27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ 2024-2025 ರ ಆಯವ್ಯಯದಲ್ಲಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಲು ಪ್ರಮುಖ ಕಾರಣ, ‘ಆಯೋಧ್ಯೆ ರಾಮಮಂದಿರ ಮತ್ತು ಲಕ್ಷದ್ವೀಪಗಳ ಟ್ರೆಂಡ್’ ಎಂದರೆ ತಪ್ಪಾಗಲಾರದು. ಕಳೆದ 10 ವರ್ಷಗಳ ಅವಧಿಯಲ್ಲಿ ಮೊದಲೇ ಈ ನಿರ್ಧಾರ ಕೈಗೊಂಡಿದ್ದರೆ ಉದ್ಯೋಗ ಸೃಷ್ಠಿ ಮತ್ತು ಜಿಡಿಪಿ ಇನ್ನೂ ಉತ್ತಮವಾಗಿರುತಿತ್ತು.

ಪ್ರಧಾನಿವರಾದ ಶ್ರೀ ನರೇಂದ್ರಮೋದಿಯವರು  ಈಗಾಲಾದರೂ ಪ್ರವಾಸೋಧ್ಯಮಗಳ ಮೂಲಭೂತ ಸೌಕರ್ಯ, ಅಭಿವೃದ್ಧಿಗಾಗಿ ರಾಜ್ಯಗಳಿಗೆ ಧೀರ್ಘಾವದಿ ಬಡ್ಡಿ ರಹಿತ ಸಾಲ ಘೋಷಣೆ ಮಾಡುವ ಮೂಲಕ ಪ್ರೋತ್ಸಾಹ ನೀಡಿರುವುದು ಸ್ವಾಗಾತಾರ್ಹ.

ಯಾವುದೇ ಧರ್ಮವಿರಲಿ ಅವರ ಪುಣ್ಯಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಒಂದು ಒಳ್ಳೆಯ ಪ್ರವಾಸಿ ತಾಣವಾಗಲಿದೆ. ರಾಜ್ಯದ ಮುಜರಾಯಿ ಇಲಾಖೆ, ವಕ್ಛ್ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಪ್ರವಾಸೋಧ್ಯಮ ಇಲಾಖೆ ಬಹಳ ಒತ್ತು ನೀಡಬೇಕಿದೆ.

ಜೊತೆಗೆ ರೂರಲ್ ಟೂರಿಸಂ, ಹೆಲ್ತ್ ಟೂರಿಸಂ, ಆರ್ಟಿಸಾನ್ ಟೂರಿಸಂ. ಎಕೋ ಟೂರಿಸಂ ಹೀಗೆ ಹತ್ತಾರು ಪ್ರವಾಸೋಧ್ಯಮಗಳು ಸುದ್ದಿಮಾಡುತ್ತಿವೆ, ಕುಂದರನಹಳ್ಳಿ ರಮೇಶ್ ರವರು ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ವರದಿಯಲ್ಲಿ, ‘ಅಭಿವೃದ್ಧಿ ಟೂರಿಸಂ/ಅಭಿವೃದ್ಧಿ ಮ್ಯೂಸಿಯಂ’ ಎಂಬ ಹೊಸ ಪರಿಕಲ್ಪನೆ ಜಾಡು ಹಿಡಿದಿದ್ದಾರೆ.

ಸರ್ಕಾರಕ್ಕೆ ವರಧಿ ನೀಡಿ ಕೈಕಟ್ಟಿ ಕುಳಿತಿಲ್ಲ, ಫೈಲಟ್ ಯೋಜನೆಯಾಗಿ ಶಕ್ತಿಭವನ, ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ಗಳನ್ನು ಅಭಿವೃದ್ಧಿ ಟೂರಿಸಂ/ ಮೂಸಿಯಂ ಆಗಿ ಮಾಡಲು ಹರಸಾಹಸ ಮಾಡುತ್ತಿದ್ದಾರೆ.

ರಾಜ್ಯಾಧ್ಯಂತ 545 ಅಧ್ಯಯನ ಪೀಠಗಳನ್ನು ಸಹ ಅಭಿವೃದ್ಧಿ ಮ್ಯೂಸಿಯಂ ಅಡಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಕ್ಷೇತ್ರಗಳಲ್ಲಿಯೂ ಪ್ರವಾಸೋಧ್ಯಮ ಅಭಿವೃದ್ಧಿ ಮಾಡಲು ಪಕ್ಷಬೇಧ ಮರೆತು ಮುಂದಾಗ ಬೇಕು. ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 340 ಜನಪ್ರತಿನಿಧಿಗಳು  ಮನಸ್ಸು ಮಾಡಿದರೆ ಕರ್ನಾಟಕದಲ್ಲಿ ಪ್ರವಾಸೋಧ್ಯಮ ಕ್ರಾಂತಿ ಮಾಡಬಹುದಾಗಿದೆ.

ಪ್ರವಾಸೋಧ್ಯಮ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರು ರಾಜ್ಯದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಠಿಸಬಹುದಾಗಿದೆ. ಕುಂದರನಹಳ್ಳಿ ರಮೇಶ್ ರವರ ಸ್ನೇಹಿತರಾದ ಶ್ರೀಕಾಂತ್ ರವರು ತಾವೂ ಶಕ್ತಿಪೀಠ, ಅಭಿವೃದ್ಧಿ ಪೀಠ ಮತ್ತು ಜಲಪೀಠದ ಜೊತೆ, ಪ್ರವಾಸಿ ಪೀಠ’ ಆರಂಭಿಸಿ ಎಂದು ಸಲಹೆ ನೀಡಿದ್ದರಂತೆ.

ಈ ವರ್ಷ ಪ್ರವಾಸೋಧ್ಯಮ ಜನಜಾಗೃತಿಗೆ ಒತ್ತು ನೀಡುವುದು ಸೂಕ್ತವಾಗಿದೆ.

ಆಗೋಚರ ಶಕ್ತಿ