12th September 2024
Share

TUMAKURU:SHAKTHIPEETA FOUNDATION

ವಿಶ್ವದ 108 ಶಕ್ತಿಪೀಠಗಳು ಭಾರತ, ಶ್ರೀ ಲಂಕಾ, ಚೀನಾ(ಟಿಬೆಟ್), ನೇಪಾಳ್, ಬಾಂಗ್ಲಾದೇಶ, ಭೂತಾನ್ ಮತ್ತು ಪಾಕಿಸ್ಥಾನ ಸೇರಿದಂತೆ 7 ದೇಶಗಳಲ್ಲಿ ಇವೆ ಎನ್ನಲಾಗುತ್ತಿದೆ. ಆಪ್ಘಾನಿಸ್ಥಾನ ದೇಶದ ಗಡಿಯಲ್ಲಿಯೇ ಪಾಕಿಸ್ಥಾನಕ್ಕೆ ಹೊಂದಿಕೊಂಡಂತೆಯೂ ಇದೆ ಎನ್ನಲಾಗುತ್ತಿದೆ. ಭಾರತ ದೇಶದ ಸುಮಾರು 23 ರಾಜ್ಯಗಳಲ್ಲಿ ಶಕ್ತಿಪೀಠಗಳು ಇವೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆ, ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ಆಯಾ ರಾಜ್ಯದ ಮುಜರಾಯಿ ಅಥವಾ ಸರಿಸಮಾನವಾದ ಇಲಾಖೆ, ಆಯಾ ಜಿಲ್ಲಾಡಳಿತದ ಮೂಲಕ ನಿಖರವಾದ ಮಾಹಿತಿ ಸಂಗ್ರಹ ಮಾಡಿ, ಆಯಾ ಸರ್ಕಾರ ಅಧಿಕೃತ ಇಲಾಖೆಯ ಮುದ್ರೆ ಹಾಕಿಸಿದ ನಂತರ ನಿಖರವಾಗಿ ಹೇಳಬಹುದಾಗಿದೆ. ಆ ಕೆಲಸವನ್ನು ಆರಂಭಿಸಲಾಗಿದೆ.

ತುಮಕೂರು ನಗರದ, ಜಯನಗರಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿರುವ ಶಕ್ತಿಭವನ ಕಟ್ಟಡದ ಮೇಲೆ ಶಕ್ತಿಪೀಠಗಳು ಇರುವ ದೇಶಗಳ ಭಾವುಟ ಹಾಕಬಹುದೇ ಎಂಬ ಚರ್ಚೆ ಆರಂಭವಾಗಿದೆ,

ದಿನಾಂಕ:01.03.2024 ರಿಂದ ದಿನಾಂಕ:01.04.2024 ಒಂದು ತಿಂಗಳ ಕಾಲ ಶಕ್ತಿಭವನ ಕಟ್ಟಡದಲ್ಲಿ ಎಲ್ಲೆಲ್ಲಿ ಏನೇನು ಇಡಬೇಕು, ಯಾವ ಮಾಹಿತಿಯನ್ನು ಹೇಗೆ ಸಂಗ್ರಹ ಮಾಡಿ ಇಡಬೇಕು, ಎಲ್ಲೆಲ್ಲಿ ಏನೇನು ಆರ್ಟಿಸ್ಟ್ ಮಾಡಿಸಬೇಕು, ಇಂಟೀರಿಯರ್ ಮತ್ತು ಎಕ್ಸ್‍ಟೀರಿಯರ್ ಹೇಗೆ ಮಾಡಿಸಬೇಕು, ಯಾವ ‘ಥೀಮ್’ ಆಳವಡಿಸಬೇಕು, ಎಂಬ ಬಗ್ಗೆ ನಮ್ಮ ಸಂಸ್ಕøತಿ, ಶಾಸ್ತ್ರ, ಜೋತಿಷ್ಯ, ವಾಸ್ತು, ಆಯಾ ಇತ್ಯಾದಿ ಮಾಹಿತಿಗಳ ಆಧಾರದ ಮೇಲೆ ಅಂತಿಮಗೊಳಿಸಲಾಗುವುದು.

ಒಂದು ಇಂಚು ಜಾಗ ಸಹ ವೇಸ್ಟ್ ಮಾಡದೇ, ಆಕ್ಚುಯಲ್ ಪ್ಲಾನ್ ಪ್ರಕಾರ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಇದೂವರೆಗೂ ಸಲಹೆ ನೀಡಿರುವ, ನೀಡುತ್ತಿರುವ, ಎಲ್ಲರ ಸಲಹೆ ಮತ್ತು ಕೋಟೇಷನ್‍ಗಳನ್ನು ಪರಿಶೀಲಿಸಿ, ಶಕ್ತಿಪೀಠ, ಅಭಿವೃದ್ಧಿ ಪೀಠ ಮತ್ತು ಜಲಪೀಠಗಳ, ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ ಮತ್ತು ಹ್ಯೂಮನ್ ಲೈಬ್ರರಿ ಮೂರು ವಿಭಾಗಗಳಿಗೂ ಅಂತಿಮಗೊಳಿಸಲಾಗುವುದು.

ಜೊತೆಗೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು ಬಗ್ಗನಡು ಕಾವಲ್ ನಲ್ಲಿನ, ಸುಮಾರು 12 ಎಕರೆ 15 ಗುಂಟೆ ಜಮೀನಿನ ‘ಶಕ್ತಿಪೀಠ ಕ್ಯಾಂಪಸ್’ ನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಚಿತ್ರಣವೂ ಸಿದ್ಧವಾಗಲಿದೆ.

ಶಕ್ತಿಪೀಠ ಫ್ಯಾಮಿಲಿಗಳ ಹೊಣೆಗಾರಿಕೆ ಇನ್ನೂ ಮುಂದೆ ಜಾಸ್ತಿಯಾಗಲಿದೆ.

ವಿಶ್ವದ ಶಕ್ತಿಪೀಠ, ಅಭಿವೃದ್ಧಿ ಪೀಠ ಮತ್ತು ಜಲಪೀಠಗಳ,  ಜ್ಞಾನವಿರುವ ಎಲ್ಲಾ ಜ್ಞಾನಿಗಳ ಮಾಹಿತಿಗಳನ್ನು ನಾಲೇಡ್ಜ್ ಬ್ಯಾಂಕ್ @ 2047 ನಲ್ಲಿ ಸಂಗ್ರಹಿಸುವ ಗುರಿಹೊಂದಲಾಗಿದೆ.

ಈ ಬಗ್ಗೆ ಜ್ಞಾನ ಇರುವವರು ಸೂಕ್ತ ಸಲಹೆ ನೀಡಲು ಈ ಮೂಲಕ ಮನವಿ.

–      ಅಗೋಚರಶಕ್ತಿ.