TUMAKURU:SHAKTHIPEETA FOUNDATION
ಪಿಜೆಸಿ: 3571 ಪ್ಲಾಟ್‍ಗಳ ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹ ಹಾಗೂ ಕೆಳಕಂಡ 7 ಇಲಾಖೆಗಳೊಂದಿಗೂ ಸಮಾಲೋಚನೆ ಆರಂಭ.
- ನಗರಾಭಿವೃದ್ಧಿ ಇಲಾಖೆ.
- ಕಂದಾಯ ಇಲಾಖೆ.
- ಪ್ರವಾಸೋಧ್ಯಮ ಇಲಾಖೆ.
- ಹಿಂದುಳಿದ ವರ್ಗಗಳ ಇಲಾಖೆ.
- ಕನ್ನಡ ಮತ್ತು ಸಂಸ್ಕøತಿ ಇಲಾಖೆ.
- ಮುಜರಾಯಿ ಇಲಾಖೆ.
- ವಕ್ಛ್ ಇಲಾಖೆ
ಅಧ್ಯಯ£ದ ಆರಂಭಿಕÀ/ಮಧ್ಯಂತರ ವರದಿ
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೋಕು, ದಾಸಾನುಪುರ-2 ಹೋಬಳಿ, ಚಿಕ್ಕಬಿದರೆಕಲ್ಲು ಗ್ರಾಮದ, ‘ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ ಆವರಣ’ ದಲ್ಲಿ ಇರುವ ಸರ್ವೆನಂಬರ್ 29/2 ರಲ್ಲಿನ ಸರ್ಕಾರಿ ಬಿ-ಖರಾಬು 26 ಗುಂಟೆ ಎಂದು ಕೆಲವು ದಾಖಲೆಗಳಲ್ಲಿ ಇದೆ, ಇನ್ನೂ ಕೆಲವು ದಾಖಲೆಗಳಲ್ಲಿ 16 ಗುಂಟೆ ಇದೆ. ನನ್ನ ಅಧ್ಯಯನ ವರದಿಯ ಪ್ರಕಾರ, ಈ ಜಮೀನಿನ ಇತಿಹಾಸ.
- ನಾನು ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‍ಮೆಂಟ್‍ನಲ್ಲಿ ಪ್ಲಾಟ್ ಕೊಂಡು ಕೊಳ್ಳಲು ಬಯಸಿದ್ದಾಗ, ಅವರು ನೀಡಿದ್ದ ದಾಖಲೆಗಳ ಅಧ್ಯಯನದಲ್ಲಿ ಸರ್ಕಾರಿ ಬಿ.ಖರಾಬು ಜಮೀನಿನ ಮಾಹಿತಿ ದೊರಕಿತು.
- ಚಿಕ್ಕಬಿದರೆಕಲ್ಲು ವಿಲೇಜ್ ಮ್ಯಾಪ್ ಗಮನಿಸಿದಾಗ ಕುಂಟೆ ಖರಾಬು ಇರುವುದು ತಿಳಿಯಿತು.
- ದಿನಾಂಕ:22.10.2022 ರಂದೇ, ಈ ಜಮೀನಿನಲ್ಲಿ ಆಸಕ್ತ ನಿವಾಸಿಗಳ ನೇತೃತ್ವದಲ್ಲಿ ‘ಪಂಚವಟಿ’ ಗಿಡ ಹಾಕಿಸಲಾಯಿತು. ನಿವಾಸಿಗಳು ಸ್ವಯಂ ಇಚ್ಚೆಯಿಂದ ನಿರ್ವಹಣೆ ಮಾಡುತ್ತಿದ್ದಾರೆ.
- ಹಳೇ ಪಹಣಿಯಲ್ಲಿ ಖರಾಬು ಮಾಹಿತಿ ಇದೆ, ಕಂಪ್ಯೂಟರ್ ಪಹಣಿಯಲ್ಲಿ ಖರಾಬು ಮಾಯಾವಾಗಿದೆ.
- ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‍ಮೆಂಟ್ ಲೇ-ಔಟ್‍ನಲ್ಲಿ ‘ಬಿ ಖರಾಬು’ ಜಮೀನನ್ನು ಆವರಣ ಗೋಡೆ ಹಾಕಿ ಪ್ರತ್ಯೇಕವಾಗಿ ಬಿಟ್ಟಿರುತ್ತಾರೆ. ಈಗ ಅದು ಟ್ರೀ ಪಾರ್ಕ್ ಆಗಿದೆ.
- ದಿನಾಂಕ:20.06.2000 ದಂದು ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಯವರು ಭೂ ಪರಿವರ್ತನೆ ಮಾಡುವಾಗ, ಇದನ್ನು ಈಗಾಗಲೇ ‘ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುಲು’ ಅದೇಶ ಮಾಡಿರುತ್ತಾರೆ.
- ಪಹಣಿಯಲ್ಲಿ ನಮೂದಿಸಲು ಜಿಲ್ಲಾಧಿಕಾರಿಯವರು ತಹಶೀಲ್ಧಾರ್ ರವರಿಗೆ ಸೂಚನೆ ನೀಡಿದ್ದಾರೆ. ಆದರೂ ಇದೂವರೆಗೂ ‘ಪಹಣಿಯಲ್ಲಿ ನಮೂದಾಗಿರುವುದು ದಾಖಲೆ’ ಸಿಕ್ಕಿಲ್ಲ.
- ದಿನಾಂಕ:06.09.2016 ರಲ್ಲಿ ಜಂಟಿ ಸಹಭಾಗಿತ್ವದಲ್ಲಿ ಭೂ ಪರಿವರ್ತನೆ ಮಾಡುವಾಗ 16 ಗುಂಟೆ ಬಿ. ಖರಾಬು ಬಿಟ್ಟು ಭೂ ಪರಿವರ್ತನೆ ಮಾಡಲು ಕರಾರು ಪತ್ರದಲ್ಲಿ ನಮೂದಿಸಿದ್ದಾರೆ.
- ದಿನಾಂಕ:06.09.2016 ರಲ್ಲಿ ಇ.ಸಿ ಯಲ್ಲೂ 16 ಗುಂಟೆ ಬಿ. ಖರಾಬು ನಮೂದಿಸಿದ್ದಾರೆ.
- ಹಿಸ್ಸಾ ಸರ್ವೇ ಟಿಪ್ಪಣಿಯಲ್ಲಿ 26 ಗುಂಟೆ ಖರಾಬು ಮಾಹಿತಿ ಇದೆ.
- ದಿನಾಂಕ:30.11.1907 ರ ರಿಸರ್ವೇ ಟಿಪ್ಪಣೆಯಲ್ಲಿ 26 ಗುಂಟೆ ಖರಾಬು ಮಾಹಿತಿ ಇದೆ.
- ದಿನಾಂಕ:30.11.1907 ರ ರಿಸರ್ವೇ ಟಿಪ್ಪಣೆಯಲ್ಲಿ 26 ಗುಂಟೆ ಖರಾಬು ನಕ್ಷೆಯಲ್ಲೂ ಗುರುತು ಮಾಡಿದ್ದಾರೆ.
- ದಿನಾಂಕ:20.12.2016 ರ ಪ್ರೆಸ್ಟೀಜ್ ಸೌತ್ ಸಿಟಿ ಹೋಲ್ಡಿಂಗ್ಸ್ ಟೈಟಲ್ ವರದಿಯಲ್ಲೂ 16 ಗುಂಟೆ ಬಿ. ಖರಾಬು ಜಮೀನು ನಮೂದು ಮಾಡಿದ್ದಾರೆ.
- ‘ಸಾಮಾಜಿಕ ಹಾಗೂ ಧಾರ್ಮಿಕ ಅಧ್ಯಯನ ಪೀಠ’ ದ ವತಿಯಿಂದ, ಉದ್ದೇಶಿತ ಎರಡು ಯೋಜನೆಗಳಿಗೆ ಸೇರಿ, ಕೇವಲ 60 ಅಡಿ ಅಗಲ ಮತ್ತು 60 ಅಡಿ ಉದ್ದದಲ್ಲಿ ಕೇವಲ 3600 ಚದುರ ಅಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ, ಉಳಿದ ಜಮೀನಿನನಲ್ಲಿ ಗಿಡಗಳನ್ನು ಬೆಳೆಸಲು ಆಸಕ್ತಿ ಹೊಂದಿದ್ದಾರೆ.
- ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ಭಾವಿಸಿ, ಆಸಕ್ತ ನಿವಾಸಿಗಳ ಒಂದು ತಂಡ ಸರ್ಕಾರಿ ಸ್ವತ್ತನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.
- ‘ಆಳವಾದ ಅಧ್ಯಯನ’ ಮುಂದುವರೆದಿದೆ, ದಾಖಲೆಗಳ ಸಂಗ್ರಹ ಮಾಡಲು ಆರಂಭಿಸಲಾಗಿದೆ, ಚಿಕ್ಕಬಿದರೆಕಲ್ಲು ಗ್ರಾಮದ ಹಿರಿಯ ನಾಗರೀಕರಿಂದಲೂ ಮತ್ತು ನಿವೃತ್ತ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಂದ ಮಾಹಿತಿ ಸಂಗ್ರಹವೂ ಆರಂಭವಾಗಿದೆ.