TUMAKURU:SHAKTHIPEETA FOUNDATION
‘ಬ್ರ್ಯಾಂಡ್ ಬೆಂಗಳೂರು’ ಘೋಷಣೆಗೆ ಪೂರಕವಾಗಿ, ಬೆಂಗಳೂರಿನ ಒತ್ತಡ ತಗ್ಗಿಸಲು, ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಅಬಿವೃದ್ಧಿಯೂ ಒಂದು ಉತ್ತಮ ಆಲೋಚನೆ.
ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ ತುಂಬಿ ತುಳುಕುವ ಸಮಯ ಹತ್ತಿರದಲ್ಲಿದೆ. ಇನ್ನೊಂದು ಅಂತರರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಚಾಲನೇ ನೀಡುವ ಅನಿವಾರ್ಯತೆ ರಾಜ್ಯ ಸರ್ಕಾರದ ಮುಂದೆ ಇದೆ.
ಮಧುಗಿರಿ, ಕೊರಟಗೆರೆ, ಶಿರಾ ಮತ್ತು ತುಮಕೂರು ತಾಲ್ಲೋಕುಗಳ ಜಮೀನಿನನಲ್ಲಿ ಏರ್‍ಪೋರ್ಟ್ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ. ಸುಮಾರು 8500 ಎಕರೆ ಜಮೀನು ಗುರುತಿಸಿದೆ, ಇದರಲ್ಲಿ ಸುಮಾರು 2000 ರಿಂದ 3000 ಎಕರೆ ಸರ್ಕಾರಿ ಜಮೀನು ಇದೆ ಎಂಬ ಸುದ್ಧಿ ಇದೆ.
ವಿಮಾನ ನಿಲ್ದಾಣಕ್ಕೆ ಸುಮಾರು 4000 ಎಕರೆ ಜಮೀನು ಸಾಕು ಎಂಬ ಆಲೋಚನೆಯೂ ಇದೆ. ರೈತರ ಜಮೀನುಗಳಿಗೆ ಬದಲಾಗಿ ತುಮಕೂರು, ಶಿರಾ ಮತ್ತು ಕೊರಟಗೆರೆ ನಗರದ ಸುತ್ತ ಮುತ್ತ ಇರುವ ಸರ್ಕಾರಿ ಜಮೀನನ್ನು ರೈತರಿಗೆ ನೀಡಬಹುದಾಗಿದೆ.
ನಗರಗಳ ಸುತ್ತ-ಮುತ್ತ ಇರುವ ಸರ್ಕಾರಿ ಜಮೀನನ್ನು ಯಾರಿಗೂ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸಚಿವ ಸಂಪುಟದ ಅನುಮೋದನೆ ಅಗತ್ಯ. ಜೊತೆಗೆ ಪರಿಹಾರ ಮತ್ತು ಉದ್ಯೋಗದ ಖಚಿತ ಭರವಸೆ ನೀಡಲೇ ಬೇಕಿದೆ.
ಮಧುಗಿರಿ, ಕೊರಟಗೆರೆ, ಶಿರಾ ದಲ್ಲಿನ ಮೂರೂ ಜನ ಶಾಸಕರುಗಳಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವರು ಹಾಗೂ ಒಬ್ಬರು ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವವರು. ಇವರು ದಿಟ್ಟ ನಿರ್ಧಾರ ಕೈಗೊಂಡಿದ್ದರೆ, 2024-25 ರ ಆಯವ್ಯಯದಲ್ಲಿ ಪ್ರಸ್ತಾವನೆ ಸೇರ್ಪಡೆ ಆಗುತ್ತಿತ್ತು.
ಸುಮಾರು 300 ರಿಂದ 400 ಜನ ರೈತರ ಜಮೀನು ಮಾತ್ರ ಇರಬಹುದು ಎಂಬ ಅಂದಾಜಿದೆ, ನಿಖರವಾದ ಮಾಹಿತಿ ಸಮೀಕ್ಷೆ ಆದ ಮೇಲೆ ತಿಳಿಯಲಿದೆ. 400 ಜನರಿಗೆ ಬದಲಿ ಜಮೀನು ಮತ್ತು ಪರಿಹಾರ ನೀಡಿದರೆ, ರೈತರು ಒಪ್ಪುತ್ತಿದ್ದರು. ಈ ಯೋಜನೆ ಘೋಷಣೆಗಾಗಿ, ಈ ಭಾಗದ ಲಕ್ಷಾಂತರ ಜನರ ಕಾಯುತ್ತಿದ್ದರು. ಅವರಿಗೆಲ್ಲಾ ನಿರಾಸೆಯಾಗಿದೆ.
ಆದರೇ ಅಭಿವೃದ್ಧಿ ವಿರೋಧಿಗಳ ಹೋರಾಟಕ್ಕೆ ಹೆದರಿ, ಯೋಜನೆಯ ಪ್ರಸ್ತಾವನೆ ಕೈ ಬಿಟ್ಟರೆ ಎಂಬ ಸುದ್ಧಿ ಇದೆಯಾದರೂ, ‘ಬಿಡದಿ ರಾಮನಗರದ ಕಡೆ ಏರ್ ಪೋರ್ಟ್’ ಕೊಂಡೊಯ್ಯುವ ತಂತ್ರ ಅಡಗಿರುವುದು ಸತ್ಯ. ತುಮಕೂರು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳು ತಮ್ಮ ನಿಲುವನ್ನು ಬಹಿರಂಗಗೊಳಿಸಲಿ.
– ಆಗೋಚರ ಶಕ್ತಿ