24th April 2024
Share

TUMAKURU:SHAKTHIPEETA FOUNDATION

ಬೆಜೆಪಿ ನೇತೃತ್ವದ ಕೇಂದ್ರ ಸರ್ಕಾರ 2024-25 ರ ಆಯವ್ಯಯದಲ್ಲಿ ದೇಶಾಧ್ಯಂತ ವಿವಿಧ ನಗರಗಳಿಗೂ ಮೆಟ್ರೊ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿತ್ತು.

ಕಾಂಗ್ರೆಸ್ ಸರ್ಕಾರ ಇದಕ್ಕೆ ಪುಷ್ಠಿ ನೀಡುವಂತೆ, ತುಮಕೂರುವರೆಗೂ ಮೆಟ್ರೋ ಸಾಧ್ಯತಾ ವರದಿ ತಯಾರಿಸಲು 2024-25 ರ ಆಯವ್ಯಯದಲ್ಲಿ ಪ್ರಸ್ತಾಪ ಮಾಡಿದೆ.

ತುಮಕೂರಿಗೆ ಮೆಟ್ರೋ ಚಿಂತನೆಯನ್ನು, ಅಭಿವೃದ್ಧಿ ರೆವ್ಯೂಲ್ಯೂಷನ್ ಫೋರಂ  ದಿನಾಂಕ:10.11.2017 ರಂದು ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್-2025 ರಲ್ಲಿ ಪ್ರಸ್ತಾಪ ಮಾಡಲಾಗಿತ್ತು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸ್ಪಂಧಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದರು. ನಂತರ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ರವರು ಉಪಮುಖ್ಯಮಂತ್ರಿ ಆಗಿದ್ದ, ಅವಧಿಯಲ್ಲಿಯೇ  ಮೆಟ್ರೋ ಬಗ್ಗೆ ಗಮನ ಹರಿಸಿದ್ದರು.

ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಮನವಿ ಮೇರೆಗೆ, ಶ್ರೀ ಬಸವರಾಜ್ ಬೊಮ್ಮಾಯಿರವರು ಮುಖ್ಯಮಂತ್ರಿಯಾಗಿದ್ದಾಗ ಮೆಟ್ರೋ ಸಮೀಕ್ಷೆ ಮಾಡಲು ಸೂಚಿಸಿದರೂ,  ಮೆಟ್ರೋದ ಒಬ್ಬ ಅಧಿಕಾರಿಯ ಕೆಟ್ಟ ನಿರ್ಧಾರದಿಂದ ನನೆಗುದಿಗೆ ಬಿದ್ದಿತ್ತು. ಅವರ ಜೊತೆ ಕುಂದರನಹಳ್ಳಿ ರಮೇಶ್ ರವರು ಅಭಿವೃದ್ಧಿ ಕಾಳಗ ನಡೆಸಿದ್ದೂ ಇತಿಹಾಸ.

ಈಗಿನ ಸರ್ಕಾರದಲ್ಲಿ ಮತ್ತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ರವರು, ಸಹಕಾರ ಸಚಿವರಾಗಿರುವ ಶ್ರೀ ಕೆ.ಎನ್.ರಾಜಣ್ಣನವರು ಮತ್ತು ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರರವರ ಆಸಕ್ತಿ ಮೇರೆಗೆ,  ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಚಾಲನೆ ನೀಡಿದ್ದಾರೆ.

ಮುಂಬೈ- ಬೆಂಗಳೂರು ಎಕಾನಮಿಕ್ ಕಾರಿಡಾರ್ ಮತ್ತು ಚನ್ನೈ- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಅಡಿಯಲ್ಲಿ, ತುಮಕೂರಿನ ವಸಂತನರಸಾಪುರ ಇಂಡಸ್ಟ್ರಿಯಲ್ ಕಾರಿಡಾರ್ ಸುಮಾರು 13000 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ.

ಮೆಟ್ರೋ ನಗರಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರಲಿದೆ. ಇಲ್ಲಿಯವರೆಗೆ ಮೆಟ್ರೋ ವಿಸ್ತರಣೆ ಆದರೆ, ಬೆಂಗಳೂರಿಗೆ ವರದಾನವಾಗಲಿದೆ. ಬೆಂಗಳೂರಿನ ಒತ್ತಡವನ್ನು ಮಾರ್ಗದುದ್ದಕ್ಕೂ, ಪ್ರತಿಯೊಂದು  ಮೆಟ್ರೋ ನಿಲ್ಧಾಣಗಳಲ್ಲಿ  ಒಂದೊಂದು ಮಾಡೆಲ್ ವಿಲೇಜ್ ಅಭಿವೃದ್ಧಿ ಪಡಿಸುವ ಮೂಲಕ, ಸುಮಾರು 300 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹೊಸ ಮಾಡೆಲ್ ವಿಲೇಜ್ ತಲೆ ಎತ್ತಲಿವೆ.

ಮಾರ್ಗದ ಉದ್ದಕ್ಕೂ ವಿವಿಧ ಕ್ಲಸ್ಟರ್ ಗಳನ್ನು ನಿರ್ಮಾಣ ಮಾಡಿದರೆ, ಎಕಾನಮಿಕ್ ಕಾರಿಡಾರ್ ಹೊಸ ಇತಿಹಾಸದ ಜೊತೆಗೆ, ಲಕ್ಷಾಂತರ ಉದ್ಯೋಗವೂ ಸೃಷ್ಠಿಸಲಿದೆ.

ಬೆಂಗಳೂರಿಗೆ ಪಶ್ಚಿಮಘಟ್ಟಗಳ ನೀರು ತರುವಾಗ, ಮೆಟ್ರೋ ಮಾರ್ಗದ ಉದ್ದ ಸುಮಾರು 2.5 ಕೀಮೀ ಅಕ್ಕ-ಪಕ್ಕ ಬರುವ ಕೆರೆಗಳಿಗೆ ನದಿ ನೀರು ತುಂಬಿಸಿದರೆ, ಫಾರ್ಮಿಂಗ್ ಟೂರಿಸಂಗೆ ವರದಾನವಾಗಲಿದೆ. ರೈತರ ಎಲ್ಲಾ ಬೆಳೆ ಮತ್ತು ತರಕಾರಿಗಳ ಕ್ಲಸ್ಟರ್ ನಿರ್ಮಾಣ ಮಾಡುವ ಮೂಲP, ರೈತರಿಗೆ ಒಳ್ಳೆಯ ಉತ್ಪಾದನೆ ಮತ್ತು  ಉತ್ತಮ ಆಹಾರ ನಗರದ ಜನತೆಗೆ ದೊರೆಯಲಿದೆ.

ಈ ಬಹುಪಯೋಗಿ ಯೋಜನೆ, ಡಿಕೆಶಿ ಬ್ರ್ಯಾಂಡ್ ಬೆಂಗಳೂರಿಗೆ ಒಂದು ಕಿರೀಟವಾಗಲಿದೆ.

–      ಅಗೋಚರ ಶಕ್ತಿ.