23rd December 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ಅಸ್ಥಿತ್ವÀದಲ್ಲಿರುವ  ಪ್ರೆಸ್ಟೀಜ್ ಜಿಂದಾಲ್ ಸಿಟಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ದ ನೇತೃತ್ವದಲ್ಲಿ  ಸಾಮಾಜಿಕ ಹಾಗೂ ಧಾರ್ಮಿಕ ಅಧ್ಯಯನ ಪೀಠ ಸ್ಥಾಪಿಸಲು ಚಿಂತನೆ ಆರಂಭವಾಗಿದೆಯಂತೆ.

ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ಸುಮಾರು 3571 ಪ್ಲಾಟ್‍ಗಳಿದ್ದು, ಅವುಗಳಲ್ಲಿ

  1. ಪ್ರಪಂಚದ ವಿವಿಧ ದೇಶದ,
  2. ಭಾರತ ದೇಶದ ವಿವಿಧ ರಾಜ್ಯದ.
  3. ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಬಹುತೇಕ 224 ವಿಧಾನಸಭಾ ಕ್ಷೇತ್ರಗಳ ಜನರು ನಿವಾಸಿಗಳು ಇರಬಹುದು ಎಂಬ ಅಂದಾಜು ಇದೆಯಂತೆ.

ಒಂದು ತಂಡ ಈಗಾಗಲೇ ವ್ಯಾಪ್ತಿವಾರು ಮಾಹಿತಿ ಸಂಗ್ರಹ ಆರಂಭಿಸಿದ್ದಾರಂತೆ.

ಪ್ರಪಂಚದ ಸರ್ವಧರ್ಮಗಳ, ಜಾತಿ/ಉಪಜಾತಿಗಳ, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಅಧ್ಯಯನ ಮತ್ತು  ಸಂಶೋಧನೆ ಮಾಡಿರುವವರ ಮಾಹಿತಿ, ಅಧ್ಯಯನ ವರದಿಗಳ ಮಾಹಿತಿ, ಆಚರಣೆಗಳ ರೀತಿ ನೀತಿ, ಕಲ್ಚರಲ್ ಎಕ್ಸ್‍ಚೇಂಜ್, ಭಾಷಾಜ್ಞಾನ, ಸಾಂಸೃತಿಕ ಚಟುವಟಿಕೆಗಳು,  ಹಬ್ಬ ಹರಿದಿನಗಳ ಮತ್ತು   ಇತ್ಯಾದಿ ಚಟುವಟಿಕೆಗಳ ಬಗ್ಗೆ ಅಲ್ಲಿನ ಜನರೊಂದಿಗೆ ವಿಚಾರ ವಿನಿಮಯಕ್ಕೆ ವಿಶೇಷ ಆಧ್ಯತೆ ನೀಡಿದ್ದಾರಂತೆ.

ಈಗಾಗಲೇ ಟ್ರಿಪಾರ್ಕ್‍ನಲ್ಲಿ ಪಂಚವಟಿಗಿಡ’ ಹಾಕಿ, ಪ್ರತಿನಿತ್ಯ ಸಂಜೆ ಮತ್ತು ಬೆಳಿಗ್ಗೆ  ಪೂಜೆ ಸಲ್ಲಿಸುವ ಮೂಲಕ ಹಿರಿಯ ನಾಗರೀಕರು ಸಂತೋಷ ಪಡುತ್ತಿದ್ದಾರಂತೆ.

ಅಪಾರ್ಟ್‍ಮೆಂಟ್‍ನ ಯಾವುದೇ ಮೂಲೆಯಲ್ಲಾದಾರೂ, ಪ್ರತಿ ದಿನ ಯಾವುದಾದರೊಂದು ಒಂದಲ್ಲ, ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆಯಂತೆ.

3571 ಅಪಾರ್ಟ್ ಮೆಂಟ್‍ಗಳಲ್ಲಿ ಪ್ರತಿದಿನ 9 ಪ್ಲಾಟ್ (365 * 9= 3285)ಗಳಂತೆ ಹಂಚಿದರೂ ವರ್ಷದ 365 ದಿವಸಗಳಿಗೆ 3285 ಪ್ಲಾಟ್‍ಗಳು ಪೂರ್ಣಗೊಳ್ಳುತ್ತವೆ, ಇನ್ನೂ 286 ಪ್ಲಾಟ್‍ಗಳು ಹೆಚ್ಚುವರಿಯಾಗುತ್ತವೆಯಂತೆ. ವರ್ಷ ಪೂರ್ತಿ ವಿವಿಧ ಭಾಗದ ಜನರ ಆಚಾರ-ವಿಚಾರಗಳ ಚರ್ಚೆ ನಡೆದರೆ ಹಿರಿಯ ನಾಗರೀಕರ ಮನಸ್ಸಿಗಳಿಗೆ ಹಬ್ಬ ಅಲ್ಲವೇ?

ನಗರ ಪ್ರದೇಶದಲ್ಲಿ ಗ್ರಾಮೀಣ ಪ್ರದೇಶಗಳ ಆಚರಣೆಗೆ ಒತ್ತು ನೀಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಅಗೋಚರಶಕ್ತಿ