12th September 2024
Share

TUMAKURU:SHAKTHIPEETA FOUNDATION

ದಿನಾಂಕ:10.11.2017 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್-2025 ರಲ್ಲಿ ‘ವಿಲೇಜ್-1’ ಮತ್ತು ‘ರಾಮರಾಜ್ಯ ವಿಲೇಜ್-1’ ರಚನೆಗೆ ನೀಡಿದ್ದ ಸಲಹೆಗಳು.

ದಿನಾಂಕ:29.06.2023 ರಂದು ಬಿಡುಗಡೆ ಮಾಡಿದ್ದ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಪುಸ್ತಕದಲ್ಲಿ ಡಾಟಾ ಮಿತ್ರ ರಚನೆಗಾಗಿ ನೀಡಿದ್ದ ಸಲಹೆಗಳು.

ಗ್ರಾಮ-1 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆಯವ್ಯಯದಲ್ಲಿ ಮಂಡಿಸಿದ್ದರು. ಮಾನ್ಯ ಮುಖ್ಯಮಂತ್ರಿಯವರ ಉಪಕಾರ್ಯದರ್ಶಿಯಾಗಿದ್ದ ಶ್ರೀ ರವಿಯವರ ಸಹಕಾರ ಮರೆಯುವಂತಿಲ್ಲ ಎಂದು ಕುಂದರನಹಳ್ಳಿ ರಮೇಶ್ ರವರು ಹೇಳುತ್ತಾರೆ.

ಈಗ ಕಾಂಗ್ರೆಸ್ ಸರ್ಕಾರ ‘ಜನಮಿತ್ರ’ ಆರಂಭಿಸಲು ಸಿದ್ದತೆ ನಡೆಸಿದೆ. ಆಡಳಿತ ನಡೆಸುವ ಪಕ್ಷಗಳು ಈ ರೀತಿ ಮಾಡುವುದು ಉತ್ತಮ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೂ ಈ ಮಾದರಿ ಅನುಸರಿಸಲಿ. ಆರ್.ಎಸ್.ಎಸ್ ಕಾರ್ಯಕರ್ತರನ್ನೇ ನೇಮಿಸಲಿ. ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುವ ತಂಡವೇ ಇದೆ.

ಸರ್ಕಾರಗಳು ಬದಲಾದ ನಂತರ ಯಾವುದೇ ಹೆಸರಿನ ಯೋಜನೆಯನ್ನು ಇದೇ, ಉದ್ದೇಶಕ್ಕೆ ಆಯಾ ಪಕ್ಷದ ನೇತೃತ್ವದ ಸರ್ಕಾರಗಳು ರಚಿಸಲಿ ತಪ್ಪೇನು. ಜನರಿಗೆ, ಆಯಾ ಸರ್ಕಾರಕ್ಕೆ ಮತ್ತು ಆಯಾ ಪಕ್ಷಕ್ಕೆ ಒಳ್ಳೆಯದಾಗುತ್ತದೆ.

ಇವುಗಳು ಇನ್ನೊಂದು ವಸೂಲಿ ಅಡ್ಡೆಗಳಾಗದೆ. ಜೀವನ ಸಾಗಿಸಲು ಸಂಭಾವನೆ ನಿಗದಿ ಮಾಡಲೇಬೇಕು. ಅವರ ಸೇವೆಯ ಮೂಲಕ ಕಾರ್ಯಕರ್ತರಿಗೆ ರ್ಯಾಂಕಿಂಗ್ ನೀಡಿ, ಪಕ್ಷದ ಹುದ್ದೆ ಅಥವಾ ಸರ್ಕಾರಿ ನಿಗಮ, ಮಂಡಳಿ ನೇಮಕಕ್ಕೆ ಮಾನದಂಡ ಮಾಡಿಕೊಳ್ಳ ಬಹುದಲ್ಲವೇ?

ಕುಂದರನಹಳ್ಳಿ ರಮೇಶ್ ರವರು ಬರೆದಿರುವ ಎರಡು ಪುಸ್ತಕಗಳ ಸಲಹೆಗಳನ್ನು ಸರ್ಕಾರ ಸ್ವೀಕರಿದಾಗ ಅವರಿಗೆ ಆಗುವ ನೆಮ್ಮದಿಗೆ ಬೆಲೆ ಕಟ್ಟಲೂ ಸಾಧ್ಯವೇ ?

-ಅಗೋಚರ ಶಕ್ತಿ.