲೋಕÀಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 513 ಬೂತ್ಗಳು ಇವೆ.
1.ಶಿರಾ ವಿಧಾನಸಭಾ ಕ್ಷೇತ್ರ-267
2.ಪಾವಗಡ ವಿಧಾನಸಭಾ ಕ್ಷೇತ್ರ-246
ತುಮಕೂರು ಜಿಲ್ಲೆಯಲ್ಲಿ 2683 ಬೂತ್‍ಗಳು ಇದ್ದರೆ, ಸುಮಾರು 2735 ಗ್ರಾಮಗಳು, ಹೊಸದಾಗಿ ಸುಮಾರು 519 ಗ್ರಾಮಗಳು, ಸುಮಾರು 300 ಬಡಾವಣೆಗಳು ಸೇರಿ ಸುಮಾರು 3554 ಇವೆ ಎನ್ನಲಾಗಿದೆ. ಬೂತ್ ಮತ್ತು ಅವುಗಳ ವ್ಯಾಪ್ತಿಯ ಬಡಾವಾಣೆ, ಗ್ರಾಮಗಳ ವಿಶ್ಲೇಷಣೆ ಆರಂಭವಾಗಿದೆ.
ಈ ಭಾರಿ ಸುಮಾರು 10000 ಜನರು ಮತದಾರರ ಪ್ರಣಾಳಿಕೆಯ ಸಿದ್ದತೆಯಲ್ಲಿ ಪಾಲ್ಗೊಳಲಿದ್ದಾರೆ.
ದಿನಾಂಕ:31.01.2024 ರಂದು ತುಮಕೂರಿನ ಶಕ್ತಿಭವನದಲ್ಲಿ ಮತದಾರರ ಪ್ರಣಾಳಿಕೆ ವಾರ್ ರೂಮ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಜಿಲ್ಲೆಯ ಎಲ್ಲಾ ಪಕ್ಷಗಳ ಕಾರ್ಯಕರ್ತರು ಪ್ರಣಾಳಿಕೆ ಸಿದ್ಧತೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ.
ದಿನಾಂಕ:15.02.2024 ರಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಉದ್ದೇಶಿತ ಅಭಿವೃದ್ಧಿ ಮ್ಯೂಸಿಯಂನಲ್ಲಿ ಪಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿಯಲ್ಲಿ ಮಾಹಿತಿ ಸಂಗ್ರಹ ಮಾಡಲು ಆಲೋಚಿಸಲಾಗಿದೆ.
ಆಸಕ್ತರು ಸಂಪರ್ಕಿಸಲು ಮನವಿ ಮಾಡಲಾಗಿದೆ.
–ಆಗೋಚರ ಶಕ್ತಿ