16th September 2024
Share

TUMAKURU:SHAKTHIPEETA FOUNDATION

 ನಿಜಕ್ಕೂ ಒಂದು ಅದ್ಬುತವಾದ ಬೆಳವಣಿಗೆ, ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಹೋರಾಟ ಆರಂಭವಾಗಿದೆ. ಇದೊಂದು ಕ್ರಾಂತಿಕಾರಕ ಬೆಳವಣಿಗೆ.

 ಕುಂದರನಹಳ್ಳಿ ರಮೇಶ್ ರವರು, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಹಚ್ಚಿದ ಕಿಡಿ ಇಂದು ಬೃಹತ್ ಜ್ವಾಲೆಯಾಗಿದೆ. ಈ ಹಿನ್ನಲೆಯಲ್ಲಿಯೇ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿ, ಪ್ರತಿಯೊಬ್ಬ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು, ದೆಹಲಿ ವಿಶೇಷ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಅಧ್ಯಯನ ಪೀಠ ಆರಂಭವಾಗಬೇಕು ಎಂಬ ಪ್ರತಿಪಾದನೆಯನ್ನು ಕುಂದರನಹಳ್ಳಿ ರಮೇಶ್ ರವರು ಒತ್ತಿ ಹೇಳಿದ್ದಾರೆ.

 2017 ರಲ್ಲಿ ಬರೆದ ವಿಷನ್ ಡಾಕ್ಯುಮೆಂಟ್-2025 ರಲ್ಲಿಯೇ ಈ ಕಿಡಿ ಹೊತ್ತಿಸಿದ್ದರು. ಬೆಕ್ಕಿಗೆ ಗಂಟೆ, ಕಟ್ಟುವರು ಯಾರು, ‘ರಾಮರಾಜ್ಯ ಕನಸಿಗೆ- ಲಂಕೆಗೆ ಬೆಂಕಿ  ಜ್ವಾಲೆ’ ಹತ್ತಿಕೊಳ್ಳುತ್ತಿದೆ, ಪಲಿತಾಂಶ ಕಾದು ನೋಡೋಣÀ?

  ಯಾರೇ ಪ್ರಧಾನಿಯಾಗಿರಲಿ, ಯಾರೇ ಮುಖ್ಯ ಮಂತ್ರಿಯಾಗಿರಲಿ, ದೇಶದ ಅಭಿವೃದ್ಧಿಯಲ್ಲಿ ಪಾರದರ್ಶಕತೆ ಇರಲೇ ಬೇಕು. ಗಾಳಿಯಲ್ಲಿ ಗುಂಡುಹಾರಿಸಿದ ರೀತಿ ಪ್ರಚಾರದ ಅಗತ್ಯವಿಲ್ಲ. ವಸ್ತು ನಿಷ್ಟ, ನಿಖರವಾದ ಅಂಕಿ ಅಂಶಗಳ ಆಧಾರದಲ್ಲಿ ಪ್ರತಿಪಾದನೆ ಮಾಡುವ ತಾಕತ್ತು ಗಳಿಸಿಕೊಳ್ಳಬೇಕು.

‘ಊರಿಗೊಂದು/ಬಡಾವಣೆಗೊಂದು ಪುಸ್ತಕವಿಷನ್ ಡಾಕ್ಯುಮೆಂಟ್ @ 2047 ಹಳ್ಳಿ, ಹಳ್ಳಿಯಲ್ಲಿ, ಬಡಾವಣೆ, ಬಡಾವಣೆಯಲ್ಲಿ, ಅಭಿವೃದ್ಧಿ ತಾರತಮ್ಯದ ಕಿಚ್ಚು ಆರಂಭವಾಗಲಿದೆ. ಇದಕ್ಕೆ ಇನ್ನೂ ಕೆಲ ಕಾಲ ಕಾಯಬೇಕು’.

ರಾಷ್ಟ್ರ ಮತ್ತು ರಾಜ್ಯಗಳ ಅಭಿವೃದ್ಧಿ ತಾರತಮ್ಯದ ಬಗ್ಗೆ ಮಿಂಚು, ಗುಡುಗು, ಸಿಡಿಲು  ಸಹಿತ ಆರಂಭವಾಗಿರುವ ಹೋರಾಟದ ಪ್ರತಿಫಲ ಉತ್ತಮವಾಗುವ ಆಶಾಭಾವನೆ ಇದೆ. 

ಪ್ರಸ್ತುತ ಯಾವುದೇ ಹಂತದ ಚುನಾಯಿತ ಜನಪ್ರತಿನಿಧಿಗಳ, ಅಭಿವೃದ್ಧಿ ಚಟುವಟಿಕೆಗಳಿಗೆ ಅಕೌಂಟಬಿಲಿಟಿ ಇದೆಯೇ, ಅವರನ್ನು ಕೇಳಬೇಕಾದವರು ಮತದಾರರು. ಮತದಾರರು ಕೇಳುವ ನೈತಿಕ ಹಕ್ಕು ಉಳಿಸಿಕೊಂಡಿಲ್ಲ, ಕಾರಣ ಬಹುತೇಕರು ಹಣ ಪಡೆದು ಮತಹಾಕುತ್ತೇವೆ ಅಥವಾ ನಮ್ಮ ಜಾತಿ, ನಮ್ಮ ಪಕ್ಷ ಎಂದು ಅಪ್ಪಿಕೊಳ್ಳುತ್ತೇವೆ.

ಯಾವುದೇ ಪಕ್ಷದ ಶಾಸಕ, ಸಂಸದ ಅವಧಿ ಮುಗಿದ ನಂತರ ಅವರ ಕರ್ತವ್ಯದ ಮಾಹಿತಿಗಳೇ ಎಲ್ಲೂ ಸಿಗುವುದಿಲ್ಲ. ಓದ ಪುಟ್ಟ ಬಂದ ಪುಟ್ಟ ರೀತಿಯಲ್ಲಿ ನಡೆದು ಬಂದಿದೆ, ಮನಸ್ಸಿಗೆ ಬಂದಂತೆ ನಡೆಯುತ್ತಿದೆ. ಅಧಿಕಾರ ಇರುವವರೆಗೂ ಆರ್ಭಟ, ನಂತರ ಬಹುತೇಕರು ಮನೆ ಸೇರಿಕೊಳ್ಳುತ್ತಾರೆ.

ಮತದಾರರು ಮತ್ತು ಬಹುತೇಕ ಎಲ್ಲಾ ಪಕ್ಷಗಳ ಕಾರ್ಯಕರ್ತರು ಇಂಗು ತಿಂದ ಮಂಗನಂತೆ ಇರುತ್ತಾರೆ. ಅಭಿವೃದ್ಧಿ ತಾರತಮ್ಯ ನರಕ ಯಾತನೆ ಅನುಭವಿಸುತ್ತಾರೆ. ಉಳ್ಳವರು ಶಿವಾಲಯ ಕಟ್ಟುವರು, ಇದೇ ಪ್ರಪಂಚ ಎನ್ನುವಂತಾಗಿದೆ. ಇದು ಬದಲಾಗಲೇ ಬೇಕು.

ಅಗೋಚರ ಶಕ್ತಿ