9th October 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ ಗೋಪುರದಲ್ಲಿ ಕುಳಿತು ಧ್ಯಾನ ಮಾಡಿದರೆ ಇಡೀ ಪ್ರಪಂಚವನ್ನೇ ಮರೆಸುತ್ತದೆ. ನೋವು ನಲಿವುಗಳ ಅರಿವೇ ಇರುವುದಿಲ್ಲ.ಮಾನವ ಸಹಜ ಪ್ರಕ್ರೀಯೆಗಳಾದ ಹಣ, ಐಶ್ವರ್ಯ, ಅಧಿಕಾರದ ಪಿತ್ತಗಳಿಗೆ ಕಡಿವಾಣ ಬೀಳಲಿದೆ. ಧ್ಯಾನದ ಮುಂದೆ ಎಲ್ಲವೂ ಶೂನ್ಯ.

ನನ್ನ ಆತ್ಮೀಯ ಸ್ನೇಹಿತರೊಬ್ಬರಾದ ಶ್ರೀ ಮುರುಳೀಧರ್ ನಾಯಕ್ ರವರು ಹೇಳಿದ ಮಾತು, ನಾನು ಇಂದು ನಿಮ್ಮ ಮುಖವನ್ನು ಗಮನಿಸಿದೆ. ನಿಮ್ಮ ಮುಖ ಮಗುವಿನ ಮುಖದ ರೀತಿ ಕಾಣಿಸಿತು. ನಿಮ್ಮ ಆವೇಶ, ಗಡುಸುತನ, ಸಿಟ್ಟು ಎಲ್ಲವೂ ನಾಪತ್ತೆಯಾಗಿತ್ತು ಏನಿದರ ಮರ್ಮ ಎಂಭಂತಿತ್ತು.

ಹೌದು ಶಕ್ತಿಭವನದಲ್ಲಿ ನಿರ್ಮಾಣ ಮಾಡಿರುವ ಶಕ್ತಿಪೀಠ ಗೋಪುರದಲ್ಲಿ ನಾನು ಮಾಡುತ್ತಿರುವ  ಧ್ಯಾನದ ಮಹತ್ವ ಸ್ವಾಮಿ. ಇದೊಂದು ನನಗೆ ಹೊಸ ಲೋಕದ ದರ್ಶನವಾಗುತ್ತಿದೆÉ ಎಂದಷ್ಟೇ ಹೇಳಬಹುದು.

ಹೆಚ್ಚಿಗೆ ಹೇಳಿದರೆ ಅರ್ಥವಿರುವುದಿಲ್ಲ, ಅನುಭವಿಸಿದವರಿಗೆ ಮಾತ್ರ ಗೊತ್ತು,  ಪೂಜೆ, ಶಾಸ್ತ್ರ, ವಾಸ್ತು, ದೈವ ಸಂಕಲ್ಪಗಳೊಂದಿಗೆ, ವಿಶ್ವದ 108 ಶಕ್ತಿಪೀಠಗಳ ಸಮ್ಮುಖದಲ್ಲಿ ಮಾಡುವ ಧ್ಯಾನ ಇನ್ನೂ ಹೇಗಿರಬೇಕು ಎಂದು ಹೇಳಿ ಸುಮ್ಮನಾದೆ.

ತಪಸ್ವಿಗಳ ನೆಮ್ಮದಿ ಅವರ ಧ್ಯಾನದಲ್ಲಿ ಇರುತ್ತದೆಯಂತೆ. ಇದು ಅನುಭವಿಗಳ ಮಾತು. ಬಹುಷಃ ಶೀಘ್ರದಲ್ಲಿ ನನ್ನಲ್ಲಿ ಭಾರಿ ಬದಲಾವಣೆ ಆಗಬಹುದು ಎಂಬ ಭಾವನೆ ನನ್ನದಾಗಿದೆ.

  1. ಶಿವ ಆಲದ ಮರದ ಕೆಳಗೆ ಕುಳಿತು ಮಾಡುವ ತಪಸ್ಸು.
  2. ಬ್ರಹ್ಮ ತನ್ನ ಸ್ಥಳದಲ್ಲಿಯೇ ಕುಳಿತು ಬ್ರಹ್ಮಾಂಡವನ್ನು ಗಮನಿಸುವ ದೃಷ್ಯದ ಮನಸ್ಸು.
  3. ವಿಷ್ಣು ತನ್ನ ಸುದರ್ಶನ ಹಿಡಿದು ಸತಿಯ ದೇಹದ ಭಾಗಗಳನ್ನು ತುಂಡು ಮಾಡಿದ ದೃಷ್ಯದ ಕನಸು.

ಈ ಮೂರು ಅಂಶಗಳ ಪರಿಕಲ್ಪನೆಯೊಂದಿಗೆ, ಮೂರು ಸ್ಥಳದಲ್ಲಿ ಕುಳಿತು ಧ್ಯಾನ ಮಾಡಲು ವಿಶಿಷ್ಠವಾದ ಪ್ರಾತ್ಯಾಕ್ಷಿಕೆ ಸಿದ್ಧಪಡಿಸುವ ಆಲೋಚನೆ ನನ್ನಲ್ಲಿ ಮೂಡುತ್ತಿದೆ.

ಜ್ಞಾನಿಗಳ ಜೊತೆ ಸಮಾಲೋಚನೆ ಮಾಡಿದ ನಂತರ ಒಂದು ರೂಪುರೇಷೆ ಸಿದ್ಧವಾಗಲಿದೆ. ಅನುಭವಿಗಳು ಸಂಪರ್ಕಿಸಲು ಮನವಿ.