27th December 2024
Share

TUMAKURU:SHAKTHIPEETA FOUNDATION

  ಭಾರತ ದೇಶದ, ಮಹಾರಾಷ್ಟ್ರ ರಾಜ್ಯದ, ಹುಸ್ಮನಾಬಾದ್(ಧಾರಾಶಿವ್) ಜಿಲ್ಲೆಯ, ತುಳುಜಾಪುರ ತಾಲ್ಲೋಕು ಕೇಂದ್ರದಲ್ಲಿ ನೆಲಸಿರುವ ತಾಯಿ ತುಳ್‍ಜಾ ಭವಾನಿ ದೇವಾಲಯವಿದೆ. ತುಳ್ಜಾಪುರ ನಗರಸಭೆ ವ್ಯಾಪ್ತಿಯಲ್ಲಿಯೇ ಬರಲಿದೆ.

  ತನ್ನ ತಂದೆ, ಪ್ರಜಾಪತಿ ದಕ್ಷಬ್ರಹ್ಮನು ನಡೆಸಿದ ಹೋಮ/ಯಜ್ಞಕ್ಕೆ ಭಾಗವಹಿಸಿದ ಸತಿಯ ಮುಂದೆಯೇ ತನ್ನ ಪತಿ ಶಿವನಿಗೆ ಅವಮಾನ ಮಾಡಿದಾಗ, ತನ್ನ ತಂದೆಯಾದ  ಪ್ರಜಾಪತಿ ದಕ್ಷಬ್ರಹ್ಮನು ಮಾಡಿದ ಅವಮಾನದಿಂದ ಕೋಪಗೊಂಡು, ತನ್ನ ತಂದೆ ಮಾಡುತ್ತಿರುವ ಯಜ್ಞ ಎಂದು ಲೆಕ್ಕಿಸದೆ, ಯಜ್ಞ ಭಂಗ ಮಾಡಲು, ಬೆಂಕಿಗೆ ಬಿದ್ದ, ಸತಿಯ ದೇಹವನ್ನು ಹೊತ್ತು ನರ್ತನ ಆರಂಭಿಸಿದ ಶಿವನ ಅವತಾರಕ್ಕೆ ಹೆದರಿ, ದೇವತೆಗಳು ವಿಷ್ಣು ಮೊರೆಹೋದಾಗ, ವಿಷ್ಣು ತನ್ನ ಸುದರ್ಶನಚಕ್ರದಿಂದ ಸತಿಯ ದೇಹವನ್ನು ತುಂಡು ತುಂಡು ಮಾಡಿದಾಗ, ಇಲ್ಲಿ ಸತಿಯ ಎಡತೋಳು/ಬಲತೋಳು ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಚಕ್ರಪತಿ ಶಿವಾಜಿಯ ಆರಾಧ್ಯಾದೇವತೆ ಎಂತಲೂ, ಮಹಾರಾಷ್ಟ್ರದ ಅಧಿದೇವತೆ ಎಂತಲೂ, ಮೊಗಲರ ನಾಡದೇವತೆ ಎಂತಲೂ ಕರೆಯುತ್ತಾರಂತೆ.

ಚಕ್ರಪತಿ ಶಿವಾಜಿಯವರು ಹಿಡಿರುವ ಖಢ್ಗವನ್ನು ತುಳುಜಾಭವಾನಿಯವರೇ ನೀಡಿದ ಖಡ್ಗ ಎಂತಲೂ, ಶಿವಾಜಿಯವರ ಖಡ್ಗಕ್ಕೆ ತಾಯಿ ತನ್ನ ಶಕ್ತಿ ತುಂಬಿದರು ಎಂತಲೂ ನಂಬಿಕೆ ಇದೆ.

ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಿರುವ, ತುಮಕೂರಿನ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕರಾದ ಕುಂದರನಹಳ್ಳಿ ರಮೇಶ್, ಬಿ.ಸುಜಾತಕುಮಾರಿ ಮತ್ತು ಕೆ.ಆರ್.ಸೋಹನ್  ನಿಯೋಗ, ದಿನಾಂಕ:24.02.2024 ರಿಂದ ದಿನಾಂಕ:26.02.2024 ರವರೆಗೆ ಪ್ರವಾಸ ಹಮ್ಮಿಕೊಂಡಿತ್ತು.

ಆರ್.ಕೆ. ಧೆರೆಯವರು ಬರೆದಿರುವ ಸುಮಾರು 653 ಪುಟಗಳ ತುಳ್ಜಾಭವಾನಿ ಪುಸ್ತಕವನ್ನು ತಂದಿದ್ದಾರೆ, ಅದು ಮರಾಠಿ ಭಾಷೆಯಲ್ಲಿದೆ. ಬೇರೆ ಯಾವುದೇ ಭಾಷೆಯಲ್ಲಿ ಪುಸ್ತಕ ಪ್ರಕಟವಾಗಿಲ್ಲವಂತೆ.

ತಾಯಿ ಭವಾನಿಯ ಭಕ್ತರು, ಆರಾಧಕರು, ಅಧ್ಯಯನ ಮಾಡಿರುವವರು, ಸ್ಥಳೀಯ ನಿವಾಸಿಯವರು, ಹೆಚ್ಚಿನ ಮಾಹಿತಿಗಳಿದ್ದಲ್ಲಿ ಹಂಚಿಕೊಳ್ಳಲು ಮನವಿ.

–      ಅಗೋಚರಶಕ್ತಿ